ಹುಣಸಗಿ: ಬಿಜೆಪಿಯೇ ಭರವಸೆ ಎಂಬ ತತ್ವದಡಿಯಲ್ಲಿ ತಾಲೂಕಿನಲ್ಲಿ ಬಿ.ಜೆ.ಪಿ ಪಕ್ಷದ ವತಿಯಿಂದ ಮತ್ತು ಶಾಸಕ ರಾಜುಗೌಡ ಅವರು ಮಾಡಿರುವ ಅಭಿವೃದ್ಧಿ ಕರಪತ್ರಗಳನ್ನು ಪಟ್ಟಣದ ವಾರ್ಡ್ ನಂಬರ 1,2 ಮತ್ತು 3 ನೇ ವಾರ್ಡುಗಳಲ್ಲಿನ ಮತದಾರರ ಮನೆ ಮನೆಗೆ ಬಿಜೆಪಿ ಕಾರ್ಯಕರ್ತರು ತೆರಳುವ ಮೂಲಕ ಶಾಸಕ ರಾಜುಗೌಡ ಅವರು ತಾಲೂಕಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಸಾಧನೆಯ ಬಗ್ಗೆ ತಿಳಿಸುವ ಮೂಲಕ ಈ ಬಾರಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜುಗೌಡ ಅವರು ಕಮಲದ ಗುರುತಿಗೆ ಮತ ಹಾಕುವುದರೊಂದಿಗೆ ಹೆಚ್ಚು ಬಹುಮತಗಳಿಂದ ಆರಿಸಿ ತರಬೇಕೆಂದು ಕಾರ್ಯಕರ್ತರಿಂದ ಮತದಾರರಲ್ಲು ತಿಳಿ ಹೇಳಲಾಯಿತು.
ಇದೇ ಸಂದರ್ಭದಲ್ಲಿ ಹೊನ್ನಕೇಶವ ದೇಸಾಯಿ, ಶೇಖರ ದೇಸಾಯಿ ಬೈಲಕುಂಟಿ, ಮಹೇಶ ಸ್ಥಾವರಮಠ, ಆನಂದ ಬಾರಿಗಿಡದ, ಮಹಮ್ಮದ ಯೂಸುಫ್ ಡೆಕ್ಕನ್, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.