ಬೆಂಗಳೂರು; ಆನೇಕಲ್ ಡಾ. ಬಿ ಆರ್ ಅಂಬೇಡ್ಕರ್ ಯುವಕರ ಸಂಘವಯಿಂದ ಮಹಿಳಾ ಘಟಕ ಅಧ್ಯಕ್ಷರಾದ ರೇಣುಕ ವಿ ಬೊಮ್ಮಸಂದ್ರರವರ ನೇತ್ರತ್ವದಲ್ಲಿ ದಿನಾಂಕ 2/11/2025 ಭಾನುವಾರರಂದು ಆಯೋಜಿಸಿಕೊಂಡಿರುವ 101 ನವ ಜೋಡಿಗಳ ಉಚಿತ ಸಾಮೂಹಿಕ ವಿವಾಹವನ್ನು ಹಮ್ಮಿಕೊಂಡಿದ್ದು ಆಸಕ್ತಿಯುಳ್ಳವರು ಈ ಸದವಕಾಶವನ್ನು ಸದುಪಯೋಗ ಪಡಿಸಿಕೊಂಡು ಹಾಗೂ ಸದರಿ ಕಾರ್ಯಕ್ರಮವನ್ನು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಂಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಜು , ಗೋವಿಂದ್ ರಾಜ್, ಸುನಿತಾ ಬಾಯಿ, ವರಲಕ್ಷ್ಮಿ, ಭಾರತಿ , ಅವಿನಾಶ್ ಸೇರಿದಂತೆ ಅನೇಕ ಗಣ್ಯರು ಭಾಗಿ