ಪತ್ರಕರ್ತ ಗುಂಡೂರಾವ್ ಅವರ ಯೋಗಕ್ಷೇಮ ವಿಚಾರಿಸಿದ ನಾಯಕರು ದಂಡು.

Ravikumar Badiger
0 Min Read

ಅಫಜಲಪುರ : ಪತ್ರಕರ್ತ ಗುಂಡೂರಾವ್ ಅಫಜಲಪುರ ಅವರು ತೆರೆದ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಅವರು ಬೆಂಗಳೂರಿನ ಕಾವೇರಿ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅರುಣಕುಮಾರ್ ಪಾಟೀಲ್ ಮತ್ತು ಮತಿನ್ ಪಟೇಲ್ ಹಾಗೂ ಸಿದ್ಧಾರ್ಥ ಬಸರಗೀಡ ಅವರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

ಪತ್ರಕರ್ತ ಗುಂಡೂರಾವ್ ಅಫಜಲಪುರ ಅವರು ತೆರೆದ ಹೃದಯ ಕಾಯಿಲೆಗೆ ಒಳಗಾಗಿದ್ದರು. ಅವರು ಬೆಂಗಳೂರಿನ ಪೋರ್ಟಿಸ್ (ಕನ್ಹಿಂಗ್ ಹ್ಯಾಮ್ ರೋಡ್) ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಕಿತ್ಸೆಯನ್ನು ಮಾಡಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ವಿಶ್ರಾಂತಿ ಪಡೆಯುತ್ತಿದ್ದು, ಅವರ ಆರೋಗ್ಯವನ್ನು ಹಲವಾರು ಗಣ್ಯರು ವಿಚಾರಿಸುತ್ತಿದ್ದಾರೆ.

Share This Article