ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ ಹಣ – ಹೇಳಿಕೆ ಖಂಡಿಸಿ ಯತ್ನಾಳ್ ಕಾರ್‌ಗೆ ಘೇರಾವ್ ಹಾಕಲು ಯತ್ನ

YDL NEWS
1 Min Read

ಆಲಮೇಲ : ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ. ಕೊಡುವುದಾಗಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಯುವಕರ ತಂಡವೊಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕಾರಿಗೆ ಘೇರಾವ್ ಹಾಕಲು ಯತ್ನಿಸಿದ ಘಟನೆ ನಡೆದಿದೆ

 

 

ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಬೆಂಗಾವಲು ಕಾರುಗಳೊಂದಿಗೆ ಹೋಗುತ್ತಿದ್ದಾಗ ಕೆಲ ಯುವಕರು ಯತ್ನಾಳ್ ಕಾರಿನ ಎದುರಿಗೆ ಬಂದು ಸುತ್ತವರಿಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 

ಇತ್ತೀಚಿಗೆ ಕೊಪ್ಪಳದಲ್ಲಿ ಹಿಂದೂ ಯುವಕನ ಕೊಲೆಯಾಗಿತ್ತು. ಈ ವೇಳೆ ಯತ್ನಾಳ್ ಅವರು ಮುಸ್ಲಿಂ ಯುವತಿಯರನ್ನ ಹಿಂದೂ ಯುವಕರು ಮದುವೆ ಆದರೆ 5 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದರು. ಈ ಮೂಲಕ ಹಿಂದೂಗಳನ್ನ ಕೊಲೆ ಮಾಡುವ ಮನಸ್ಥಿತಿಯುಳ್ಳ ಮುಸ್ಲಿಮರಿಗೆ ಉತ್ತರ ನೀಡಬೇಕಿದೆ ಎಂದು ತಿಳಿಸಿದ್ದರು. ಯತ್ನಾಳ್ ನೀಡಿದ್ದ ಈ ಹೇಳಿಕೆ ಖಂಡಿಸಿ ಯುವಕರು ಘೇರಾವ್ ಹಾಕಲು ಯತ್ನಿಸಿದ್ದಾರೆ.

Share This Article