*ಕಲಬುರ್ಗಿ
ದಿನಾಂಕ…08/08/2023
ಕಲಬುರ್ಗಿ ತಾಲೂಕಿನ ಸರಡಗಿ .ಬಿ.ಗ್ರಾಮ ಪಂಚಾಯತ್ ಚುನಾವಣೆಯಲ್ಲಿ
ಅವಿರೋಧವಾಗಿ ಆಯ್ಕೆಯಾಗಿ ಜಯವನ್ನ ಗಳಿಸಿದ್ದಾರೆ
ಮೊನ್ನೆ ಅಷ್ಟೇ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ
ಶ್ರೀ ಚಂದನ್ ಕುಮಾರ್ ಬುಳ್ಳಾ ಸರಡಗಿ .ಬಿ. ಗ್ರಾಮ ಪಂಚಾಯತ್ ಅಧ್ಯಕ್ಷರು
ಶ್ರೀಮತಿ ಶಿವಲೀಲಾ ನಾನಾಸಾಹೇಬ್ ಹೂಗಾರ್ ಸರಡಗಿ .ಬಿ. ಗ್ರಾಮ ಪಂಚಾಯತ್ ಉಪಾಧ್ಯಕ್ಷರು
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಾ ಗಳಿಸಿದಂತಹ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಸರಡಗಿ .ಬಿ. ಗ್ರಾಮದಲ್ಲಿ ಇಂದು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು
ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಚುನಾವಣಾ ಅಧಿಕಾರಿಗಳು ಮತ್ತು ಪಿಡಿಒ ಅಧಿಕಾರಿಗಳು ಸನ್ಮಾನಿಸಿ ಸಿಹಿ ತಿನಿಸಿದರು
ಗ್ರಾಮ ಪಂಚಾಯತಿಯಲ್ಲಿ ಬರುವ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ನೀರಿನ ಸಮಸ್ಯೆ ಎಲ್ಲಾ ಕೆಲಸ ಮಾಡುವ ಭರವಸೆ ನೀಡಿದರು
ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಸರಡಗಿ ಬಿ ಗ್ರಾಮದಲ್ಲಿ ಗ್ರಂಥಾಲಯ ಉದ್ಘಾಟನೆ ಮಾಡಿದ ಅಧ್ಯಕ್ಷರು
ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಲಿಸ್ ಬಾಬು ಬುಳ್ಳಾ
ಅಫಜಲಪುರ ಶಾಸಕರಾದ ಎಂ ವೈ ಪಾಟೀಲ್ ಮತ್ತು ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಸನ್ಮಾನಿಸಿ ಆಶೀರ್ವಾದ ಮಾಡಿದರು
ಈ ಸಂದರ್ಭದಲ್ಲಿ ಸರಡಗಿ ಬಿ ಗ್ರಾಮದ ಅನೇಕ ಜನರು ಮತ್ತು ಮುಖಂಡರು ಉಪಸ್ಥಿತಿ ಇದ್ದರು