ಡಾ.RVN ಗೆಲುವು ಪಾದಯಾತ್ರೆ ಮೂಲಕ ಹರಕೆ ಹೊತ್ತ ಹೊರಟ : ಹುಲಿಗೆಪ್ಪ ತಾತ.

Ravikumar Badiger
1 Min Read

*ಸುರಪುರ : ಡಾ.RVN ಗೆಲುವು ಪಾದಯಾತ್ರೆ ಮೂಲಕ ಹರಕೆ ಹೊತ್ತ ಹೊರಟ : ಹುಲಿಗೆಪ್ಪ ತಾತ*

ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಭೋವಿಗಲ್ಲಿಯಲ್ಲಿರುವ ಹುಲಿಗೆಮ್ಮದೇವಿ ದೇವಸ್ಥಾನದ ಪ್ರಧಾನ‌ ಅರ್ಚಕ ಪರಮ ಪೂಜ್ಯ ಹುಲಿಗೆಪ್ಪ ತಾತನವರು 2023 ವಿಧಾನಸಭಾ ಚುನಾವಣೆಯಲ್ಲಿ ಡಾ.ರಾಜಾ ವೆಂಕಟಪ್ಪ ನಾಯಕ ಗೆಲುವು ಸಾಧಿಸಿದರೆ ನನ್ನ ಭಕ್ತಾದಿಗಳ ಸಮ್ಮುಖದಲ್ಲಿ ಹುಲಿಗಿ ಕ್ಷೇತ್ರಕ್ಕೆ ಸುರಪುರ ನಗರದಿಂದ ಪಾದಯಾತ್ರೆ ಮೂಲಕ ಹರಕೆ ತೀರಿಸುವೆ ಎಂದು ಹರಕೆ ಹೊತ್ತ ಪ್ರಯುಕ್ತ ಇಂದು ಸುರಪುರ ನಗರದಿಂದ ಹುಲಿಗಿಗೆ ಡಾ.ರಾಜಾ ವೆಂಕಟಪ್ಪ ನಾಯಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಾದ ಯಾತ್ರೆಯ ಮೂಲಕ ಹೊತ್ತ ಹರಕೆಯನ್ನು ತೀರಿಸಲು ನನ್ನ ಭಕ್ತ ಸಮೂಹದೊಂದಿಗೆ ಕೊಪ್ಪಳ ತಾಲೂಕು ಕೊಪ್ಪಳ ಜಿಲ್ಲೆಯ ಸುಕ್ಷೇತ್ರ ಹುಲಿಗೆಮ್ಮದೇವಿ ಸನ್ನಿಧಾನಕ್ಕೆ ಪದಾಯಾತ್ರೆ ಮೂಲಕ ತೆರಳಿದರು.
ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ರಾಜಾ ವೆಂಕಟಪ್ಪ ನಾಯಕ ಅವರು ಪಾದಯಾತ್ರೆ ಹೊರಟ ತಾತಾನವರಿಗೆ ಗೌರವಪೂರ್ವಕವಾಗಿ ಸನ್ಮಾನ ಮಾಡಿ ನಿಮ್ಮ ಪ್ರಯಾಣ ಸುಖಕರವಾಗಿರಲಿಯೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಲ್ಲಣ್ಣ ಸಾಹುಕಾರ್ ಮುಧೋಳ್, ರಮೇಶ್ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ ,ಸಿದ್ದನಗೌಡ ಹಂದ್ರಾಳ, ಈರಣ್ಣ ಹಂಗರಗಿ ಶರಣು ಸಾಹುಕಾರ್ ಮುಧೋಳ್ ಇತರರು ಉಪಸ್ಥಿತರಿದ್ದರು.

*ವರದಿ : ಮೌನೇಶ ಆರ್ ಭೋಯಿ.*

Share This Article