ಪತ್ರಕರ್ತರಿಗೆ ಸರಕಾರ ಬೆನ್ನೆಲುಬಾಗಿ ನಿಲ್ಲಲಿ ಕ.ಕಾ.ಪ.ಧ್ವನಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ.

Ravikumar Badiger
2 Min Read

ಪತ್ರಕರ್ತರಿಗೆ ಸರಕಾರ ಬೆನ್ನೆಲುಬಾಗಿ ನಿಲ್ಲಲಿ ಕ.ಕಾ.ಪ.ಧ್ವನಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ

(ಸಾರ್ವಜನಿಕ ಸೇವೆಯಲ್ಲಿ ಸಕ್ರಿಯವಾಗಿ ಸೇವೆಗೈದ ಮಹಾನಿಯರಿಗೆ ಸೇವಾರತ್ನ ಪ್ರಶಸ್ತಿ ಪುರಸ್ಕಾರ)

ಅಫಜಲಪುರ ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಸೇವಾರತ್ನ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತಾಲೂಕಿನ ಸಾಮಾಜಿಕ ಸಾಧಕರಿಗೆ ಸೇವಾರತ್ನ ಪ್ರಶಸ್ತಿ ಪುರಸ್ಕರಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ, ಪತ್ರಕರ್ತರಿಗೆ ಸಾಮಾಜಿಕ ಭದ್ರತೆಯ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲಿ ಸರಕಾರ ಮಿನಾಮೇಷ ತೊರುತ್ತಿರುವುದು, ಪತ್ರಕರ್ತರಿಗೆ ಮಾಡುವ ಮೋಸ ಎಂದರು. ಅಫಜಲಪುರ ತಾಲೂಕಿನಲ್ಲಿನಷ್ಟೆ ಅಲ್ಲದೇ ಕರ್ನಾಟಕದ ಮೂಲೆಮೂಲೆಗಳಲ್ಲಿ ಪತ್ರಕರ್ತರು ಬಹಳಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ಪತ್ರಕರ್ತರ ಧ್ವನಿ ಸಂಘದ ಪದಾಧಿಕಾರಿಗಳಿಗೆ ಸರಕಾರ ಮನ್ನಣೆ ನೀಡುವುದಲ್ಲದೆ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಮ್.ವೈ.ಪಾಟೀಲ, ಪತ್ರಕರ್ತರು ಯಾವುದೇ ವಿಷಯವಾಗಲಿ‌ ಸಮಾಜಕ್ಕೆ ಬಿತ್ತರಿಸುತ್ತಾರೆ. ನೈಜತೆಗೆ ಹೆಚ್ಚು ಒತ್ತು ನೀಡಿ ಪ್ರಸಾರ ಮಾಡುವ ಕೆಲಸದಲ್ಲಿ ನಿರತರಾಗಬೇಕು ಎಂದರು. ಕೊರೊನಾ ಮಹಾಮಾರಿ ರೋಗ ಹರಡಿರುವ ಸಂದರ್ಭದಲ್ಲಿ ನಾವೆಲ್ಲರೂ ಮನೆಯಲ್ಲಿದ್ದರೆ, ಪತ್ರಕರ್ತರು ತಮ್ಮ ಜೀವದ ಹಂಗನ್ನು ತೊರೆದು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ.ಜನರಿಗೆ ಕೊರೊನಾ ಬಗ್ಗೆ ಎಚ್ಚರಿಕೆ ವಹಿಸುವಲ್ಲಿ ನಮ್ಮ ಪತ್ರಕರ್ತರು ಬಹಿಷ್ಕಾರದ ಕೆಲಸ ಮಾಡಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ.ಕಾ.ನಿ.ಪ.ಧ್ವನಿ ಸಂಘದ ಅಫಜಲಪುರ ತಾಲೂಕು ಅಧ್ಯಕ್ಷ ಯಲ್ಲಾಲಿಂಗ ಪೂಜಾರಿ ಯುವ ಪತ್ರಕರ್ತರಿಗೆ ಬೆಂಬಲವಾಗಿ ಬೆನ್ನು ತಟ್ಟುವ ರೀತಿಯಲ್ಲಿ ಸರಕಾರದ ಜೊತೆಗೆ ಹಿರಿಯ ಪತ್ರಕರ್ತರು ಸಹಕಾರ ಮಾಡಬೇಕು. ಇತ್ತಿಚಿನ ದಿನಗಳಲ್ಲಿ ನಕಲಿ ಮತ್ತು ಅಸಲಿ ಪತ್ರಕರ್ತರ ಬಗ್ಗೆ ಬಹಳಷ್ಟು ಊಹಾಪೋಹಗಳು ಕೇಳಿಬರುತ್ತಿವೆ. ನಕಲಿ ಪತ್ರಕರ್ತರು ಎಂದು ಘೋಷವಾಕ್ಯ ನೀಡುತ್ತಿರುವವರೆ, ನಕಲಿ ಪತ್ರಕರ್ತರಾಗಿರುತ್ತಾರೆ. ಯಾಕೆಂದರೆ ಒಬ್ಬ ಪತ್ರಕರ್ತ ತಾನೂ ಪತ್ರಕರ್ತ ಎಂದು ಗುರುತಿಸಿಕೊಳ್ಳುವ ಮೊದಲೇ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದ್ದರೂ, ಪತ್ರಕರ್ತರ್ಯಾರು ಕುಗ್ಗದೆ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ನಕಲಿ ಪತ್ರಕರ್ತರೆಂದರೆ ನೈಜತೆಯನ್ನು ತಿರುಚಿ ಬರೆಯುವರೆಂದು ಅಸಲಿ ಪತ್ರಕರ್ತರೆಂದರೆ ಇರುವ ಸತ್ಯವನ್ನು ತಿರುಚದೆ ಯತಾವಥಾಗಿ ಬರೆಯುವವರು. ಕೊಲವುಮ್ಮೆ ನಕಲಿ ಪತ್ರಕರ್ತರಂತೆ ಬಿಂಬಿಸಿಕೊಳ್ಳುವವರು ಸಮಾಜಕ್ಕೆ ಬೇಡವೆನಿಸಿದ ವಿಷಯಗಳನ್ನು ಬಿತ್ತರಿಸುತ್ತಾರೆ. ಹಿಂತಹ ವಿಷಯಗಳು ಸಮಾಜದಲ್ಲಿ ಹರಡಿಸುವಂತಾಗಬಾರದು ಎಂದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಮಳೇಂದ್ರ ಶ್ರೀಗಳು ವಹಿಸಿದರು. ಇದೆ ಸಂದರ್ಭದಲ್ಲಿ ಮುಖಂಡರಾದ ಮಕ್ಬೂಲ್ ಪಟೇಲ, ಕೆ.ಜಿ.ಪೂಜಾರಿ, ಮಹಾಂತೇಶ ಕೌಲಗಿ, ಮತೀನ ಪಟೇಲ್, ದಯಾನಂದ ದೊಡ್ಮನಿ, ಪಪ್ಪು ಪಟೇಲ, ನಾಗೇಶ ಕೊಳ್ಳಿ, ಶಂಕರ ಮ್ಯಾಕೇರಿ, ರಾಜು ಉಕಲಿ, ಲಕ್ಮಿಕಾಂತ ಸಿಂಗೆ,ಚಂದು ಕರಜಗಿ, ಜಮೀಲ ಗೌಂಡಿ, ಸೇರಿದಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಶ್ರೀಶೈಲ ಸಿಂಗೆ, ಹಸನಪ್ಪ ಗುಡ್ಡಡಗಿ, ಉಪಾಧ್ಯಕ್ಷ ಚನ್ನು ಹಿಂಚಗೇರಿ, ಪ್ರ.ಕಾರ್ಯದರ್ಶಿ ರಾಹುಲ ಅಣ್ಣೇನವರ, ಖಜಾಂಚಿ ರವಿ ಬಡಿಗೇರ, ಸ.ಕಾರ್ಯದರ್ಶಿ ಉಮೇಶ ಅಚಲೇರಿ ರವಿ ಗುಂಡಗುರ್ತಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share This Article