ವಿಜಯಪುರ ಮಾ ೦೧ : ಅಖಿಲ ಭಾರತ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ಹಾಗೂ ಜಿಲ್ಲಾ ಘಟಕ ವಿಜಯಪುರ ಆಶ್ರಯದೊಂದಿಗೆ ವಿಜಯಪುರ ಪ್ರವಾಸ ಮಂದಿರದಲ್ಲಿ ನಡೆದ ಪಿಂಜಾರ್ ನದಾಫ್ ಜನಾಂಗದ ಯುವಕ ಯುವತಿಯರಿಗೆ ಹಿರಿಯರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗುರುತಿಸಿ ಸನ್ಮಾನ ಸಮಾರಂಭ ಮಾಡಲಾಯಿತು ವಿಜಯಪುರದ ಜಿಲ್ಲಾ ಮತ್ತು ತಾಲ್ಲೂಕ ಸಂಘದ ಸದಸ್ಯರಿಗೆ ನೇಮಕಾತಿ ಆದೇಶ ಪತ್ರವನ್ನು ರಾಜ್ಯಾಧ್ಯಕ್ಷರ ಮುಖಾಂತರ ನೀಡಲಾಯಿತು.
ಈ ಸಂದರ್ಭದಲ್ಲಿ ಅಖಲ ಭಾರತ ಪಿಂಜಾರ್ /ನದಾಫ್ / ಮನಸೂರಿ ಸಂಘಗಳ ಮಹಾಮಂಡಳದ ( ರಿ ) ನ ರಾಜ್ಯಾಧ್ಯಕ್ಷರು ಆದ ಖಾಜಂಬರ ನದಾಫ್. ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನದಾಫ್. ಜಿಲ್ಲಾಧ್ಯಕ್ಷರು ಆದ ಲಾಲಾಸಾಬ್ ಕೋರಬು. ಜಿಲ್ಲಾ ಉಪಾಧ್ಯಕ್ಷರಾದ ಅಬ್ಬಾಸಲಿ ನದಾಫ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಬರ್ ನದಾಫ್. ಜಿಲ್ಲಾ ಸಹ ಕಾರ್ಯದರ್ಶಿ ಅಮೀನ್ ನದಾಫ್. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸೀರ ನದಾಫ್. ಹಾಗೂ ತಾಲೂಕು ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಗ್ರಾಮೀಣ ಘಟಕದ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಸದಸ್ಯರು ಪಿಂಜಾರ್ ನದಾಫ್ ಸಮುದಾಯದ ಮುಖಂಡರು ಹಿರಿಯರು ಉಪಸ್ಥಿತರಿದ್ದರು