ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ ಹಾಗೂ 18 ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕ.

YDL NEWS
1 Min Read

ಬೆಂಗಳೂರು:  ರಾಜ್ಯದಲ್ಲಿ ನಡೆಯುತ್ತಿರುವ ಹನಿ ಟ್ರ್ಯಾಪ್ ಕುರಿತು ಆಗ್ರಹಿಸಿ ಹಾಗೂ ಸರ್ಕಾರದ ವಿವಿಧ ವೈಫ್ಯಲತೆಗಳನ್ನು ಖಂಡಿಸಿ,ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದರೆ, ಕಾಂಗ್ರೆಸ್ ಸ್ಪೀಕರ್ ಅವರ ಮೂಲಕ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿದ ಸಭಾಪತಿಗಳ ನಿರ್ಣಯವು ಸಂವಿಧಾನ ವಿರೋಧಿಯಾಗಿದ್ದನ್ನು ಖಂಡಿಸಿ,ಇಂದು ಚಿಕ್ಕೋಡಿಯಲ್ಲಿ ಭಾರತೀಯ ಜನತಾ ಪಕ್ಷ ಚಿಕ್ಕೋಡಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು,ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಗಮನವಿ ಸಲ್ಲಿಸಲಾಯಿತು.

 

ಆಡಳಿತ ಪಕ್ಷದ ಜನವಿರೋಧಿ ನಿಲುವುಗಳನ್ನು ವಿರೋಧ ಪಕ್ಷವಾಗಿ ಪ್ರಶ್ನಿಸಿ, ಹೋರಾಡುವುದು ಸದಸ್ಯರ ಹಕ್ಕು.18 ಶಾಸಕರನ್ನು ಸದನದಿಂದ 6 ತಿಂಗಳು ಅಮಾನತು ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೂಲೆ ಮಾಡಿದೆ ಕಾಂಗ್ರೆಸ್ ಸರ್ವಾಧಿಕಾರಿಯಂತೆ ವರ್ತಿಸಿರುವುದು ಖಂಡನೀಯ.ಬಿಜೆಪಿ ಹೋರಾಟ ಮುಂದುವರಿಯಲಿದೆ! ಸ್ಪೀಕರ್ ಈ ತೀರ್ಮಾನವನ್ನು ತಕ್ಷಣವೇ ಹಿಂತೆಗೆದುಕೊಳ್ಳಿ ಇಲ್ಲದ್ದಿದ್ದರೆ ರಾಜ್ಯವ್ಯಾಪಿ ಹೋರಾಟ ಎದುರಿಸಬೇಕಾಗುತ್ತದೆ.

 

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ,ಸೌ.ಶಶಿಕಲಾ ಜೊಲ್ಲೆ,ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಸತೀಶ ಅಪ್ಪಾಜಿಗೋಳ,ಮಂಡಲ ಅಧ್ಯಕ್ಷರು,ಪಕ್ಷದ ಪದಾಧಿಕಾರಿಗಳು,ಮಹಿಳಾ ಮೋರ್ಚಾ ಸದಸ್ಯರು,ಯುವ ಮೋರ್ಚಾ ಸದಸ್ಯರು,ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

Share This Article