ಸುರಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯಭಿವೃಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಪಂಚಾಯತ ಯಾದಗಿರಿ, ತಾಲೂಕು ಪಂಚಾಯತ ಸುರಪುರ ವತಿಯಿಂದ ಮಾದಕ ಮುಕ್ತ ಕರ್ನಾಟಕ ಅಭಿಯಾನ ನಿಮಿತ್ಯ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ವಿಧಿಯನ್ನು ಬೋಧಿಸಿ NRLM ಸಿಬ್ಬಂದೀಯಾದ ಅಮ್ಮಪ್ಪ ಬಿಜಾಸಪೂರಕರ್ ರವರು ಮಾತನಾಡಿ, ಮದ್ದು ತರುವ ಪದಾರ್ಥಗಳನ್ನು ಸೇವಿಸಿ ವಿಧ್ಯಾರ್ಥಿಗಳು ಹಾಗೂ ಯುವಜನರು ಹಾಳಾಗುತ್ತಿದ್ದಾರೆ, ಈ ಮೂಲಕ ಅರಿವು ಮೂಡಿಸುವ ಸಲುವಾಗಿ ಮಾದಕ ಮುಕ್ತ ಕರ್ನಾಟಕ ಅಭಿಯಾನವನ್ನು ಆಚರಿಸಲಾಗುತ್ತಿದೆ, ವಿಧ್ಯಾರ್ಥಿಗಳು ಹಾಗೂ ಯುವಜನತೆ ಪ್ರತಿಜ್ಞೆ ಮಾಡಿದಂತೆ ಜೀವನದಲ್ಲಿ ನಡೆದುಕೊಳ್ಳಬೇಕೆಂದು ಹೇಳಿದರು,
ಕಾಲೇಜಿನ ಪ್ರಾಚಾರ್ಯರಾದ ಬಲಭೀಮ ನಾಯಕ ರವರು ಮಾತನಾಡಿ ಮದ್ದು ಬರುವಂತಹ ಯಾವುದೇ ವಸ್ತುವನ್ನು ಸ್ವೀಕರಿಸಲಿ ಅದು ನಶ ಎನ್ನುತ್ತವೆ, ಮಾದಕ ವಸ್ತು ಸೇವಿಸಿ ವಿದ್ಯಾರ್ಥಿಗಳು ಹಾಗೂ ಯುವ ಜನರು ಸ್ವೀಕರಿಸಿ ಅನಾಹುತಗಳಿಗೆ ದಾರಿ ಆಗುತ್ತದೆ ಅದಕೆ ಅದನ್ನು ವಿದ್ಯಾರ್ಥಿ ಯುವಜನರಿಂದ ತೊಡೆದುಹಾಕಬೇಕು ಆ ದೃಷ್ಟಿಯಿಂದ ಸರಕಾರ ಅರಿವನ್ನು ಉಂಟು ಮಾಡಲಿಕ್ಕೆ ಈ ಕಾರ್ಯಕ್ರಮವನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆಚರಿಸಲಾಗುತ್ತಿದೆ, ಈ ಅಭಿಯಾನದ ಉದ್ದೇಶವನ್ನು ತಿಳಿದುಕೊಂಡು ಆಚರಿಸಿದೆ ಆದರೆ ನಮ್ಮ ಬದುಕು ಹಸನವಾಗುತ್ತದೆ ಎಂದು ತಿಳಿಸಿದರು,
ಕಾಲೇಜಿನ ಪ್ರಾಧ್ಯಾಪಕ ವೃಂದ, ಹಾಗೂ NRLM ಸಿಬ್ಬಂದಿಗಳಾದ ಸವಿತಾ, ತಿರುಪತಿ ಮಾದೇವಿ ರವರು ಪಾಲ್ಗೊಂಡಿದರು…