ವಿಶ್ವ ಜಲ ದಿನಾಚರಣೆಯ ಅಭಿಯಾನ ಉದ್ಘಾಟನೆ – 

YDL NEWS
1 Min Read

ರಾಯಚೂರು: ವಾಟರಏಡ್ ಸಂಸ್ಥೆ ರಾಯಚೂರು ವತಿಯಿಂದ ವಿಶ್ವ ಜಲ ದಿನಾಚರಣೆಯ ಅಂಗವಾಗಿ ವಿಶೇಷ ಜಲ ಸಂರಕ್ಷಣಾ ಅಭಿಯಾನ ವಾಹನವನ್ನು ಜಿಲ್ಲಾ ಪಂಚಾಯತ್ ಆವರಣದಲ್ಲಿ ದಿನಾಂಕ 12-03-25 ರಂದು ಉದ್ಘಾಟಿಸಿ ಚಾಲನೆ ನೀಡಲಾಯಿತು. ಈ ಅಭಿಯಾನದ ಉದ್ದೇಶ ನೀರಿನ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಲುಪಿಸುವುದು, ನೀರು ವ್ಯರ್ಥ ಮಾಡದಂತೆ ಮತ್ತು ಅಂತರ್ಜಲ ಮಟ್ಟದಲ್ಲಿ ನೀರನ್ನು ಹೇಗೆ ಹೆಚ್ಚಿಸುವುದು ಎಂದು ಅರಿವು ಮುಡಿಸುವುದಾಗಿದೆ, ವಾಟರಏಡ್ ಸಂಸ್ಥೆ ರಾಯಚೂರು ಅನುಷ್ಠಾನಗೊಳಿಸಿರುವ 20 ಗ್ರಾಮ ಪಂಚಾಯತ್ ಅಧೀನದಲ್ಲಿ ಬರುವ 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಈ ವಾಹವೂ ಹೋಗಿ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ,

 

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಶಶಿಕಾಂತ ಶಿವಪುರೆ, ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ರಾಯಚೂರು, ಮತ್ತು ಶಶಿ ಕಮಳೇಕರ್, ಜಿಲ್ಲಾ ಸಂಯೋಜಕರು, ವಾಟರಏಡ್ ಸಂಸ್ಥೆ ರಾಯಚೂರು ಅಥಿತಿಗಳಾದ ಬಸವರಾಜ್, ಮಲ್ಲಮ್ಮ ಮತ್ತು ವಾಟರಏಡ್ ಸಂಸ್ಥೆಯ ತಾಲೂಕು ಸಂಯೋಜಕರಾದ ಶ್ರೀಮತಿ ಶೋಭಾ, ವಾಟರಏಡ್ ಸಂಸ್ಥೆಯ ಸಿಬ್ಬಂದಿಗಳಾದ ನಾಗರಾಜ್, ಮಮತಾ, ಶಿಲ್ಪಾ, ಪದ್ದಮ್ಮ, ಮೀನಾಕ್ಷಿ, ರಾಜೇಶ್ವರಿ, ಗಂಗಾಧರ್, ಶಂಕರಪ್ಪ, ಶರಣಬಸವ ಮತ್ತು ಜಿಲ್ಲಾ ಪಂಚಾಯತ್ ಸಿಬ್ಬಂದಿವರ್ಗದವರು ಉಪಸ್ಥಿತರಿರುತ್ತಾರೆ.

Share This Article