ಯಾದಗರಿ ಜಿಲ್ಲೆಗೆ 34 ಸಾವಿರ ಕೋಟಿ ಖರ್ಚಾದರೂ ಪ್ರಗತಿ ಇಲ್ಲ! ಹಾಕಿದ ಹಣವೆಲ್ಲ ಎಲ್ಲೋಯ್ತು?

YDL NEWS
6 Min Read

ಯಾದಗಿರಿ ಮೇ: 34 ಸಾವಿರ ಕೋಟಿ ರು. ಖರ್ಚಾದರೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕ ಭಾಗದ, ಅದರಲ್ಲೂ ವಿಶೇಷವಾಗಿ ಯಾದಗಿರಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಕನಿಷ್ಠ ಮೂಲಸೌಕರ್ಯಗಳಿಂದಲೂ ಸಹ ಈ ಪ್ರದೇಶ ವಂಚಿತವಾಗಿದೆ, ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯ ಡಾ.ಎಸ್.ಟಿ.ಬಾಗಲಕೋಟೆ ಆತಂಕ ವ್ಯಕ್ತಪಡಿಸಿದರು.

ಹಿಂದುಳಿದ ಪ್ರದೇಶದಲ್ಲಿ ಇದುವರೆಗಿನ ಅಭಿವೃದ್ಧಿ ಹೊಂದಿರುವ ಆಧಾರದ ಮೇಲೆ, ಹೊಸದಾಗಿ ಸೂಚ್ಯಂಕ ನಿಗದಿಪಡಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ, ಸಂಘ-ಸಂಸ್ಥೆಗಳೊಂದಿಗೆ ಬುಧವಾರ ಇಲ್ಲಿನ ಜಿಲ್ಲಾ ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಾ. ಡಿ. ಎಂ. ನಂಜುಂಡಪ್ಪ ಅವರ 2002ರ ವರದಿಯಲ್ಲಿ ಅಂದಿನ 176 ತಾಲೂಕುಗಳನ್ನು ಹಿಂದುಳಿದ, ಅತಿ ಹಿಂದುಳಿದ, ಅತ್ಯಂತ ಹಿಂದುಳಿದ ಹಾಗೂ ಅಭಿವೃದ್ಧಿ ಹೊಂದಿದ ತಾಲೂಕುಗಳೆಂದು 4 ವರ್ಗದಲ್ಲಿ ವರ್ಗೀಕರಿಸಿ, ಅದಕ್ಕನುಗುಣವಾಗಿ ಅನುದಾನ ಹಂಚಿಕೆಗೆ ಶಿಫಾರಸ್ಸು ಮಾಡಿದ್ದರು. ಅದರಂತೆ, 2007-08 ರಿಂದ 2015-16ರ ವರೆಗೆ ಹಾಗೂ ತದನಂತರ ಒಟ್ಟಾರೆ 45 ಸಾವಿರ ಕೋಟಿ ರು.ಗಳು ಹಿಂದುಳಿದ ಪ್ರದೇಶಕ್ಕೆ ಹಂಚಿಕೆಯಾಗಿ, 34 ಸಾವಿರ ಕೋಟಿ ರು.ಗಳು ಖರ್ಚಾದರೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕ ಭಾಗದ, ಅದರಲ್ಲೂ ವಿಶೇಷವಾಗಿ ಯಾದಗಿರಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಕನಿಷ್ಠ ಮೂಲಸೌಕರ್ಯಗಳಿಂದಲೂ ಸಹ ಈ ಪ್ರದೇಶ ವಂಚಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಗರ ಪ್ರದೇಶಗಳು ಅಭಿವೃದ್ಧಿಯ ವೇಗ ಪಡೆದುಕೊಂಡಿವೆ ನಿಜ. ಆದರೆ, ಗ್ರಾಮೀಣ ಪ್ರದೇಶಗಳು ತೀರಾ ಹಿಂದುಳಿದ ಕಾರಣ ಮಾನವ ಸೂಚ್ಯಂಕದಲ್ಲಿ ಹಿಂದುಳಿದಿದ್ದೇವೆ. ಗ್ರಾಮೀಣರ ತಲಾ ಆದಾಯ ಹೆಚ್ಚಿಸಲು ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದ ಡಾ. ಎಸ್. ಟಿ. ಬಾಗಲಕೋಟೆ, ಕೃಷಿಯೇ ಪ್ರಧಾನವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ತಲಾ ಆದಾಯ ವೃದ್ಧಿಯಾಗದ ಹೊರತು ಮಾನವ ಸೂಚ್ಯಂಕ ಅಭಿವೃದ್ಧಿಯಲ್ಲಿ ಪ್ರಗತಿ ಅಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಇಂದಿನ ದಿನಮಾನದಲ್ಲಿ ಖಾಸಗಿ ಕ್ಷೇತ್ರವು ತೀವ್ರಗತಿಯಲ್ಲಿ ಪ್ರಗತಿ ಕಾಣುತ್ತಿರುವುದರಿಂದ, ಪ್ರದೇಶದ ಅಭಿವೃದ್ಧಿಗೆ ಅವರ ಸಹಕಾರ ಸಹ ಅಗತ್ಯವಿದೆ. ಸಿ.ಎಸ್.ಆರ್. ನೆರವು ಪಡೆಯುವುದು, ಪಿ.ಪಿ.ಪಿ. ಮಾದರಿಯಲ್ಲಿ ಯೋಜನೆ ಸಾಕಾರಗೊಳಿಸುವ ಅವಶ್ಯಕತೆ ಇದೆ ಎಂದರು.

ಯಾದಗಿರಿಯಲ್ಲಿ 55-76 ಮಕ್ಕಳಿಗೆ ಓರ್ವ ಶಿಕ್ಷಕ !

ದಕ್ಷಿಣ ಕರ್ನಾಟಕದ ಭಾಗದಲ್ಲಿ 25-30 ಮಕ್ಕಳಿಗೆ ಓರ್ವ ಶಿಕ್ಷಕರಿದ್ದರೆ, ಯಾದಗಿರಿಯಲ್ಲಿ 55-76 ಮಕ್ಕಳಿಗೆ ಓರ್ವ ಶಿಕ್ಷಕರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣ ಕ್ಷೇತ್ರ ಸುಧಾರಣೆ ಹೇಗೆ ಎಂದು ಪ್ರಶ್ನಿಸಿದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯ ಡಾ.ಎಸ್.ಟಿ.ಬಾಗಲಕೋಟೆ ಅಚ್ಚರಿ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 3,175 ಶಿಕ್ಷಕರ ಕೊರತೆ ಇರುವುದರಿಂದ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ಆಗುತ್ತಿಲ್ಲ. 371ಜೆ ಕಾಯ್ದೆಯಡಿ ನೇಮಕಾತಿ, ಮುಂಬಡ್ತಿ ಪಡೆದ ನೌಕರರಿಗೆ ಪ್ರದೇಶದಲ್ಲಿ 10 ವರ್ಷ ಕಡ್ಡಾಯ ಸೇವೆ ಇದ್ದರೂ, ಅಲ್ಪಾವಧಿಯಲ್ಲಿ ಬೇರೆ ಜಿಲ್ಲೆಗೆ ವರ್ಗಾವಣೆ ಹೊಂದುತ್ತಿರುವುದು ಶೈಕ್ಷಣಿಕ ಕುಂಠಿತಕ್ಕೆ ಪ್ರಮುಖ ಕಾರಣ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಇಲ್ಲದ ಕಾರಣ ಎಸ್.ಎಸ್.ಎಲ್.ಸಿ. ಮುಗಿಸಿದ ನಂತರ ಇಲ್ಲಿನ ಮಕ್ಕಳು ಉನ್ನತ ಶಿಕ್ಷಣಕ್ಕೆ ಸೇರಲು ಬೇರೆ ಜಿಲ್ಲೆ ಕಡೆ ಮುಖ ಮಾಡುತ್ತಿದ್ದು, ಇದನ್ನು ತಪ್ಪಿಸಲು ಇಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಜಿಲ್ಲೆಗೆ ಕರೆತರಬೇಕಿದೆ ಎಂದು ಡಿ.ಡಿ.ಪಿ.ಐ ಚೆನ್ನಬಸಪ್ಪ ಮುಧೋಳ ಶಿಕ್ಷಣ ಇಲಾಖೆಯ ಕುರಿತು ಸಭೆಯಲ್ಲಿ ಹೇಳಿದರು.

ಜಿಲ್ಲೆಯ 451 ಪ್ರಾಥಮಿಕ ಶಾಲೆಗಳ ಪೈಕಿ 94 ಶಾಲೆಗೆ ಶಿಕ್ಷಕರಿಲ್ಲ. 142 ಶಾಲೆಗೆ ಒಬ್ಬನೇ ಶಿಕ್ಷಕ. ಗಣಿತ, ವಿಜ್ಞಾನ, ಇಂಗ್ಲೀಷ್ ಶಿಕ್ಷಕರ ಕೊರತೆ ಹೆಚ್ಚಿದೆ. ಪ್ರಾಥಮಿಕ ಶಿಕ್ಷಣ ನೀಡಲು ಮೂಲಸೌಕರ್ಯ ಕೊರತೆ ಇರುವುದರಿಂದ ಹೇಗೆ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವುದು. ಎಲ್ಲಾ ಮಕ್ಕಳ ಏಕಲವ್ಯವಾಗಲು ಸಾಧ್ಯ ಇಲ್ಲ. ಪ್ರತಿಭೆ ಇದ್ದು, ಮಕ್ಕಳು ಅವಕಾಶ ವಂಚಿತರಾಗಿದ್ದಾರೆ ಎಂದು ವೆಂಕಣ್ಣ ಡೊಳ್ಳೆಗೌಡರ್ ಅಭಿಪ್ರಾಯಪಟ್ಟರು. ಮುಂದೆ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಎಲ್ಲ ಶಿಕ್ಷಕರ ಭರ್ತಿ ಮಾಡಿದ ನಂತರ ಉಳಿದ ಪ್ರದೇಶಕ್ಕೆ ಪರಿಗಣಿಸಲಿ ಎಂದು ನಿವೃತ್ತ ಉಪನ್ಯಾಸಕ ಪ್ರೊ. ಸಿ.ಎಂ.ಪಟ್ಟೆದಾರ ಅವರು ಒತ್ತಾಯ ಮಾಡಿದರು.

ಸಮಾಲೋಚಣೆ ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಡಿ.ಎಚ್.ಓ., ತೋಟಗಾರಿಕೆ ಉಪನಿರ್ದೇಶಕರು, ಮೀನುಗಾರಿಕೆ ಉಪನಿರ್ದೇಶಕರು, ಕೆ.ಕೆ.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು., ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಸೇರಿದಂತೆ ಅನೇಕರು ಯಾದಗಿರಿ ಜಿಲ್ಲೆಯ ಅಭಿವೃದ್ಧಿ ಕುರಿತು ಸಲಹೆಗಳನ್ನು ನೀಡಿದರು.

ಜಿಲ್ಲೆಯ ಭೌಗೋಳಿಕ ಇತಿಹಾಸದ ಜೊತೆಗೆ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಎಸ್.ಡಿ.ಪಿ. ಯೋಜನೆಯಡಿ ಕೈಗೊಂಡ ಕೆಲಸ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ವಿವರಿಸಿದರು. ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯೆ ಸಂಗೀತಾ ಕೆ. ಎನ್., ಜಿಲ್ಲಾ ಪಂಚಾಯತ್ ಸಿ.ಇ.ಓ ಲವೀಶ್ ಓರಡಿಯಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಹಿಂದುಳಿದ ಪ್ರದೇಶದಲ್ಲಿ ಇದುವರೆಗಿನ ಅಭಿವೃದ್ಧಿ ಹೊಂದಿರುವ ಆಧಾರದ ಮೇಲೆ, ಹೊಸದಾಗಿ ಸೂಚ್ಯಂಕ ನಿಗದಿಪಡಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ, ಸಂಘ-ಸಂಸ್ಥೆಗಳೊಂದಿಗೆ ಬುಧವಾರ ಯಾದಗಿರಿ ಜಿಲ್ಲಾ ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯ ಡಾ.ಎಸ್.ಟಿ.ಬಾಗಲಕೋಟೆ ಗ್ರಾಮೀಣ ಮಹಿಳೆಯರ ಅಹವಾಲು ಆಲಿಸಿದರು.

Share This Article