ಅಮಾಯಕರ ಸಾವಿಗೆ ಕಾರಣವಾದ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ನಕಸೇ ಆಗ್ರಹ

YDL NEWS
1 Min Read

ಯಾದಗಿರಿ: ನಗರದ ಡಾ.ಎಸ್.ಎಂ. ಬಿರಾದಾರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಗುವಿನ ಸಾವಿಗೆ ಸಂಬAಧಿಸಿದAತೆ ಎಫ್.ಐ.ಆರ್. ಆಗಿದ್ದು, ಈ ಪ್ರಕರಣಗಳಿಗೆ ಸಂಬAಧಿಸಿದAತೆ 5 ಜನರ ವಿರುದ್ಧ ಎಫ್.ಐ.ಆರ್. ಆಗಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕ ದೂರಿದೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ದ ಜಿಲ್ಲಾ ಮಹಿಳಾ ಘಟಕದ ಅದ್ಯಕ್ಷ ಕು. ಶ್ರೀದೇವಿ ಎನ್. ಕಟ್ಟಮನಿ ಮಾತನಾಡಿ, ಆಸ್ಪತ್ರೆಯಿಂದ ಈಗಾಗಲೇ ಇಂತಹ ಪ್ರಕರಣಗಳು ವರದಿಯಾಗಿದ್ದು, 45 ದಿನಗಳ ಶಿಶುವಿಗೆ ಅವಧಿ ಮುಗಿದ ವ್ಯಾಕ್ಸಿನ್ ಹಾಕಿದ ಪ್ರಕರಣ ಸೇರಿದಂತೆ ರಾಮಸಮುದ್ರ ಗ್ರಾಮದ ಚೇಳು ಕಡಿದ ಮಗುವಿನ ಸಾವಿನ ಪ್ರಕರಣಗಳು ನಡೆದಿವೆ

ಈ ಎಲ್ಲ ಘಟನೆಗಳಿಗೆ ಆಸ್ಪತ್ರೆ ವೈದ್ಯರು ಹಾಗೂ ಹೆಚ್ಚುವರಿ ಔಷಧ ನಿಯಂತ್ರಕರು ಸೇರಿದಂತೆ 5 ಜನರ ಮೇಲೆ ಯಾದಗಿರಿ ನಗರ ಠಾಣೆಯಲ್ಲಿ ಕಳೆದ ಮಾರ್ಚ ತಿಂಗಳಲ್ಲಿಯೇ ಪ್ರಕರಣ ದಾಖಲಾಗಿದೆ.

ನಗರದ ದೇವಮ್ಮ ಎನ್ನುವವರ 45 ದಿನದ ಮಗುವಿಗೆ 2022 ರಲ್ಲಿಯೇ ಅವಧಿ ಮುಗಿದ ವ್ಯಾಕ್ಸಿನ್ ಅನ್ನು ಈ ವರ್ಷದ ಫೆಬ್ರವರಿ 28 ರಂದು ಲಸಿಕೆ ಹಾಕಿದ್ದಾರೆ.

ಇದನ್ನು ತಿಳಿದ ಮಗುವಿನ ತಂದೆ ದೂರು ದಾಖಲಿಸಿ ಎಫ್.ಐ.ಆರ. ಮಾಡಿಸಿದ್ದಾರೆ. ಇದಲ್ಲದೇ ಚೇಳು ಕಡಿತಕ್ಕೊಳಗಾದಮಗುವಿಗೂ ಚಿಕಿತ್ಸೆ ಸರಿಯಾಗಿ ನೀಡದೇ ಮಗುವಿನ ಸಾವಿಗೆ ಕಾರಣರಾಗಿದ್ದಾರೆ. ವಾಸವದಲ್ಲಿ ಹೃದಯ ತಜ್ಞರಾಗಿರುವ ಇವರು ತಮಗೆ ಸಂಬAಧವಿಲ್ಲದ ಚಿಕಿತ್ಸೆಗಳು ನೀಡಿ ಅಮಾಯಕರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಈಗಾಗಲೇ ಮಾನವಹಕ್ಕುಗಳ ಆಯೋಗ ಡಿಎಚ್‌ಓ ಕಚೇರಿಯವರು ಭೇಟಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಆದ್ದರಿಂದ ಕೂಡಲೇ 10 ದಿನದಲ್ಲಿ ಆಸ್ಪತ್ರೆ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಆಸ್ಪತ್ರೆಗೆ ಮುಳ್ಳುಬೇಲಿ ಹಚ್ಚಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆನೀಡಿದರು.

ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಗಳು ಸೂಕ್ತ ಕ್ರಮದ ಭರವಸೆ ನೀಡಿದರು.

Share This Article