ಶಾರ್ಟ್ ಸರ್ಕ್ಯೂಟ್‌ನಿಂದ ತಹಶೀಲ್ದಾರ್ ಕಚೇರಿಯಲ್ಲಿ ಅಗ್ನಿ ಅವಘಡ; ಮಹತ್ವದ ದಾಖಲೆಗಳು ಭಸ್ಮ

YDL NEWS
1 Min Read

ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲು

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ನಾಡ ತಹಶಿಲ್ದಾರ ಕಚೇರಿಯಲ್ಲಿ (Tahsildar office) ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಮಹತ್ವದ ದಾಖಲೆಗಳು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

ರಾತ್ರಿ ವೇಳೆ ಅಗ್ನಿ ಅವಘಡ ನಡೆದಿದ್ದು ಕಂಪ್ಯೂಟರ್, ಸಾರ್ವಜನಿಕರ ಮಹತ್ವದ ದಾಖಲೆಗಳು, ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಮಳೆಯಿಂದ ಹಳೆಯ ಕಟ್ಟಡದ ಗೋಡೆಗಳು ಒದ್ದೆಯಾಗಿದ್ದು ಅಲ್ಲಲ್ಲಿ ಸೋರಿದ್ದರಿಂದ ಶಾರ್ಟ್ ಸರ್ಕ್ಯೂಟ್ (Short circuit) ಉಂಟಾಗಿದೆ. ಇನ್ವೊಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಇದರಿಂದ ಕಚೇರಿಯಲ್ಲಿನ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿವೆ.

ಎರಡನೇ ಬಾರಿ ನಾಡ ತಹಶಿಲ್ದಾರ ಕಚೇರಿ ಅಗ್ನಿದುರಂತಕ್ಕೆ ಈಡಾಗಿದೆ. ಮಹತ್ವದ ದಾಖಲೆಗಳು ಸುಟ್ಟು ಹೋಗಿರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article