ಈ ಬಾರಿ ಅಫಜಲಪೂರ ಮತಕ್ಷೇತ್ರದಲ್ಲಿ ಬಿಜೆಪಿ ಅರಳುತ್ತದೆ:- ಮಾಲಿಕಯ್ಯಾ ಗುತ್ತೇದಾರ

Ravikumar Badiger
1 Min Read

ಅಫಜಲಪೂರ:- ಪಟ್ಟಣದಲ್ಲಿ ಇಂದು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರು ಮತ್ತು ಬಿಜೆಪಿ ಅಭ್ಯರ್ಥಿ ಶ್ರೀ ಮಾಲಿಕಯ್ಯಾ ಗುತ್ತೇದಾರರು ಈ ಬಾರಿ ಅಫಜಲಪೂರ ಮತಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸುವುದು ಖಚಿತ ಎಂದರು. ಕೆಂದ್ರ ಸರ್ಕಾರದ ಹಲವಾರು ಯೋಜನೆಗಳು ನನಗೆ ಶ್ರೀರಕ್ಷೆ ಮತ್ತು ತಾಲ್ಲೂಕಿನಲ್ಲಿ ನಾನು ಮಾಡಿದ ಹಲವಾರು ಅಭಿವೃದ್ಧಿ ಕೆಲಸ ಜನರು ನೋಡಿದ್ದಾರೆ ನನಗೆ ಜಯಶಾಲಿಯಾಗಿ ಮಾಡುತ್ತಾರೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರು ಅಮರನಾಥ ಪಾಟೀಲ ಶ್ರೀ ಮಾಲಿಕಯ್ಯಾ ಗುತ್ತೇದಾರ ಅಂತಹ ಹಿರಿಯ ವ್ಯಕ್ತಿಗಳು ಈ ಅಫಜಲಪೂರ ತಾಲ್ಲೂಕಿಗೆ ಬಹಳ ಅವಶ್ಯಕತೆ ಇದೆ ಈ ಬಾರಿ ಕಮಲದ ಹೂವಿಗೆ ಮತ ಹಾಕಿ ಇವರನ್ನು ವಿಧಾನಸಭೆಗೆ ಕಳುಹಿಸಿ ಅಫಜಲಪೂರ ಇನ್ನೂ ಎತ್ತರಕ್ಕೆ ಬೆಳೆದು ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

Share This Article