ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ

Ravikumar Badiger
2 Min Read

ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ.ಅಫಜಲಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರುವುದು ನಿಶ್ಚಿತ ಎಂದ ಬಿ.ಎಸ್.ಯಡಿಯೂರಪ್ಪ

 

ಅಫಜಲಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲಿಕಯ್ಯ ಗುತ್ತೆದಾರ ಪರ ಮತಬೇಟೆ ಆರಂಭಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಅಫಜಲಪುರ ಪಟ್ಟಣದ ಮಳೇಂದ್ರ ಶಿವಾಚಾರ್ಯ ಕಲ್ಯಾಣ ಮಂಟಪದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮಾಲಿಕಯ್ಯ ಗುತ್ತೆದಾರ,ನಮ್ಮ ನಾಯಕರಾದ ಯಡಿಯೂರಪ್ಪನವರು ತಮ್ಮ ಇಳಿ ವಯಸ್ಸಿನಲ್ಲಿ
ಕಾಲಿಗೆ ಚಕ್ರಕಟ್ಟಿಕೊಂಡು ಎಲ್ಲಾ ಕ್ಷೇತ್ರಕ್ಕೆ ತಿರುಗಾಡಿ ಪಕ್ಷ ಅಧಿಕ್ಕಾರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.ಅವರ ಕಾರ್ಯ ವೈಖರಿ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದರು.ನಾನು ನಮ್ಮ ತಂದೆ ಯನ್ನು ಕಳೆದು ಕೊಂಡು ಇಪ್ಪತ್ತು ವರ್ಷವಾಗಿದೆ.ಆದರೆ ಯಾವತ್ತೂ ನಮ್ಮ ತಂದೆಯವರನ್ನ ಕಳೆದುಕೊಂಡ ಆತಂಕ ನನ್ನಲ್ಲಿ ಕಂಡಿಲ್ಲ.ಏಕೆಂದರೆ ನಿವೇಲ್ಲರೂ ನಮ್ಮ ತಂದೆ ತಾಯಿಯಗಳಂತೆ ನಮ್ಮ ಜೊತೆಗಿದ್ದಿರಿ.
ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಸೇರಿ ರೈತರಿಗೆ ಹತ್ತು ಸಾವಿರ ರೂಪಾಯಿ ಕೋಡಿತ್ತಿದಾರೆ.ಇದರಿಂದ ಸಾಕಷ್ಟು ಅನುಕುಲವಾಗಿದೆ ಎಂದರು. ಇದು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ರೈತರಿಗೆ ಸಹಾಯ ಮಾಡಲು ಆಗುತ್ತಿರಲಿಲ್ಲ.ಇದು ನನ್ನ ಕೊನೆಯ ಚುನಾವಣೆ ಆಗಿದ್ದು, ಈ ಬಾರಿ ನನ್ನಗೆ ಆರ್ಶಿವದಿಸಿ ಎಂದರು..

ನಂತರ ಮಾತನಾಡಿದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ
ನಮ್ಮ ಮಾಲಿಕಯ್ಯ ಗುತ್ತೆದಾರ ಜನಪ್ರಿಯ ನಾಯಕರು ಈ ಭಾಗಕ್ಕೆ ಅನೇಕ ರಿತಿಯಲ್ಲಿ ಅಭಿವೃದ್ಧಿ ಪರ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಇಪ್ಪತ್ತು ಸಾವಿರ ಅಂತರದಿಂದ ಗೆಲ್ಲಿಸಬೆಕು.ಅದಲ್ಲದೇ ಮಾಲಿಕಯ್ಯ ಗುತ್ತೇದಾರ ಕುಟುಂಬದ ಸದಸ್ಯರೊಬ್ಬರನ್ನ ಪ್ರತಿಸ್ಪರ್ಧಿಯಾಗಿ ನಿಲ್ಲಿಸಿದ್ದಾರೆ. ಹಿಂತಹ ಕುತಂತ್ರ ರಾಜಕಾರಣಿಗಳಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಜನರಿಗೆ ಮನವಿ ಮಾಡಿದರು.ತಳವಾರ ಸಮುದಾಯವನ್ನ ಎಸ್ ಟಿ ಗೆ ಸೆರಿಸಿದವರು ನಾವು,
ಭಾಗ್ಯಲಕ್ಷಿ ಬಾಂಡ ಯೋಜನೆ ಮಾಡಿದ್ದು, ಯಡಿಯೂರಪ್ಪ ಎನ್ನುವುದು ಮರೆಯುವಂತ್ತಿಲ್ಲ.
ನಾನು ಅಧಿಕಾರದಲ್ಲಿದ್ದಾಗ, ವಿಶೇಷ ವಾಗಿ ರೈತರಿಗಾಗಿ ಬಹಳಷ್ಟು ಅನುಕೂಲಕರ ಬಜೆಟ್ ಮಂಡನೆ ಮಾಡಿದ್ದೇನೆ.ರಾಜ್ಯದಲ್ಲಿ ರೈತರ ಕಲ್ಯಾಣ ಆಗಬೇಕಾಗಿದೆ.ನಾನು ಭರವಸೆ ಕೋಡುತ್ತೆನೆ ರಾಜ್ಯದಲ್ಲಿ ಮಾಲಿಕಯ್ಯ ಗುತ್ತೇದಾರ ಸೇರಿ 150 ಹೆಚ್ಚು ಸ್ಥಾನ ಗೇಲ್ಲುತ್ತೇವೆ.ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ದೇಶದ ಪ್ರಧಾನ ಮಂತ್ರಿಗಳ ಬಗ್ಗೆ ಬಹಳಷ್ಟು ಹಗುರವಾಗಿ ತಮ್ಮ ಭಾಷಣದಲ್ಲಿ ಮಾತನಾಡಿದ್ದಾರೆ.ಮೋದಿ ಒಬ್ಬ ವಿಷ ತುಂಬಿದ ಹಾವಿದ್ದಂತೆ ಎಂಬ ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆ ಅವರ ಘನತೆಗೆ ಒಳ್ಳೆಯದಲ್ಲ.ಅವರಿಗೆ ಮೇ 10 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮುಖಾಂತರ ಅವರ ಮಾತಿಗೆ ತಕ್ಕ ಉತ್ತರ ನೀಡಬೇಕು ಎಂದರು.

ಅಫಜಲಪುರ ಜನತೆ ಬಹಳಷ್ಟು ಪ್ರಬುದ್ಧರಿದ್ದಿರಿ, ಈ ಬಾರಿ ಬಿಜೆಪಿ ಅಭ್ಯರ್ಥಿ ಮಾಲಿಕಯ್ಯ ಗುತ್ತೇದಾರ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿ ವಿಧಾನ ಸೌದಕ್ಕೆ ಕಳುಹಿಸಿ ಕೊಡಬೇಕು ಎಂದು ಕೈ ಮುಗಿದು ಮತದಾರರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಲಿಕಯ್ಯ ಗುತ್ತೆದಾರ. ಶೈಲೇಶ್ ಗುಣಾರಿ.ಅಮಿತ್ ಟಕ್ಕರ.ಅವಣ್ಣ ಮ್ಯಾಕೇರಿ.ಚಂದಮ್ಮ ಪಾಟೀಲ. ಬಸವರಾಜ ಸಪ್ಪನಗೋಳ. ರೀತಿಶ ಗುತ್ತೆದಾರ. ಹೀಗೆ ಇನ್ನು ಅನೇಕ ನಾಯಕರು ಉಪಸ್ಥಿತರಿದ್ದರು.

Share This Article