ಶ್ರೀಸಂಗಣ್ಣ ಭೀಮಪ್ಪ ಕಾಮನಕೇರಿ (ಕಂಟೆಪ್ಪಗೋಳ) 73 ವರ್ಷಗಳಾಗಿದ ಇವರು ಬುಧವಾರ ವಿಧಿವಶವಾಗಿದ್ದಾರೆ .

KTN Admin
1 Min Read

ಯಾದಗಿರಿ :: ಮೂಲತಃ ಬ.ಬಾಗೇವಾಡಿ ತಾಲೂಕಿನ ಕಾಮನಕೇರಿ ಗ್ರಾಮದವರಾದ ಇವರು 13ನೇ ವಯಸ್ಸಿಗೆ ನಾರಾಯಣಪೂರ ಜಲಾಶಯ ನಿರ್ಮಾಣದ ಕೆಲಸದಲ್ಲಿ ತೊಡಗಿಕೊಂಡವರು ನಂತರ 1984ರಲ್ಲಿ ಲಿಂಗಸೂರಿನ ರೋಡಲಬಂಡಾ ಕ್ಯಾಂಪನಲ್ಲಿ ಹೋಟೆಲ ಪ್ರಾರಂಭಿಸಿ ಹಲವಾರು ಜನರಿಗೆ ಉದ್ಯೋಗ ನೀಡಿ ಸಾಹುಕಾರ ಸಂಗಣ್ಣ ಎಂದೇ ಖ್ಯಾತಿ ಪಡೆದವರು.
ಸಹಾಯ ಕೇಳಿ ಬಂದವರಿಗೆ ಸಾದ ಕೊಡುಗೈ ದಾನಿಗಳಾಗಿದ ಸಂಗಣ್ಣ ಸಾಹುಕಾರ:
ರೋಡಲಬಂಡಾ ಕ್ಯಾಂಪಿನ ಸುತ್ತಮುತ್ತಲಿನ ಜನರು ಯಾವುದೇ ರೀತಿಯ ಹಣ ಸಹಾಯ ಕೇಳಿ ಬಂದರೆ ಅಂತಹ ಜನರಿಗೆ ಹಿಂದೂ ಮುಂದೆ ನೋಡದೆ ಸಹಾಯಕ್ಕೆ ಮುಂದಾಗುತ್ತಿದ್ದರು. ಸಂಗಣ್ಣ ಸಾಹುಕಾರ ಜನಸೇವೆಗೆ ಸದಾ ಮುಂದಾಗುತ್ತಿದ್ದರು ಎಂದು ಕ್ಯಾಂಪಿನ ಸುತ್ತಮುತ್ತ ಜನರು ಹೇಳುತ್ತಾರೆ.
ಮೃತರರಿಗೆ ಮೂರು ಜನ ಹೆಣ್ಣು ಮಕ್ಕಳು ಮೂರು ಜನ ಗಂಡು ಮಕ್ಕಳಿದು ಹೋರಾಟಗಾರ ಹಾಗೂ ಪತ್ರಕರ್ತ ಅಮರೇಶಣ್ಣ ಕಾಮನಕೇರಿಯವರ ತಂದೆಯವರಾಗಿದ್ದಾರೆ. ಇವರ ತಂದೆಯ ಅಣ್ಣ ತಮ್ಮಂದಿರು 6 ಜನ ಒಬ್ಬ ಸೋದರ ಅತ್ತೆ ಇದ್ದು 600ಕ್ಕೂ ಅಧಿಕ ರಕ್ತ ಸಂಬಂಧಿಗಳು ಅಪಾರ ಬಂದು ಬಳಗದವರಿದ್ದಾರೆ. ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 12 ಗಂಟೆಗೆ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ