ಸಾಮಾಜಿಕ ನ್ಯಾಯದಡಿ ಸರ್ಕಾರ ರಚನೆ ಆಗುವುದೆ ಆಗಿದರೆ  ಕೋಲಿ ಬೆಸ್ತ ಮೋಗವೀರ ಸಮಾಜದ ಭಟ್ಕಳ ಶಾಸಕರಾದ ಮಾಂಕಾಳ ವೈಧ್ಯರಿಗೆ ಸಚಿವ ಸ್ಥಾನ ನೀಡಬೇಕು ಅಮರೇಶಣ್ಣ ಕಾಮನಕೇರಿ ಆಗ್ರಹ

KTN Admin
2 Min Read

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಮೂರನೆ ಅತೀ ದೊಡ್ಡ ಸಮುದಾಯದ ಆಗಿರುವ ಕೋಲಿ ಬೆಸ್ತ ಮೊಗವೀರ ಸಮಾಜವನ್ನು ಎಲ್ಲ ಪಕ್ಷಗಳ ಕಡೆಗಣಿಸುತ್ತಿರುವುದು ಖಂಡನಿಯ ಅಹಿಂದ ನಾಯಕರು ಎಂದು ಕರೆಸಿಕೊಳ್ಳುವ ಮಾನ್ಯ ನಿಯೋಜಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನಾಳೆ ನಡೆಯಲಿರುವ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಮಾಜದ ಶಾಸಕರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾದ ಅಮರೇಶಣ್ಣ ಕಾಮನಕೇರಿ ಹೇಳಿದರು.

ಚುನಾವಣೆ ಪೂರ್ವದಲ್ಲಿ ಎಲ್ಲ ಪಕ್ಷಗಳು ಕೋಲಿ ಬೆಸ್ತ ಮೋಗವೀರ ಸಮಾಜಕ್ಕೆ ಆದ್ಯತೆ ನೀಡುತ್ತೆವೆ ಸಾಮಾಜಿಕ ನ್ಯಾಯ ನೀಡುತ್ತೆವೆ ಎಂದು ಬೊಬ್ಬೊ ಹಾಕಿ ಮತ ಪಡೆಯುತ್ತವೆ. ಚುನಾವಣೆಯ ನಂತರ ಸಾಮಾಜಿಕ ನ್ಯಾಯದಡಿಯಲ್ಲಿ ಅಧಿಕಾರ ನೀಡಬೇಕಾದಗ ಸಮಾಜವನ್ನು ಕಡೆಗಣಿಸುತ್ತವೆ ಎಂದು ಪಕ್ಷ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು


ರಾಜ್ಯದಲ್ಲಿ ಕೋಲಿ ಬೆಸ್ತ ಮೋಗವೀರ ಸಮಾಜಕ್ಕೆ ಸಚಿವ ಸ್ಥಾನ ನೀಡುವಲ್ಲಿ ಮಾತ್ರ ಪಕ್ಷದ ಮಲತಾಯಿ ಧೋರಣೆ ತೋರುತ್ತವೆ ಕಾಂಗ್ರೆಸ ಪಕ್ಷವು ಹಿಂದುಳಿದ ಜನಾಂಗದ ಪರ ಕೋಲಿ ಬೆಸ್ತ ಮೋಗವೀರ ಅಭಿವೃದ್ಧಿಯೇ ನಮ್ಮ ಪಕ್ಷದ ಗುರಿ ಎಂದು ಹೇಳುತ್ತಾ ಬಂದಿದೆ. ಮಲ್ಲಿಕಾರ್ಜುನ ಖರ್ಗೆ, ಕಲಬುಗಿಯಲ್ಲಿ ಸಿದ್ದರಾಮಯ್ಯ ಮೈಸೂರುನಲ್ಲಿ, ಡಿಕೆ ಶಿವಕುಮಾರ ಕನಕಪುರದಲ್ಲಿ ಕೋಲಿ ಬೆಸ್ತ ಮೋಗವೀರ ಸಮಾಜದ ಮತಗಳಿಂದ ರಾಜಕೀಯವಾಗಿ ಬೆಳೆದ್ದಾರೆ. ಉನ್ನತ ಹುದ್ದೆಗಳನ್ನು ಸರ್ಕಾರ ಮತ್ತು ಪಕ್ಷದಲ್ಲಿ ಅನುಭವಿಸುತ್ತಿದ್ದಾರೆ ಎತ್ತರಕ್ಕೂ ಬೆಳೆದಿದ್ದಾರೆ. ಬೆಳೆಸಿದ ಸಮಾಜಕ್ಕೆ ಮಾತ್ರ ಅನ್ಯಾಯ ಮಾಡುತ್ತಿದ್ದಾರೆ. ಕೋಲಿ ಬೆಸ್ತ ಮೋಗವೀರ ಸಮಾಜಕ್ಕೆ ಸಿದ್ದರಾಮಯ್ಯ ನವರ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ಸಮಾಜದ ಶಾಸಕರಾದ ಭಟ್ಕಳದ ಶಾಸಕರಾದ ಮಾಂಕಾಳ ವೈಧ್ಯರಿಗೆ ನೀಡಬೇಕು ಅದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ಪರ ನಿರಂತರ ದುಡಿಯೂತ್ತಿರುವ ಯುವ ನಾಯಕರಿಗೆ ಮುಂಬೈ ಕರ್ನಾಟಕದಿಂದ ಎಂ ಎಲ್ ಸಿ, ಕಲ್ಯಾಣ ಕರ್ನಾಟಕದಿಂದ ಎಂ ಎಲ್ ಸಿ, ಮೈಸೂರು ಕರ್ನಾಟಕ ಎಂ ಎಲ್ ಸಿ  ಮೂರು ವಿಭಾಗದಿಂದ ಮಾಡಬೇಕು ಮೂರು ವಿಭಾಗದಲ್ಲಿ ಕೋಲಿ ಬೆಸ್ತ ಸಮಾಜ ಹೆಚ್ಚನ ಪ್ರಮಾಣದಲ್ಲಿ ಇದೆ ಒಬ್ಬ ಎಂ ಎಲ್ ಗೆ ಮತ್ತು ಒಬ್ಬ ಎಂ ಎಲ್ ಸಿ ಗೆ ಸಮಾಜದ ಕೋಟ್ಟದಲ್ಲಿ ಇಬ್ಬರಿಗೆ ಸಚಿವರಾಗಿ ಮಾಡಬೇಕು ಎಂದು ಆಗ್ರಹಿಸಿದರು

ನಾಳೆ ರಚನೆ ಆಗಲಿರುವ ಸಂಪುಟವು ಸಾಮಾಜಿಕ ನ್ಯಾಯ ದಡಿಯಲ್ಲಿ ಆಗುವುದೆ ಆಗಿದ್ದರೆ ಬೆಸ್ತ ಸಮಾಜಕ್ಕೆ ಮಲ್ಲಿಕಾರ್ಜುನ ಖರ್ಗೆ,ಸಿದ್ದರಾಮಯ್ಯ,ಡಿಕೆ ಶಿವಕುಮಾರ್ ಸ್ಥಾನವನ್ನು ನೀಡಲೆ ಬೇಕು ಎಂದು‌ ಹೇಳಿದರು

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ