ಕೋಲಿ ಬೆಸ್ತ ಸಮಾಜದ ಹೋರಾಟಗಾರಾದ ಅಮರೇಶಣ್ಣ ನವರನು ಎಂಎಲಸಿ ಮಾಡಿ : ಧನರಾಜಗೌಡ ಎಸ ಪಾಟೀಲ್ ಆಗ್ರಹ

KTN Admin
1 Min Read

ಯಾದಗಿರಿ : ಕೋಲಿ ಕಬ್ಬಲಿಗ ಬೆಸ್ತ ಸಮುದಾಯದ ಯುವ ನಾಯಕರು, ಹೋರಾಟಗಾರರು, ಹಿಂದುಳಿದ ವರ್ಗ ಹಾಗೂ ಬುಡಕಟ್ಟು ಸಮುದಾಯಗಳ ಜನರ ಅಭಿವೃದ್ಧಿ ಮತ್ತು ಜನರಿಗೆ ಸೌಲಭ್ಯಗಳನ್ನು ಕೋಡಿಸುವ ಸಲುವಾಗಿ ನಿರಂತರ ಹಳ್ಳಿಯಿಂದ ದಿಲ್ಲಿ ವರಗೆ ಹೋರಾಟ ಮಾಡಿತ್ತಿರಯವ ಏಕೈಕ ಯುವ ನಾಯಕ. ಹಿಂದುಳಿದ ಹಾಗೂ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಿಸ್ವಾರ್ಥ ಸಮಾಜ ಸೇವಕರು ಕೋಲಿ ಸಮಾಜದ ನಾಯಕರು ಆಗಿರುವ ಅಮರೇಶಣ್ಣ ಕಾಮನಕೇರಿಯವರಿಗೆ ಕರ್ನಾಟಕ ಸರ್ಕಾರ ನಾಮನಿರ್ದೇಶಿತ ವಿಧಾನಪರಿಷತ್ ಸದಸ್ಯರನ್ನಾಗಿಮಾಡಬೇಕೆಂದು ಧನರಾಜಗೌಡ ಎಸ್ ಪಾಟೀಲ ಆಗ್ರಹಿಸಿದರು.

 

ರಾಜ್ಯದಲ್ಲಿ 45ಲಕ್ಷಕ್ಕೂ ಅಧಿಕ ಜನ ಸಂಖ್ಯೆ ಹೊಂದಿರುವ ಕೋಲಿ ಬೆಸ್ತ ಸಮಾಜವು ಹಿಂದುಳಿದ ವರ್ಗದ ನಾಯಕರಾದ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಸಂಪೂರ್ಣವಾಗಿ ಬೆಂಬಲಿಸಿದೆ.ಹಿಂದಳಿದ ವರ್ಗಗಳು ಬಲಾಡ್ಯ ಸಮುದಾಯಗಳ ಜೊತೆ ಜೊತೆಗೆ ಸಾಗಬೇಕಾದರೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹೋರಾಟಗಾರರಿಗೆ ರಾಜಕೀಯ ಅಧಿಕಾರ ದೊರೆಯಬೇಕು. ಅಂದಾಗ ಬಸವಣ್ಣನವರು ಸಾರಿದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಸಿಕ್ಕಂತಾಗುತ್ತದೆ. ರಾಜ್ಯ ನಾಲ್ಕನೇ ದೊಡ್ಡ ಸಮುದಾಯದವಾಗಿರು ಕೋಲಿ ಬೆಸ್ತ ಸಮಾಜವು ರಾಜಕೀಯವಾಗಿ ತೀರಾ ಹಿಂದುಳಿದೆ ಕಾರಣ ರಾಜಕೀಯವಾಗಿ ‌ ನಾಯಕರು ಅವಕಾಶ ಕಲ್ಪಿಸಿದೆ ಇರುವುದು. ಯುವ ನಾಯಕರು ಹೋರಾಟಗಾರರಿಗೆ ರಾಜಕೀಯ ಅವಕಾಶವನ್ನು ಸಿದ್ದರಾಮಯ್ಯ ನವರೆ ಸೃಷ್ಟಿಸಬೇಕು ಎಂದು ಕೋಲಿ ಸಮಾಜ ಯುವ ಮುಖಂಡರಾದ ಧನರಾಜಗೌಡ ಎಸ ಪಾಟೀಲ್ ಅಹಿಂದ ನಾಯಕರು ರಾಜ್ಯ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ನವರಿಗೆ ಮನವಿ ಮಾಡಿದರು.

ಅಮರೇಶಣ್ಣ ಕಾಮನಕೇರಿಯವರು ನಿರಂತರ ಕೋಲಿ ಬೆಸ್ತ ಸಮುದಾಯದ ಪರವಾಗಿ ದಿಟ್ಟ ಹೋರಾಟ ಮಾಡುತ್ತಾ ಬರುತ್ತಿದ್ದಾರೆ.ಕೋಲಿ ಸಮಾಜವನ್ನು ಎಸ ಟಿ ಸೇರಿಸಬೇಕು ಎಂದು ದಿವಂಗತ ವಿಠ್ಠಲ್ ಹೆರೂರ ನಂತರ ನಿಸ್ವಾರ್ಥ ಹೋರಾಟ ಮಾಡುತ್ತಿರುವ ಏಕೈಕ ಹೋರಾಟಗಾರರು ಕೋಲಿ ಬೆಸ್ತ ಸಮುದಾಯವು ಆಶಾಕಿರಣ ಆಗಿರುವ ಅಮರೇಶಣ್ಣ ಕಾಮನಕೇರಿಯವರಿಗೆ ಎಂಎಲಸಿ ಮಾಡಿ ಕೋಲಿ ಸಮಾಜದ ಅಭಿವೃದ್ಧಿಗೆ ರಾಜ್ಯದ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷ ಸಹಕರಿಸಬೇಕು ಎಂದು ಆಗ್ರಹಸಿದರು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ