ದಾಖಲೆ ನೀಡಿ ಆರೋಪಿಸಿ ಹಾಲಿ ಶಾಸಕರಿಗೆ ಸಾವಾಲು ಸೋಲುವ ಭೀತಿಯಲ್ಲಿ ಹತಾಶೆ. ಮಾನಪ್ಪ ವಜ್ಜಲ್.ವಾಗ್ದ್ದಾಳಿ

KTN Admin
1 Min Read

 

ಲಿಂಗಸುಗೂರ ವರದಿ.25 :; ಲಿಂಗಸುಗೂರ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಪಕ್ಷದ ಲಿಂಗಸುಗೂರ ಅಭ್ಯರ್ಥಿ ಯಾದ ಮಾಜಿ ಶಾಸಕ ಮಾನಪ್ಪ ವಜ್ಜಲ ಸುಳ್ಳು ಆರೋಪ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಯಾದ ಡಿ.ಎಸ್ ಹುಲಗೇರಿ ದಾಖಲೆ ಕೊಟ್ಟು ರುಜುವಾತು ಮಾಡಿದರೆ ನಾನು ರಾಜಕೀಯ ನೀರ್ವುತ್ತಿ ಘೋಷಣೆ ಮಾಡುತ್ತೇನೆ ಶಾಸಕ ಡಿ ಎಸ್ ಹೂಲಗೇರಿ ಇವರು ಹೇಳಿದ ಮಾತು ಸತ್ಯಕ್ಕೆ ದೂರವಾಗಿದೆ ಒಂದು ವೇಳೆ ಹಾಲಿ ಶಾಸಕರು ನಾನು ನನ್ನ ಕುಟುಂಬದ ಮೇಲೆ ಆರೋಪ ಮಾಡಿದ ನಾಯಕನಿಗೆ ಕ್ಷೇತ್ರದ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಗೆಲ್ಲುವುದು ಖಚಿತ ಎಂದು ತಿಳಿದು ಸೋಲುವ ಹತಾಶೆ ಬಾವನೆಯಿಂದ ಇಲ್ಲ ಸಲ್ಲದ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು ಇದೆ 30ರಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಇವರು ಲಿಂಗಸುಗೂರು ಕ್ಷೇತ್ರದಲ್ಲಿ ಪಕ್ಷದ ಕಾರ್ಯಕ್ರಮ ಭಾಗವಹಿಸಿ ಪಕ್ಷದ ಗೆಲುವಿಗೆ ಕೇಂದ್ರ ಸರ್ಕಾರದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ಮಾತನಾಡುವ ಮುಖಾಂತರ ಅಭಿವೃದ್ಧಿ ಯೋಜನೆಗಳ ಜನರಿಗೆ ಮನದಟ್ಟು ಮಾಡುವ ಮುಖಾಂತರ ಪಕ್ಷದ ಹೈಕಮಾಂಡ್ ನಿರ್ಧರಿಸಿದೆ ಎಂದು ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರು ತಿಳಿಸಿದರು . ಕಾಂಗ್ರೆಸ್ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ನನ್ನ ಅವಧಿಯಲ್ಲಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಆದರೆ ಹಾಲಿ ಶಾಸಕ ಡಿ ಎಸ್ ಹೂಲಗೇರಿ ಇವರು ಹಟ್ಟಿ ಮುದಗಲ್ ಪಟ್ಟಣದ ಜನರಿಗೆ ಕುಡಿಯುವ ನೀರು ಕೊಡಲು ವಿಫಲರಾಗಿದ್ದಾರೆ ಅಭಿವೃದ್ಧಿ ವಿಷಯಕ್ಕೆ ಬಂದರೆ ದಾಖಲೆ ಬಿಡುಗಡೆ ಮಾಡ್ಲಿ ಎಂದು ವಜ್ಜಲ್ ಹಾಲಿ ಶಾಸಕರಿಗೆ ಸವಾಲು ಹೊಡ್ಡುವ ಮೂಲಕ ರಾಜಕೀಯ ತಂತ್ರಗಾರಿಕೆ ಬಳಸಿದ್ದಾರೆ .
ಈ ಸಂದರ್ಭದಲ್ಲಿ ಬಿಜೆಪಿಯ ಲಿಂಗಸುಗೂರ ಕ್ಷೇತ್ರದ ಚುನಾವಣೆ ಉಸ್ತುವಾರಿ ಮಲ್ಲರೆಡ್ಡಿ ಉಮೇಶ ಸಜ್ಜನ್ ಬಿಜೆಪಿ ತಾಲ್ಲೂಕು ಅದ್ಯೆಕ್ಷ ರಾದ ಲೆಕ್ಕಿಹಾಳ ಗಿರಿಮಲ್ಲನ ಗೌಡ ಇನ್ನಿತರರು ಇದ್ದರು

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ