ಪ್ರಿ ಪ್ರಿ ವಾಸ್ತವ .ನೀವೇನಾದ್ರೂ ಅನ್ಕೋಳಿ…ಆದ್ರೆ ವಾಸ್ತವ ಮಾತ್ರ ಒಪ್ಕೊಳ್ಳದೆ ಇರೋಕಾಗೋಲ್ಲ. ಜಾಣ ಮತ್ತು ಜಾಣತನದ ಕಿರು ಮುನ್ನೋಟ

KTN Admin
3 Min Read

ಸರ್ಕಾರಗಳು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ ಜಾರಿಗೆ ತಂದವು. ವಿದ್ಯಾರ್ಥಿಗಳ ತಿರುಗಾಟ ಹೆಚ್ಚಾಯ್ತು. ಆಗ ಒಂದು ನಿಯಮ ಜಾರಿಗೊಳಿಸಿದರು. ಅದು ಏನೆಂದರೆ ಅಂತರ್ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಬಸ್ ಪಾಸ್ ಪರಿಗಣಿಸುವುದಿಲ್ಲ ಅನ್ನೋದು.ಜನಪರ ಪ್ರಿ ಎಂದು ಹೇಳಿ ಜಾಣ ಮತ್ತು ಜಾಣನತ ತೋರಿಸಿದರು ಆದ್ರೂ ನಮ್ಮ ವಿದ್ಯಾರ್ಥಿಗಳು ಸಹಿಸಿಕೊಂಡು ಹೊಂದಿಕೊಂಡರು. ಮೇಲಿಂದ ಮೇಲೆ ನಮ್ಮೂರಿಗೆ ಸರಿಯಾಗಿ ಬಸ್ ಬಿಡುತ್ತಿಲ್ಲ. ನಮ್ಮೂರಿಗೆ ಎಕ್ಸಪ್ರೆಸ್ ಬಸ್ ನಿಲ್ಲುತ್ತಿಲ್ಲ ಎಂದೆಲ್ಲ ಗೋಳು ತೋಡಿಕೊಂಡರೂ ಪ್ರಯೋಜನ ಶೂನ್ಯವಾಗಿತ್ತು.

ಪ್ರಸ್ತುತ ಆಡಳಿತಕ್ಕೆ ಬಂದಿರುವ ಸರ್ಕಾರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಆದೇಶ ಮಾಡಿದೆ. ಜೊತೆಗೆ ಒಂದಿಷ್ಟು ಶರತ್ತುಗಳನ್ನು ಹಾಕಿದೆ. ಉಚಿತ ಯೋಜನೆ ಸಾಮಾನ್ಯ, ಎಕ್ಸಪ್ರೆಸ್ ಬಸ್ಸುಗಳಿಗೆ ಮಾತ್ರ ಅನ್ವಯ ಅಂತ ಹೇಳಿದೆ. ಇದಲ್ಲದೆ ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಅಂತ ಹೇಳಿ ಬ್ರ್ಯಾಕೇಟ್ನಲ್ಲಿ ಎಲ್ಲಾ ಅಂತರ್ ರಾಜ್ಯ ಸಾರಿಗೆ ಅನುಸೂಚಿಗಳನ್ನು ಹೊರತುಪಡಿಸಿ ಎಂದಿದೆ… ಇದನ ನೋಡ್ರಿದರೆ ಜಾಣ ಮತ್ತು ಜಾಣತನ ಅನಿಸದೆ ಇರದು

ಅದು ಹೇಗಂತೀರಾ?….ಕೆಳಗಿದೆ ಓದಿ…

ಉದಾಹರಣೆ 1:
ನಮ್ಮೂರು ಮುದ್ದೇಬಿಹಾಳ. ಮುದ್ದೇಬಿಹಾಳದಿಂದ ರಾಯಚೂರಿಗೆ ಹೋಗಬೇಕಾಗಿದೆ. ನೀವು ರಾಜ್ಯದೊಳಗೆ ಸಂಚರಿಸುವ ಬಸ್ಸುಗಳನ್ನು ಮಾತ್ರ ಹತ್ತಬೇಕು ಅಂದರೆ ಮಾತ್ರ ನಿಮಗೆ ಪ್ರಯಾಣ ಉಚಿತ. ಒಂದು ವೇಳೆ ನೀವು ಆಂಧ್ರಪ್ರದೇಶದಲ್ಲಿ ಬರುವ ಮಂತ್ರಾಲಯ ಬಸ್ಸಿಗೆ ಹತ್ತಿದಿರೋ ನೀವು ಪೂರ್ಣ ಪ್ರಯಾಣ ದರವನ್ನೇ ಕೊಡಬೇಕು (ಇದು ಇನ್ನುಂದೆ ಗೊತ್ತಾಗುತ್ತದೆ).

ಉದಾಹರಣೆ 2: ನಮ್ಮೂರು ಮುದ್ದೇಬಿಹಾಳದಿಂದ ಯಾದಗಿರಿಗೆ ಹೋಗಬೇಕಿದೆ. ನೀವು ರಾಜ್ಯದೊಳಗೆ ಸಂಚರಿಸುವ ಬಸ್ಸುಗಳನ್ನು ಮಾತ್ರ ಹತ್ತಬೇಕು ಅಂದರೆ ಮಾತ್ರ ಪ್ರಯಾಣ ಉಚಿತ. ಒಂದು ವೇಳೆ ನೀವು ತೆಲಂಗಾಣ ರಾಜ್ಯದಲ್ಲಿ ಬರುವ ಹೈದರಾಬಾದ್ ಬಸ್ಸಿಗೆ ಹತ್ತಿದಿರೋ ನೀವು ಪೂರ್ಣ ಚಾರ್ಜ್ ಕೊಡಬೇಕಾಗುತ್ತದೆ (ಇದು ಇನ್ಮುಂದೆ ಗೊತ್ತಾಗುತ್ತದೆ)

ಉದಾಹರಣೆ 3: ನಮ್ಮೂರು ಮುದ್ದೇಬಿಹಾಳದಿಂದ ಬೆಳಗಾವಿಗೆ ಹೋಗಬೇಕಿದೆ. ನೀವು ರಾಜ್ಯದೊಳಗೆ ಸಂಚರಿಸುವ ಬಸ್ಸುಗಳನ್ನು ಮಾತ್ರ ಹತ್ತಬೇಕು ಅಂದರೆ ಮಾತ್ರ ಪ್ರಯಾಣ ಉಚಿತ. ಒಂದು ವೇಳೆ ನೀವು ಗೋವಾ ರಾಜ್ಯದಲ್ಲಿ ಬರುವ, ವಾಸ್ಕೋ, ಮಡಗಾಂವ್ ಮುಂತಾದ ಬಸ್ಸುಗಳಿಗೆ ಹತ್ತಿದಿರೋ ನೀವು ಪೂರ್ಣ ಚಾರ್ಜ್ ಕೊಡಬೇಕಾಗುತ್ತದೆ (ಇದು ಇನ್ಮುಂದೆ ಗೊತ್ತಾಗುತ್ತದೆ)

ಉದಾಹರಣೆ 4: ನಮ್ಮೂರು ಮುದ್ದೇಬಿಹಾಳದಿಂದ ವಿಜಯಪುರಕ್ಕೆ ಹೋಗಬೇಕಿದೆ. ನೀವು ರಾಜ್ಯದೊಳಗೆ ಸಂಚರಿಸುವ ಬಸ್ಸುಗಳನ್ನು ಮಾತ್ರ ಹತ್ತಬೇಕು ಅಂದರೆ ಮಾತ್ರ ಪ್ರಯಾಣ ಉಚಿತ. ಒಂದು ವೇಳೆ ನೀವು ಮಹಾರಾಷ್ಟ್ರ ರಾಜ್ಯದಲ್ಲಿ ಬರುವ ಸೊಲ್ಲಾಪೂರ, ಸಾಂಗಲಿ, ಮೀಜರ್, ಪುಣೆ, ಮುಂಬೈ ಬಸ್ಸುಗಳಿಗೆ ಹತ್ತಿದಿರೋ ನೀವು ಪೂರ್ಣ ಚಾರ್ಜ್ ಕೊಡಬೇಕಾಗುತ್ತದೆ (ಇದು ಇನ್ಮುಂದೆ ಗೊತ್ತಾಗುತ್ತದೆ)

ಈ ಮೇಲಿನ ಉದಾಹರಣೆಗಳಿಂದ ನಿಮಗೆ ಅರ್ಥ ಆಗಿರಬಹುದು ಅನ್ಕೋತೀನಿ…ಸಾರಿಗೆ ಸಂಚಾರ ಬಳಸಿದಾಗ ಅನುಭವಕ್ಕೂ ಸಿಗಲಿದೆ.

ಇನ್ನೊಂದು ಗಹನವಾದ ವಿಷಯ:
ಬಹುಶ: ಹೀಗಾಗಬಹುದೇನೋ…
ಇನ್ಮುಂದೆ ಬಹಳಷ್ಟು ಬಸ್ಸುಗಳ ನಾಮಫಲಕ (ಎಲ್ಲಿಂದ?- ಎಲ್ಲಿಗೆ?) ಬದಲಾಗಬಹುದು. ಉದಾಹರಣೆಗೆ ಮುದ್ದೇಬಿಹಾಳ-ವಿಜಯಪುರ ಬೋರ್ಡ್ ಕಡಿಮೆ ಆಗಿ ಮುದ್ದೇಬಿಹಾಳ-ಸೊಲ್ಲಾಪೂರ, ಮುದ್ದೇಬಿಹಾಳ-ಮೀರಜ, ಮುದ್ದೇಬಿಹಾಳ-ಸಾಂಗ್ಲಿ, ಮುದ್ದೇಬಿಹಾಳ-ಸಾತಾರ, ಮುದ್ದೇಬಿಹಾಳ-ಪುಣೆ, ಮುದ್ದೇಬಿಹಾಳ-ಮುಂಬೈ, ಮುದ್ದೇಬಿಹಾಳ-ರಾಯಚೂರ ಬೋರ್ಡ್ ಕಡಿಮೆಯಾಗಿ ಮುದ್ದೇಬಿಹಾಳ-ಮಂತ್ರಾಲಯ ಎಂದು, ಮುದ್ದೇಬಿಹಾಳ-ಯಾದಗಿರಿ, ಮುದ್ದೇಬಿಹಾಳ-ಕಲಬುರ್ಗಿ ಬೋರ್ಡ್ ಕಡಿಮೆಯಾಗಿ ಮುದ್ದೇಬಿಹಾಳ- ಹೈದರಾಬಾದ್ ಎಂದು, ಮುದ್ದೇಬಿಹಾಳ-ಬೆಳಗಾವಿ, ಮುದ್ದೇಬಿಹಾಳ-ಧಾರವಾಡ, ಮುದ್ದೇಬಿಹಾಳ-ಹುಬ್ಬಳ್ಳಿ ಬೋರ್ಡ್ ಕಡಿಮೆಯಾಗಿ ಮುದ್ದೇಬಿಹಾಳ-ಪಣಜಿ, ಮುದ್ದೇಬಿಹಾಳ-ವಾಸ್ಕೋ, ಮುದ್ದೇಬಿಹಾಳ-ಮಡಗಾಂವ್ …ಹೀಗೆಲ್ಲ ಬದಲಾಗಿ ಅಂತರ ರಾಜ್ಯ ಸಾರಿಗೆ ಅನುಸೂಚಿಗಳ ಸಂಖ್ಯೆ ಹೆಚ್ಚಬಹುದು (ಇದು ಸಾಧ್ಯತೆ ಮಾತ್ರ) ಈ ರೀತಿಯಲ್ಲಿ ಸರ್ಕಾರ ಮಾಡದೆ ಇರಲಿ

ಈ ಮೇಲಿನ ಸಾಧ್ಯತೆಗಳು ಜಾರಿಯಾದಲ್ಲಿ ಮಹಿಳೆಯರು ಉಚಿತ ಪ್ರಯಾಣದ ಬಸ್ಸುಗಳಲ್ಲಿ ಸಂಚರಿಸಲು ದಿನಗಟ್ಟಲೆ ಕಾಯುವ ಕಾಲ ಬರಬಹುದು ಅಥವಾ ರಾಜ್ಯದೊಳಗೆ ಸಂಚರಿಸುವ ಮಾರ್ಗಸೂಚಿಗಳ (ಬಸ್ಸುಗಳ) ಸಂಖ್ಯೆ ಕಡಿಮೆ ಆಗಿ, ಕಾರ್ಯಾಚರಣೆ ನಡೆಸುವ ಬೆರಳೆಣಿಕೆಯಷ್ಟು ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರ ಒತ್ತಡ ಹೆಚ್ಚಬಹುದು (ಇದು ಸಾಧ್ಯತೆ ಮಾತ್ರ). ಈಗೂ ಸರ್ಕಾರ ಮಾಡಬಾರದು ಅನುವುದು ಲೇಖನ ಆಶಯ

ಕಾಂಗ್ರೆಸ್ ಸರ್ಕಾರ ಜನಪರ ಯೋಜನೆ ಜಾರಿಗೊಳಿಸಿದೆ ನಿಜ. ಇದು ಶ್ಲಾಘನೀಯವೂ ಹೌದು, ಒಂದು ರೀತಿ ಅಪಾಯಕಾರಿಯೂ ಹೌದು. ಆದರೆ ಸಾಧಕ-ಬಾಧಕ ಅಧ್ಯಯನ ಮಾಡಬೇಕಿತ್ತು. ಆದರೂ ನಮ್ಮ ಜನ ದಡ್ಡರು…ಇದ್ದುದರಲ್ಲೇ ಖುಷಿ ಕಾಣುವಂಥವರು..ಅಲ್ವೆ?

ಈ‌ಲೇಖ ಕಾಂಗ್ರೆಸ್ ವಿರೋಧಿ ಅಲ್ಲ. ಅಥವಾ ಬಿಜೆಪಿ ಒಲೈಕೆಗೂ ಅಲ್ಲ ಸರ್ಕಾರದ ವಿರೋಧಿಯೂ ಅಲ್ಲ. ಅಂತರ ರಾಜ್ಯ ಕ್ಕೆ ಹೊಂದಿಕೊಂಡಿರು ಜಿಲ್ಲೆಗಳ ಮತ್ತು ಅಂತರ ರಾಜ್ಯದಲ್ಲಿ ಕೂಲಿ ಮಾಡಿ ಬದುಕುತ್ತಿರುವ ತಾಲ್ಲೂಕಗಳ ಜನರ ವಾಸ್ತವಿಕ ಪರಿಚಯ
ಈ ಲೇಖನದಿಂದ ವಿಮರ್ಶೆ ಪರಾಮರ್ಶೆ ಎರಡು ಕಂಡುಕೋಳ ಬಹುದು ಅನುವುದ ನನ್ನ ಆಶಯ

ಡಿ.ಬಿ.ವಡವಡಗಿ,
ಪತ್ರಕರ್ತರು,
ಮುದ್ದೇಬಿಹಾಳ, ವಿಜಯಪುರ ಜಿಲ್ಲೆ
ಮೋ: 9901992029

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ