ವಿಜಯನಗರ ಜಿಲ್ಲೆ ಕೂಡ್ಲಿಗಿ : ಶ್ರೀಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳನ್ನು , ಸರ್ವರೂ ಸೌಹಾರ್ದತೆಯಿಂದ ಆಚರಿಸುವ ಮೂಲಕ. ಸಮಾಜದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು , ಪೊಲೀಸ್ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ತಿಳಿಸಿದರು. ಅವರು ಪಟ್ಟಣದ ಪ್ರವಾಸಿ ಮಂದಿರಲ್ಲಿ ಜರುಗಿದ , ಶ್ರೀಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬ ಶಾಂತಿ ಸಭೆಯಲ್ಲಿ ಮಾತನಾಡಿದರು. ಶ್ರೀಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ತರುವ ಮೆರವಣಿಗೆ , ಹಾಗೂ ಶ್ರೀಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ. ಮತ್ತು ಮೂರ್ತಿ ವಿಸರ್ಜನೆ ಮಾಡುವ ವೇಳೆಯಲ್ಲಿ , ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಆಯೋಜಕರು ಅಗತ್ಯ ಮುಂಜಾಗ್ರತೆ ಅನುಸರಿಸಬೇಕು. ಬೆಂಕಿ , ನೀರು , ವಿದ್ಯುತ್ ಅವಘಡಗಳು. ಕೋಮು ಗಲಭೆಗಳು ಗುಂಪು ಘರ್ಷಣೆಗಳು , ಯಾವುದೇ ಅಹಿತಕರ ಘಟನೆಗಳು ಜರುಗದಂತೆ ತೀವ್ರ ಎಚ್ಚರವಹಿಸಬೇಕಿದೆ. ಹಬ್ಬ ಸರಡಗರ ಸಂಭ್ರಮದಿಂದ ಶಾಂತಿಯುತವಾಗಿ ಜರುಗಿಸುವ ಮೂಲಕ , ಸಾರ್ವಜನಿಕರು ಆಯೋಜಕರು ನಾಗರೀಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದರು. ಇಲಾಖೆಯ ನಿಯಮಾವಳಿಗಳನ್ನು , ಆಯೋಜಕರು ಖಡ್ಡಾಯವಾಗಿ ಪಾಲಿಸತಕ್ಕದ್ದು ಎಂದರು. ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನೆ ಮಾತನಾಡಿ , ಶಾಂತಿ ಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು , ಇಲಾಖೆ ಸಾಕಷ್ಟು ಸಿಬ್ಬಂದಿ ನೇಮಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು. ತಹಶಿಲ್ದಾರರಾದ ವಿ.ಕೆ.ನೇತ್ರಾವತಿ ಮಾತನಾಡಿದರು. ಸಿಪಿಐ ಪ್ರಹ್ಲಾಸ್ ಆರ್ ಚನ್ನಗಿರಿ , ಪಿಎಸ್ಐ ಸಿ.ಪ್ರಕಾಶ್. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಸೇರಿದಂತೆ , ಪ ಪಂ ಸದಸ್ಯರು. ವಿವಿದ ಜನಪ್ರತಿನಿಧಿಗಳು. ಗಣ್ಯರು , ಪಪಂ ಮುಖ್ಯಾಧಿಕಾರಿ , ಜೆಸ್ಕಾಂ ಅಧಿಕಾರಿ , ಅಧಿಕಾರಿಗಳು ವೇದಿಕೆಯಲ್ಲಿದ್ದರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಯ , ಶ್ರೀಗಣೇಶೋತ್ಸವ ಸಮಿತಿಗಳ ಆಯೋಜಕರು , ಹಿಂದೂ ಮುಸಲ್ಮಾನ್ ಸಮುದಾಯದ ಮುಖಂಡರು. ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ವಿವಿದ ಜನಾಂಗಗಳ ಸಮಾಜದ ಮುಖ್ಯಸ್ಥರು , ಸಮುದಾಯಗಳ ಮುಖಂಡರು ,ವಿವಿದ ಪಕ್ಷಗಳ ಪ್ರಮುಖರು. ನಾಗರೀಕರು , ವಿವಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.