ಕಲಬುರ್ಗಿ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳ್ಯಾಳ. ಈ ಶಾಲೆಯಲ್ಲಿ ವಿದ್ಯಾರ್ಥಿಗಳು ದಿನನಿತ್ಯ ಭಯದ ವಾತಾವರಣದಲ್ಲೇ ಅಭ್ಯಾಸ ಮಾಡುವಂಥ ವಾತಾವರಣ ನಿರ್ಮಾಣವಾಗಿದೆ. ನಾಲ್ಕು ಕೋಣೆಗಳು ಇದ್ದು ಅದರಲ್ಲಿ ಎರಡು ಕೋಣೆಗಳು ಅಪಾಯದ ಅಂಚಿನಲ್ಲಿ ಇವೆ. ಹೀಗಾಗಿ ಎರಡು ಕೋಣೆಗಳನ್ನು ದುರಸ್ತಿ ಮಾಡುವಂತೆ ಶಾಸಕ ಎಂ ಪಾಟೀಲರಿಗೆ ಶಿಕ್ಷಕರ ವೃಂದದವರು ಮನವಿ ಮಾಡಿಕೊಂಡರು. ಈ ವರೆಗೆ ಯಾವುದೆ ಪ್ರಯೋಜನೆಯಾಗಿಲ್ಲ ಎಂದು ಹೇಳಲಾಗುತ್ತದೆ.
ಬಹುತೇಕವಾಗಿ ತಾಲೂಕಿನಲ್ಲಿ ಅರ್ಧದಷ್ಟು ಸರಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಹಲವಾರು ಶಾಲೆಗಳ ಛತ್ತ ಕಡಿದು ಬಿಳುತ್ತಿವೆ. ಕಳೆದ ವಾರ ಅರ್ಜುಣಗಿ ಗ್ರಾಮದ ಸರಕಾರಿ ಶಾಲೆಯ ಛತ್ತಕಡಿದು ಬಿದ್ದು ಬಾಲಕ ಗಂಭೀರ ವಾಗಿ ಗಾಯ ಗೊಂಡ ಪ್ರಕರಣ ಜರುಗಿದೆ.ಆದರು ಬಿ ಇ ಒ ಹುಜರಾತಿ ಯಾವುದೇ ರೀತಿಯ ವ್ಯವಸ್ಥೆ ಗೆ ಮುಂದಾಗಿಲ್ಲ.ಎಂದು ಪಾಲಕರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಶುದ್ದ ಕುಡಿಯುವ ನೀರು. ಶೌಚಾಲಯ. ಕನಸಿನ ಮಾತಾಗಿದೆ. ಕಾರಣ ಬಡವರ ಮಕ್ಕಳೆ ಕಲಿಯಲು ಬರುವ ಈ ಸರಕಾರಿ ಶಾಲೆಗಳು ಮೂಲ ಸೌಕರ್ಯಗಳಿಂದ ನಲಗುತ್ತಿವೆ.
ಸರಕಾರದ ಅನುದಾನ ಸರಿಯಾಗಿ ಬಳಕೆಮಾಡದೆ ಯದ್ವಾ ತದ್ವಾ ಕಾಮಗಾರಿ ಮಾಡಿದ ಪರಿಣಾಮ ಹಾಗು ಕಾಮಗಾರಿ ಮಾಡುವಾಗ ಸಹಾಯಕ ಇಂಜಿನಿಯರ್ ಗಳು ಪರಿಶೀಲಿಸದೆ ಇರುವುದರಿಂದ ಕಳಪೆ ಕಾಮಗಾರಿಯಾಗಿ ಇಂದುಮಕ್ಕಳ ಜೀವ ನುಂಗುವ ಹಂತಕ್ಕೆ ಬಂದು ನಿಂತಿವೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳ್ಯಾಳ ಮಕ್ಕಳ ಗೋಳು ಕೇಳುವರಾರು.
