ಕಲ್ಬುರ್ಗಿ ರಸ್ತೆಯುದ್ದಕ್ಕೂ ತಗ್ಗು ಗುಂಡಿಗಳು ಈ ರಸ್ತೆಯಲ್ಲಿ ಒಂದು ಸಲ ಸಂಚಾರಿಸಿದರೆ ನರಕಯಾತನೆಯ ಅನುಭವ ಹೌದು ಇದು *ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಿಂದ ಹೆಗ್ಗಿನಾಳ ಗ್ರಾಮಕ್ಕೆ ಹೋಗುವ ಸಂಪರ್ಕ* ಕಲ್ಲಿಸುವ ರಸ್ತೆ ದುಸ್ಥಿತಿ ಜೇವರ್ಗಿ ಮತಕ್ಷೇತ್ರದ ಜನಪ್ರತಿನಿಧಿಗಳು *ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷದಿಂದಾಗಿ* ಸೊನ್ನ ಗ್ರಾಮದಿಂದ ಹೇಗಿನಾಳ ಗ್ರಾಮದವರಿಗೆ ಸುಮಾರು 3 ಕಿ. ಮೀ ರಸ್ತೆಯು ತೀರಾ ಹದಗೆಟ್ಟಿದ್ದು ಪ್ರಯಾಣಿಕರು ದಿನನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಬಿದ್ದಿರುವ ಆಳದ ಗುಂಡಿಯಲ್ಲಿ ಸಂಚರಿಸಲು ವಾಹನಗಳು ಅರಸಹಾಸ ಪಡುತ್ತಿವೆ. ಚಾಲಕರು ಜೀವ ಬಿಗಿ ಹಿಡಿದು ವಾಹನ ಚಾಲನೆ ಮಾಡುವಂಥ ಪರಿಸ್ಥಿತಿ ರಸ್ತೆಯಲ್ಲಿನ ಗುಂಡಿಯಲ್ಲಿನ ಮಳೆ ನೀರು ತುಂಬಿಕೊಂಡು ಗುಂಡಿಗಳು ಕಾಣದಾಗಿದೆ ಇದು *ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ* ರಸ್ತೆಯಲ್ಲಿ ಪ್ರತಿ ನಿತ್ಯ ಸಂಚರಿಸುವ ವಾಹನ ಚಾಲಕರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಅನಾರೋಗ್ಯ ಪೀಡಿತರು ಮತ್ತು…ಗರ್ಭಿಣಿಯರನ್ನು ಈ ರಸ್ತೆಯಲ್ಲಿ ಕರೆತರುವುದೆ ಕಷ್ಟ *ಹದಗೆಟ್ಟಿರುವ ರಸ್ತೆಯಲ್ಲಿ ಗರ್ಭಿಣಿಯವರು ಪ್ರಯಾಣಿಸಿದ್ದಾರೆ ಆಸ್ಪತ್ರೆ ಸೇರುವ ಮುನ್ನವೇ ರಸ್ತೆಯಲ್ಲಿ ಹೆರಿಗೆ* ಆಗುವಂತಹ ಪರಿಸ್ಥಿತಿ ಇದೆ ಇನ್ನೂ ಅನಾರೋಗ್ಯ ಪಿಡಿತರನ್ನು ಈ ರಸ್ತೆಯಲ್ಲಿ ಕರೆದುಕೊಂಡು ಹೋಗಲು ಸಾಧ್ಯವಾಗದೆ ಆಳದ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುವಂತಾಗಿದೆ ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದೂ. ಪ್ರಯಾಣಿಕರು ವನವಾಸ ಪಡುವಂತಾಗಿದೆ, ಅಷ್ಟೇ ಅಲ್ಲದೆ ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ತಮ್ಮ ಸ್ಥಳಕ್ಕೆ ತಲುಪಲು ಪ್ರಯಾಣಿಕರಿಗೆ ಹಾಗೂ ರೋಗಿಗಳಿಗೆ ಸಾಧ್ಯವಾಗದೆ ಅನಾಹುತಗಳು ಸಂಭವಿಸುತ್ತಿವೆ, *ಚುನಾವಣಾ ಸಂದರ್ಭದಲ್ಲಿ ಭಾಷಣ ಬಿಗಿಯುವ ರಾಜಕೀಯ ನೇತಾರರ ಕಣ್ಣಿಗೆ ಈ ನರಕಯಾತನೆಯ ರಸ್ತೆ ಕಾಣುವದಿಲ್ಲವೇ?* ಗ್ರಾಮಸ್ಥರು ನಂದು ಆ ಪಕ್ಷ ನಿಂದು ಈ ಪಕ್ಷ ಅನ್ನುವುದನ್ನು. ಬಿಟ್ಟು ನಿಮ್ಮ ಊರಿಗೆ ಹೋಗುವ ಕೆಟ್ಟ ಗಬ್ಬೆದ್ದಿರುವ ರಸ್ತೆ ದುರಸ್ತಿ ಮಾಡಿಕೊಳ್ಳಿ ಆ ಮೇಲೆ ಪಕ್ಷ ಕಟ್ಟಿಕೊಳ್ಳಿ ಇಲ್ಲಿ ನರಕಾಯತನೇ ಅನುಭವಿಸುತ್ತಿರುವವರಿಗೆ ಗೊತ್ತು ಎಚ್ಚೆತ್ತುಕೊಳ್ಳಿ ನೋಡಿದವರಿಗೆ ವಾಹನಗಳು ಸಂಚರಿಸುತ್ತಿವೇಯೋ ಅಥವಾ ನರ್ತಿಸುತ್ತಿವೇಯೋ ಎಂಬ ಅನುಮಾನ ಮೂಡುತ್ತದೆ ಇಂತಹ ಅನುಮಾನಕ್ಕೆ ರಸ್ತೆ ಹದಗೆಟ್ಟಿರುವುದೇ ಮೂಲ ಕಾರಣವಾಗಿದೆ. ಈ ಗುಂಡಿಗಳ ನಡುವೆಯೂ ರಸ್ತೆ ಹುಡುಕುವ ಸ್ಥಿತಿ ಇದೆ ಎಂದರೆ ಅತಿಶಯೋಕ್ತಿಯಲ್ಲ. ಎಂದು ಗುಂಡಿ ತಪ್ಪಿಸುವುದರೊಳಗೆ ಮತ್ತೊಂದು ಗುಂಡಿ ಎದರಾಗುತ್ತದೆ ಇದರಿಂದ ವಾಹನ.ಚಲಾಯಿಸುವುದು ಚಾಲಕರಿಗೆ ಸವಾಲಿನ ಕೆಲಸವಾಗಿದೆ ಈ ಹದಗೆಟ್ಟ ರಸ್ತೆಯಿಂದಾಗಿ ವಾಹನಗಳು ಕೆಟ್ಟ ರಸ್ತೆಯಲ್ಲಿಯೋ ನಿಲ್ಲುವಂತಾಗಿದೆ ವಾಹನಗಳ ಟೈರ್ ಪಂಚರ್ ಆಗಿ ಪ್ರಯಾಣಿಕರು *ಈ ರಸ್ತೆಯಲ್ಲಿ ನಿತ್ಯ ಓಡಾಡುವ ಜನರು ರಸ್ತೆಯ ದುಸ್ಥಿತಿ ಕಂಡು ಹಿಡಿ ಶಾಪ ಹಾಕುತ್ತಿದ್ದಾರೆ*. ಜೇವರ್ಗಿ ತಾಲೂಕಿನ ಕೇಂದ್ರಕ್ಕೆ ಸಂಪರ್ಕಿಸಲು ಉತ್ತಮ ರಸ್ತೆ ಇಲ್ಲ ಸೊನ್ನ ಗ್ರಾಮದಿಂದ ಹೆಗಿನಾಳ ವರೆಗೆ ರಸ್ತೆಯ ತುಂಬಾ ಜಲ್ಲಿಕಲ್ಲುಗಳು ಎದ್ದಿವೆ ತೆಗ್ಗು ಗುಂಡಿಗಳು ಬಿದ್ದಿವೆ ಇದರಿಂದ *ಶಾಲಾ ಮಕ್ಕಳು ಸರ್ಕಾರಿ ನೌಕರರು ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು ಸಂಕಷ್ಟ ಎದುರಿಸಬೇಕಾಗಿದೆ* ರಸ್ತೆ ಹದಿಗೆಟ್ಟಿದ್ದರು ಸ್ಥಳೀಯ *ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು.ಕಂಡು ಕಾಣದಂತೆ ಮೌನಕ್ಕೆ ಶರಣಾಗಿರುವುದು* ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ ಇನ್ನೂ ದ್ವಿಚಕ್ರ ವಾಹನ ಸವಾರರ ಪ್ರಯಾಣವಂತು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ನಿತ್ಯ ಸರ್ಕಸ್ ಮಾಡುತ್ತಾ ಈ ರಸ್ತೆಯಲ್ಲಿ ಸಂಚರಿಸುವಂತಾಗಿದೆ ರಸ್ತೆ ಹದಿಗೆಟ್ಟಿದರೂ *ಸಂಬಂಧ ಪಟ್ಟ ಅಧಿಕಾರಿಗಳು ಇದಕ್ಕೂ ತಮಗೂ ಏನು ಸಂಬಂಧವಿಲ್ಲ ಎಂಬಂತೇ ವರ್ತಿಸುತ್ತಿರುವುದು ಸಾರ್ವಜನಿಕರ ಕಣ್ಣಿಗೆ ಗುರಿಯಾಗಿದ್ದಾರೆ*. ಜೇವರ್ಗಿ ತಾಲೂಕಿನ ಸೊನ್ನದಿಂದ ತೆರಳುವ ಪ್ರಮುಖ ರಸ್ತೆ ಸಮಸ್ಯೆಗಳಿಂದ ಬಳಲುತ್ತಿದ್ದರೂ ಯಾವಬ್ಬ ಅಧಿಕಾರಿಯು ಇತ್ತ ತೆಲೆ ಹಾಕದೆ ನಿರ್ಲಕ್ಷೆ ವಹಿಸಿದ್ದಾರೆ. ಸುಮಾರು ಗ್ರಾಮಗಳಿಗೆ ಸಂಪರ್ಕ ಕಲ್ಲಸುವ ರಸ್ತೆ ತೆಗ್ಗು ಬಿದ್ದು ಗುಂಡಿಗಳಾದರು *ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.* ವ್ಯಾಪಾರ ವಹಿವಾಟು ಹಾಗೂ ತಮ್ಮ ದಿನನಿತ್ಯದ ಕೆಲಸಕ್ಕಾಗಿ ನಿತ್ಯ ರೈತರು ವ್ಯಾಪಾರಸ್ಥರು ಹರಸಾಹಸ ಪಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ವಾಹನಗಳ ಸವಾರರು ಸರ್ಕಸ್ ಮಾದರಿಯಲ್ಲಿ ಸಂಚರಿಸಬೇಕಾಗಿದೆ, ರಸ್ತೆಯಲ್ಲಿರುವ ಗುಂಡಿಗಳಿಗೆ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ರಸ್ತೆ ದುಸ್ಥಿತಿ ವಾಹನ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡುತ್ತಾರೋ ಇಲ್ಲವೋ ಕಾಯ್ದು ನೋಡಬೇಕಾಗಿದೆ.
ದಯವಿಟ್ಟು ಮಾನ್ಯ ಶಾಸಕರು ಹಾಗೂ ಪಿ ಡಬ್ಲ್ಯೂಡಿ ಅಧಿಕಾರಿಗಳು ಈ ಕೂಡಲೇ ಗಮನ ಹರಿಸಬೇಕು ಕೂಡಲೇ ಕಾಮಗಾರಿ ಮಾಡಬೇಕೆಂದು ಅಲ್ಲಿನ ಹೆಗ್ಗಿನಾಳ ಗ್ರಾಮದವರಾದ *ಕಾಂಗ್ರೆಸ್ ಯುವ ಮುಖಂಡರು, SDMC ಅಧ್ಯಕ್ಷರು, ಕನಕ ಆರ್ ಹೆಗನಾಳ ಅವರು ವಿನಂತಿಸಿಕೊಳ್ಳುತ್ತಿದ್ದಾರೆ*