ಇದು ತಹಸೀಲ್ದಾರರ ಕಚೇರಿಯೋ… ಕೆಸರಿನಗದ್ದೆಯೋ? ಎಂದು ಗೇಲಿ ಮಾಡುತ್ತಿರುವ ಸಾರ್ವಜನಿಕರು.

Ravikumar Badiger
1 Min Read

ಅಫಜಲಪುರ:- ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣ ಕೆಸರುಗದ್ದೆಯಂತಾಗಿದೆ. ಇದರಿಂದ ಕಚೇರಿಗೆ ಕೆಲಸ ಕಾರ್ಯ ನಿಮಿತ್ತ ಬಂದು ಹೋಗುವವರು ಪರದಾಡುವಂತಾಗಿದೆ. ಆವರಣವೆಲ್ಲ ಅರಲುಮಯವಾಗಿದ್ದು, ಇದು ತಹಸೀಲ್ದಾರರ ಕಚೇರಿಯೋ… ಕೆಸರಿನಗದ್ದೆಯೋ? ಎಂದು ಜನ ಗೇಲಿ ಮಾಡುತ್ತಿದ್ದಾರೆ.

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಂದ ದಿನ ನಿತ್ಯ ನೂರಾರು ಜನ ಕೆಲಸ, ಕಾರ್ಯಗಳಿಗಾಗಿ ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಸಾರ್ವಜನಿಕರಿಗೆ ಸರಿಯಾದ ಆಸನಗಳಿಲ್ಲ. ಶೌಚಗೃಹ ವ್ಯವಸ್ಥೆಯೂ ಇಲ್ಲಿಲ್ಲ.ಮಹಿಳೆಯರ ಗೊಳು ಅಂತು ಕೆಳಲೆಬಾರದು, ಮಳೆಗಾಲವಾದ್ದರಿಂದ ಕಾರ್ಯಾಲಯದ ಆವರಣದಲ್ಲಿನ ತಗ್ಗು-ಗುಂಡಿಗಳಲ್ಲಿ ನೀರು ನಿಂತು ಕೆಸರುಗದ್ದೆಯಾಗಿ ಮಾರ್ಪಟ್ಟಿವೆ. ಇದರಿಂದ ವಾಹನ ಸವಾರರು, ಪಾದಚಾರಿಗಳಿಗೆ ತೊಂದರೆಯಾಗಿದೆ.

ವಾಹನಗಳಿಗೆ ರ್ಪಾಂಗ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲ.ಇಷ್ಟೆಲ ಇದ್ದರು ಕೂಡ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಸುಮನ್ನಾಗಿದ್ದಾರೆ …ಇನ್ನಾದರು ಮುಂದೆ ಬದಲಾವಣೆ ಆಗುತ್ತದೆಯೊ ಎಂದು ಕಾದು ನೋಡಬೇಕಾಗಿದೆ.

Share This Article