ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡ ಬೆಂಬಳಿ ಗ್ರಾಮದಲ್ಲಿ
ಕಳೆದ ಒಂದು ವಾರಗಳಿಂದ ಸತತವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಹಲವಾರು ಮನೆಗಳು ಬಿದ್ದಿದ್ದರಿಂದ ಮನೆಯಲ್ಲಿ ವಾಸ ಮಾಡುತ್ತಿದ್ದ ಹಲವಾರು ಕುಟುಂಬಂಗಳು ಬೀದಿ ಪಾಲಾಗಿವೆ ಸುಮಾರು ಒಂದು ವಾರಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮನೆಗಳು ಬಿದ್ದು ಮನೆಯಲ್ಲಿರುವ ದವಸ ಧಾನ್ಯಗಳು ಹಾಳಾಗಿ ಹೋಗಿವೆ.
ಎಂದು ಸಂತ್ರಸ್ತೆ ರಾಜೇಶ್ವರಿ ಸಾಲಿಮಠ ಅವರು ಮಾಧ್ಯಮ ಹೇಳಿಕೆ ನೀಡಿವುದರ ಮೂಲಕ ತಮ್ಮ ಅಳಲನ್ನು ತೋಡಿಕೊಂಡರು.
ಮನೆ ಬಿದ್ದವರು ಸಂಬಂಧಿಕರ ಮನೆ ಹಾಗೂ ಇನ್ನಿತರ ಅಕ್ಕ ಪಕ್ಕದವರ ಮನೆಯಲ್ಲಿ ವಾಸಿಸುವಂಥಾಗಿದೆ. ದನಕರುಗಳನ್ನು ಕೂಡ ಹೊರಗಡೆ ಮಳೆಯಲ್ಲಿ ಕಟ್ಟಿದ್ದೇವೆ ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು & ಜನಪ್ರತಿನಿಧಿಗಳು ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಮನವಿ ಮಾಡಿದರು.