ಅಥಣಿ ವಕೀಲರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ.

Ravikumar Badiger
1 Min Read

ಅಥಣಿ : ಪ್ರತಿ ವರ್ಷದಂತೆ 2023-2024 ನೇ ಸಾಲಿನ ಅಥಣಿ ವಕೀಲರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎ ಎಸ್ ಹುಚಗೌಡರ ಉಪಾಧ್ಯಕ್ಷರಾಗಿ ಎಮ್ ಸಿ ದುಂಡಿ, ಕಾರ್ಯದರ್ಶಿಯಾಗಿ ಮಿತೇಶ್ ಪಟ್ಟಣ, ಗ್ರಂಥಾಲಯ ಕಾರ್ಯದರ್ಶಿಯಾಗಿ ಶಾರದಾ ಕೊಟೂರಮಠ (ಗಲಗಲಿ) ಅವರು ಆಯ್ಕೆಯಾಗಿದ್ದಾರೆ‌

ಅಥಣಿ ಅಥಣಿ ಪಟ್ಟಣದ ನ್ಯಾಯಾಲಯದಲ್ಲಿ ಜರುಗಿದ ಚುನಾವಣೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾಗಿ ಬಿ ಆರ್ ಮುಗ್ಗಣ್ಣವರ, ಯು ಕೆ ಖಟಾವಿ, ಪಿ ಎಸ್ ಡೋಕೆ, ಎಲ್ ಸಿ ಮಾಂಗ್, ಪ್ರಮೋದ ಕಾಂಬಳೆ ಆಯ್ಕೆಯಾಗಿದ್ದಾರೆ

ನೂತನ ಅಧ್ಯಕ್ಷರಾಗಿ ಮಾತನಾಡಿದ ಎ ಎಸ್ ಹುಚಗೌಡರ ಅವರು ಸರ್ವ ನ್ಯಾಯವಾದಿಗಳ ಸಹಕಾರದಿಂದ ನಾನು ಆಯ್ಕೆಯಾಗಿದ್ದು ಬರುವ ದಿನಮಾನದಲ್ಲಿ ವಕೀಲರ ಸಂಘಕ್ಕೆ ಅವಶ್ಯಕವಾಗಿ ಬೇಕಾದ ಎಲ್ಲ ಸವಲತ್ತುಗಳನ್ನು ಪೂರೈಸಲು ಕೆಲಸ ಮಾಡುವೆ ಜೊತೆಗೆ ಜಿಲ್ಲಾ ನ್ಯಾಯಾಲಯವನ್ನು ಮಂಜೂರು ಮಾಡಲು ಪ್ರಯತ್ನಿಸುವೆ ಎಂದರು.

ಅನಂತರ ನೂತನ ಕಾರ್ಯದರ್ಶಿ ಮಿಥೇಶ ಪಟ್ಟಣ ಅವರು ಮಾತನಾಡಿ ನ್ಯಾಯವಾದಿಗಳ ಗೌರವಕ್ಕೆ ಧಕ್ಕೆ ಬಂದಲ್ಲಿ ಅವರ ವಿರುದ್ದ ಹೋರಾಟ ಮಾಡಿ ನ್ಯಾಯವಾದಿಗಳ ಪರವಾಗಿ ಕೆಲಸ ಮಾಡುವೆ ಎಂದರು.

ಈ ವೇಳೆ ಬಿ ಬಿ ಬಿಸಲಾಪೂರೆ, ಎಸ್ ಎಸ್ ಪಾಟೀಲ, ವಿ ಎಸ್ ಡುಮ್ಮನ್ನವರ, ಎ ಎನ್ ಯಲಿಗೌಡರ, ಎಲ್ ಡಿ ಹಳಿಂಗಳಿ, ರಾಘವೇಂದ್ರ ಹಳಿಂಗಳಿ, ಬಾಹುಬಲಿ ಬಸರಿಕೋಡಿ, ಉಮೇಶ ಅವಟಿ, ಎಲ್‌ಎನ್ ಬಸರಿಕೋಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

*ವರದಿ ರಮೇಶ ಕೆ **

Share This Article