ಗೌರ (ಬಿ) ಗ್ರಾಮ ಪಂಚಾಯತಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಶಬಾನ ಬೇಗಂ, ಉಪಾಧ್ಯಕ್ಷಯಾಗಿ ಲಕ್ಷ್ಮೀಬಾಯಿ ಹೊಸಮನಿ ಅವಿರೋಧವಾಗಿ ಆಯ್ಕೆಯಾದರು. ಮುಖಂಡರಾದ ಈಮಾಮ್ ಶೇಖ, ರಾಹುಲ್ ಸಿಂಗೆ, ಸೇರಿದಂತೆ ಇತರರಿದ್ದರು.
ಅಫಜಲಪುರ – ಗೌರ (ಬಿ) ಗ್ರಾಪಂ ಗೆ ಎರಡನೇ ಅವಧಿಗಾಗಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್ ಸಿ ಗೆ ಮೀಸಲಾಗಿತ್ತು,
ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಬಾನ ಬೇಗಂ , ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀಬಾಯಿ ಹೊಸಮನಿ ತಲಾ ಒಂದೊಂದೆ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆ ಪ್ರಕ್ರಿಯೆಯಲ್ಲಿ 15 ಜನ ಗ್ರಾಪಂ ಸದಸ್ಯರು ಭಾಗವಹಿಸಿ ಸರ್ವಾನುಮತದಿಂದ ಬೆಂಬಲ ಸೂಚಿಸಿದರು. ಚುನಾವಣಾಧಿಕಾರಿ ಮಾರುತಿ ಹುಜರಾತಿ ಚುನಾವಣಾ ಪ್ರಕ್ರಿಯೇ ನಡೆಸಿಕೊಟ್ಟರು.
ನಂತರ ನೂತನ ಅದ್ಯಕ್ಷೆ ಶಬನಾ ಬೇಗಂ ಮಾತನಾಡಿ ನಮ್ಮನ್ನು ಎಲ್ಲ ಸದಸ್ಯರು ಸೇರಿ ಅವಿರೋಧವಾಗಿ ಆಯ್ಕೆ ಮಾಡಿದ್ದರಿಂದ ಹೆಚ್ಚಿನ ಅಭಿವೃದ್ದಿ ಕಾರ್ಯಗಳು ಮಾಡಲು ಶಕ್ತಿ ಬಂದಂತಾಗಿದೆ,ಗೌರ (ಬಿ) ಗ್ರಾಪಂ ಕಾರ್ಯಾಲಯ ಹಳೆಯದಾಗಿದ್ದು, ಹೊಸ ಗ್ರಾಮ ಪಂಚಾಯತ ಕಟ್ಟಡ ನಿರ್ಮಾಣ ಮಾಡುವುದು ಸೇರಿ ಪಂಚಾಯತ ವ್ಯಾಪ್ತಿಗೆ ಬರುವ ಎಲ್ಲ ಹಳ್ಳಿಗಳ ಅಭಿವೃದ್ದಿ, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯರಾದ ಬಸವರಾಜ ಕಿಣಗಿ, ಮಲ್ಲು ಹೋರಿ, ಸಿದ್ದುಗೌಡ ಪಾಟೀಲ್,ಯಲ್ಲಪ್ಪ ನಿಂಬರಗಿ,ಹಣಮಂತ ಪೂಜಾರಿ,ಖಾಜಪ್ಪ ಸಿಂಗೆ, ರತ್ನಾಬಾಯಿ ಕರಜಗಿ, ಲಲಿತಾಬಾಯಿ ಉಕ್ಕಲಿ, ಮಲ್ಲಮ್ಮ ಅಂಜುಟಗಿ, ನಿರ್ಮಲಾ ಲಸ್ಕರೆ, ಸುಶಿಲಾಬಾಯಿ ಸಿಂಗೆ, ಶೋಭಾ ಮಾಂಗ, ಮಡೆಮ್ಮ ಉಮ್ಮಣಗೋಳ ಪ್ರಮುಖರಾದ ರಾಹುಲ್ ಸಿಂಗೆ, ಎಂ.ಎಲ್. ಪಟೇಲ್ ಬಳೂಂಡಗಿ, ದತ್ತಾತ್ರೇಯ ನಾಧ, ಅಣ್ಣಾರಾಯ ಪಾಟೀಲ,,ಅಶೋಕ ಕಲ್ಲೂರ, ಅಶೋಕ ಕರಜಗಿ ಕಲ್ಲಪ್ಪ ಅಂಜುಟಗಿ ಸೇರಿದಂತೆ ಇತರರಿದ್ದರು.