ವಿಜಯಪುರ ನಗರ ನ್ಯೂಸ್,
ವಿಜಯಪುರ ನಗರದ ವಜ್ರ ಹನುಮಾನ್ ದೇಗುಲ ಕೂಗಳತೆಯಲ್ಲಿರೋ ಗಾರ್ಡನ್ ನಲ್ಲಿ ಪೆರಿಯಾರ್ ನಗರವನ್ನಾಗಿಸಿಕೊಂಡು ಅಲೆಮಾರಿ ಜನಾಂಗದವರು ಜೋಪಡಿ, ಹಾಗೂ ತಗಡಿನ ಶೆಡ್ ಹಾಕಿಕೊಂಡು ಕಳೆದ ಮೂವತ್ತು ವರ್ಷಗಳಿಂದ 40 ಕ್ಕೂ ಹೆಚ್ಚು ಕುಟುಂಬಗಳು ಕೊಳಚೆ ಪ್ರದೇಶದಲ್ಲಿ ವಾಸವಾಗಿದ್ದು, ಈ ಪ್ರದೇಶದ ಬಳಿಯಿರುವ ಜನರು ಇವರನ್ನು ನೋಡುವ ದೃಷ್ಟಿಕೋನವು ಬೇರೆಯಾಗಿದೆ.
ವಿಜಯಪುರ ನಗರದ ವಜ್ರಹನುಮಾನ ಗೇಟ್ ಬಳಿ ಇರುವ ಅಲೆಮಾರಿ ಜನಾಂಗಕ್ಕೆ ಕನಿಷ್ಠ ನಾಗರಿಕ ಸೌಲಭ್ಯಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಕಲ್ಪಿಸಿಲ್ಲ, ವಿದ್ಯುತ್, ಕುಡಿಯೋ ನೀರಿನ ಸೌಲಭ್ಯ, ಹಾಗೂ ಅಲೆಮಾರಿ ಜನಾಂಗದ ಮಕ್ಕಳಿಗೆ ಶಿಕ್ಷಣ ಕೂಡಾ ಸಿಗುತ್ತಿಲ್ಲ. ಇಲ್ಲಿನ ಜನರು ಮತದಾರರ ಗುರುತಿನ ಚೀಟಿ,ಆಧಾರ್ ಕಾರ್ಡ್, ರೇಶನ್ ಕಾರ್ಡ್ ಹೊಂದಿದ್ದರು ಇವರು ನಿತ್ಯ ಸಂಕಷ್ಟದ ನಡುವೆ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಗಾರ್ಡನ್ ಮದ್ಯದಲ್ಲಿ ಕೆಲವರು ಜೋಪಡಿ ಹಾಕಿಕೊಂಡಿದ್ದಾರೆ, ಆ ಗಾರ್ಡನ್ ಮೇನ್ ಗೇಟ್ ಗೆ ಕೆಲವರು ಏಕಾ ಏಕಿಯಾಗಿ ಕೀ ಹಾಕುತ್ತಾರೆ ಎಂಬ ಆರೋಪ ಕೂಡಾ ಇಲ್ಲಿನ ಅಲೆಮಾರಿ ಜನಾಂಗದವರು ಮಾಡುತ್ತಾರೆ.
ಗಟಾರಿನ (ಚರಂಡಿಯ) ಹೊಲಿಸಿನಿಂದಾಗಿ ರೋಗ ರುಜಿನಗಳು ಹಾಗೂ ಹಾವು ಚೇಳು ಕಾಟ ಇವುಗಳ ಮಧ್ಯೆ ಜೀವ ಕೈಯಲ್ಲಿ ಹಿಡಿದುಕೊಂಡು ನಿತ್ಯ ರಾತ್ರಿ ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇದರ ಮಧ್ಯೆ ಸ್ಥಳೀಯರು ಇವರಿಗೆ ಕಿರಿ ಕಿರಿ ಕೊಡುತ್ತಿದ್ದು,ಒಕ್ಕಲೆಬ್ಬಿಸಲು ಹುನ್ನಾರ ನಡೆಸಿದ್ದಾರೆ, ಹೀಗಾಗಿ ಗೇಟ್ ಗೆ ಬೀಗ ಹಾಕಿ ಮಾನವ ಹಕ್ಕು ಉಲ್ಲಂಘನೆ ಕೆಲವೊಮ್ಮೆ ಮಾಡುತ್ತಿದ್ದಾರೆ. ಎಂಬ ಆರೋಪ ಕೂಡಾ ಕೇಳಿ ಬಂದಿದೆ.ಹೀಗಾಗಿ ಅಲೆಮಾರಿ ಜನಾಂಗದ ಪರವಾಗಿ ಹೋರಾಟ ಮಾಡುವ ಸಮಾನ ಮನಸ್ಕರರು ಸ್ಥಳೀಯರ ವಿರುದ್ಧ ದೂರು ಕೊಡಲು ಮುಂದಾಗಿದ್ದಾರೆ. ಇನ್ನು ಇಲ್ಲಿನ ಅಲೆಮಾರಿ ಜನಾಂಗಕ್ಕೆ ಭುರಣಾಪೂರ ಬಳಿ ಜಾಗ ಗುರ್ತಿಸಿದ್ದಾರೆ. ಅಲ್ಲಿ ಯಾವುದೇ ನಾಗರಿಕ ಸೌಲಭ್ಯಗಳಿಲ್ಲ. ಹೀಗಾಗಿ ನಮಗೆ ಸೂರು ಒದಗಿಸಿ,ಮಕ್ಕಳ ಭವಿಷ್ಯ ರೂಪಿಸಿ ಇಲ್ಲಿಂದ ಸ್ಥಳಾಂತರ ಆಗ್ತೀವಿ ಅಂತ ಅಲೆಮಾರಿ ಜನಾಂಗದ ಮಹಿಳೆಯರು ಕಣ್ಣೀರು ಹಾಕುತ್ತಾ ನೋವು ತೋಡಿಕೊಳ್ಳುತ್ತಾರೆ. ಕೊಳಚೆ ನಗರ ಮುಕ್ತ, ಗುಡಿಸಲು ಮುಕ್ತ ಮಾಡುತ್ತೇವೆ ಅನ್ನೋ ಜನಪ್ರತಿನಿಧಿಗಳು,ಕೇವಲ ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ಕೊಟ್ಟು ಮತಗಿಟ್ಟಿಸಿಕೊಂಡು ಆಯ್ಕೆಯಾದ ಮೇಲೆ ವಾಪಸ್ ನಮ್ಮ ಕಡೆಗೆ ನೋಡಿಲ್ಲ,ಅಂಬೇಡ್ಕರ್ ಅವರ ಭಾವಚಿತ್ರದ ಬೋರ್ಡ್ ಹಾಕಿಕೊಂಡಿದ್ದೇವೆ ಅಂತ ನಮ್ಮನ್ನು ಬಿಟ್ಟಿದ್ದಾರೆ ಇಷ್ಟೊತ್ತಿಗೆ ನಮ್ಮನ್ನು ಇಲ್ಲಿಂದ ಜಾಗ ಖಾಲಿ ಮಾಡಿಸುತ್ತಿದ್ದರು ಅಂತಾರೆ ಸ್ಥಳೀಯರು…ನೀಲಮ್ಮ ಅಲೆಮಾರಿ ಜಮಾಂಗದ ಮಹಿಳೆ…ಅಕ್ಷಯಕುಮಾರ, ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ…
ಅಲೆಮಾರಿ ಜನಾಂಗಕ್ಕೆ ಸೂಕ್ತ ಸೂರು ಸೌಲಭ್ಯ ಒದಗಿಸಿ ಇಲ್ಲವೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.ಅಲೆಮಾರಿ ಜನಾಂಗದವರಿರುವ ಜಾಗಕ್ಕೆ ಬೀಗಹಾಕಿ ಅಮಾನವೀಯವಾಗಿ ನಡೆದು ಕೊಳ್ಳುತ್ತಿರುವದು ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ಆಗಿದೆ. ಈಗಾಗಲಾದರೂ ಜನಪ್ರತಿನಿಧಿಗಳು ಅಧಿಕಾರಿಗಳಿಗಳು ಇವರಿಗೊಂದು ಶಾಶ್ವತ ಸೂರು ಕಲ್ಪಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ
ವರದಿ:ವಿದ್ಯಾಧರ ಪಾಟೀಲ
RV ಟಿವಿ ಕನ್ನಡ ನ್ಯೂಸ್ ವಿಜಯಪುರ ನಗರ