ರಾಮತ್ನಾಳ ಕ್ರಿಡಾಪಟುಗಳಿಗೆ ವಿಜಯ ಸೇನೆಯಿಂದ ಸಮವಸ್ತ್ರ ವಿತರಣೆ.

Ravikumar Badiger
0 Min Read
  • ರಾಯಚೂರು:- ಜಿಲ್ಲೆಯ ಲಿಂಗಸೂರು ತಾಲೂಕ್ ರಾಮತ್ನಾಳ್ ಗ್ರಾಮದಲ್ಲಿ ನಡೆದ 2023 24ನೇ ಸಾಲಿನ ಬನ್ನಿಗೋಳ್ ವಲಯ ಮಟ್ಟದ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಕೂಟಕ್ಕೆ,, ಕರುನಾಡ ವಿಜಯ ಸೇನೆ ಗ್ರಾಮ ಘಟಕ ವತಿಯಿಂದ ರಾಮತ್ನಾಳ್ ಶಾಲಾ ಕ್ರೀಡಾಪಟುಗಳಿಗೆ ಸಮ ವಸ್ತ್ರವನ್ನು ನೀಡಲಾಯಿತು.ಈ ಸಮವಸ್ತ್ರವನ್ನು ವಿಜಯ ಸೇನೆ ಗ್ರಾಮ ಘಟಕದ ಅಧ್ಯಕ್ಷರಾದ ಸಂಗನಗೌಡ ಪೊಲೀಸ್ ಪಾಟೀಲ್ ನೀಡಿ ಪ್ರೋತ್ಸಾಹಿಸಿದರು..ಈ ಸಂದರ್ಭದಲ್ಲಿ ಸಂಘಟನೆಯ ಖಜಾಂಚಿ ಮಂಜು ಮಾದರ್, ಸಹ ಕಾರ್ಯದರ್ಶ ಕೃಷ್ಣ ಚಲುವಾದಿ, ಮುಖಂಡರಾದ ಅಂದಪ್ಪ ನಾಯಕ ಮತ್ತು ಸಂತೋಷ ಪಾಟೀಲ್ ಅವರು ಸಹ ಸಮವಸ್ತ್ರ ನೀಡಿ ಕ್ರಿಡಾಪಟುಗಳಿಗೆ ಪ್ರೋತ್ಸಾಹಿಸಿದರು.
Share This Article