ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಸೂಂಟನೂರ ಗ್ರಾಮಕ್ಕೆ ಇಂದು ಭಾರತಿ ಯುವ ಸೈನ್ಯ ಬೇಟಿ ನೀಡಿ ಸೂಂಟನೂರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಮಾಡಿದರು ಗ್ರಾಮದಲ್ಲಿ ಸ್ವಚ್ಛತೆ ಬೀದಿ ದೀಪ ಮತ್ತು ನರೇಗಾ ಯೋಜನೆ ಅವ್ಯವಹಾರ ಕುಡಿಯುವ ನೀರು ರಸ್ತೆ ಸುದ್ದಿಕರಣ ಅತಿ ಶೀಘ್ರದಲ್ಲಿ ಮಾಡಬೇಕೆಂದು ಅಧ್ಯಕ್ಷರು ಪಿ.ಡಿ.ಓ ರವರಿಗೆ ಮನವಿ ಸಲ್ಲಿಸಲಾಯಿತು ಮತ್ತು ಅನೇಕ ರಸ್ತೆ ಚರಂಡಿ ಮಾಡಿ ಸ್ವಚ್ಛತೆ ಬಗ್ಗೆ ವೀಕ್ಷಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಚಿಂಚನಸೂರ್, ಗ್ರಾಮ ಘಟಕ ಗೌರವಾಧ್ಯಕ್ಷ ದಿನೇಶ್ ವಗ್ಗನ್, ಕಾರ್ಯದರ್ಶಿ ಅಂಬರೀಶ್ ಪಾಣೆಗಾವ್, ಗೌತಮ್ ನ್ಯಾಮನ, ರವಿ ವಗ್ಗನ, ಮತ್ತು ಅನೇಕರು ಉಪಸ್ಥಿತರಿದ್ದರು