ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಅರಿಶಿನ,ಕುಂಕುಮ,ಬಳೆಗಳ ಲಕೋಟೆಯನ್ನು ವಿತರಿಸಿದ ಕೆ.ವಿಜಯಕುಮಾರ್.

Ravikumar Badiger
1 Min Read

*ಸುರಪುರ : ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಅರಿಶಿನ,ಕುಂಕುಮ,ಬಳೆಗಳ ಲಕೋಟೆಯನ್ನು ವಿತರಿಸಿದ ಕೆ.ವಿಜಯಕುಮಾರ್.*

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದಕ್ಷಿಣ ಕಾಶಿ, ಜಗದ್ಗುರು ತಿಂಥಣಿ ಮೌನೇಶ್ವರ ದೇವಸ್ಥಾನದಲ್ಲಿ ಇಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತವಾಗಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಬೆಂಗಳೂರು, ಹಾಗೂ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಸುತ್ತೋಲೆಯ ನಿರ್ದೇಶನದಂತೆ.

ದೇವಸ್ಥಾನಕ್ಕೆ ಬರತಕ್ಕಂತ ಮಹಿಳೆಯರಿಗೆ ಮುತೈದ ಸಂಕೇತವಾದ ಅರಿಶಿನ, ಕುಂಕುಮ, ಕೈ ಬಳೆಗಲಕನ್ನಾ ಪ್ರಸಾದದ ರೂಪದಲ್ಲಿ ಸುರಪುರ ತಾಲೂಕು ದಂಡಾಧಿಕಾರಿ ಹಾಗೂ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಆಡಳಿತಾಧಿಕಾರಿ ಕೆ.ವಿಜಯಕುಮಾರ್ ಅವರು ಪ್ರಸಾದದ ಲಕೋಟೆಯನ್ನು ವಿತರಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಪ್ರಧಾನ ಅರ್ಚಕ ಮೌನೇಶ್ವರ ಸ್ವಾಮಿಗಳು, ದೇವಸ್ಥಾನ ವ್ಯವಸ್ಥಾಪನ ಸೇವಾ ಸಮಿತಿಯ ಅಧ್ಯಕ್ಷ ವೆಂಕಟೇಶ ಯರಡೋಣಿ ಸದಸ್ಯರಾದ ಮಲ್ಲಪ್ಪ ಕೆ.ಸಿ.ಪಿ. ಚಂದ್ರಶೇಖರ ಎಲ್ ಗುಡಿ, ದೇವಸ್ಥಾನ ವ್ಯವಸ್ಥಾಪನ ಸೇವಾ ಸಮಿತಿಯ ವ್ಯವಸ್ಥಾಪಕ ಶಿವಾನಂದರು ಸ್ವಾಮಿ, ಶಿಕ್ಷಣ ಪ್ರೇಮಿ ಗಂಗಾಧರ ಆರ್ ನಾಯಕ, ಕಂಪ್ಯೂಟರ್ ಆಪರೇಟರ್ ಸುಭಾಷ್ ನಾಯಕ, ವಾಚಮೆನ್ ಭಾಷಸಾಬ್, ಮಾನಪ್ಪ ಚಿಂಚರಕಿ, ಮಹರ್ಷಿ ವಾಲ್ಮೀಕಿ ನಾಯಕ ತರುಣ ಸಂಘ ಗ್ರಾಮ ಘಟಕ ಅಧ್ಯಕ್ಷ ಮಾನಯ್ಯ ಬಿ ಕವಾಲ್ದಾರ, ಕರ್ನಾಟಕ ಜನ ಶಕ್ತಿ ವೇದಿಕೆ ಯಾದಗಿರಿ ಜಿಲ್ಲಾಧ್ಯಕ್ಷ ವೆಂಕಟೇಶ ಎಮ್ ಕವಾಲ್ದಾರ, ಮುತೈದೆ ಮಹಿಳೆಯರು ಮತ್ತು ಊರಿನ ಮುಖಂಡರು ಉಪಸ್ಥಿತರಿದ್ದರು.

*ವರದಿ : ಮೌನೇಶ ಆರ್ ಭೋಯಿ.*

Share This Article