*ಯಾದಗಿರಿ : ನಗರದ ರೈಲ್ವೆ ನಿಲ್ದಾಣದಲ್ಲಿ ಒಂದೇ ಭಾರತ ರೈಲು ನಿಲುಗಡೆ ಮಾಡುವಂತೆ : ಅರ್ಷದ್ ದಖನಿ ಮನವಿ.*
ಯಾದಗಿರಿ : ಕಲ್ಯಾಣ ಕರ್ನಾಟಕದಿಂದ ಗ್ರಾಮೀಣ ಪ್ರದೇಶದಲ್ಲಿ ಇರುವ ಬಡ ಜನರು, ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರಿಯಾದ ಆಸ್ಪತ್ರೆ ಇಲ್ಲದ ಕಾರಣ ದೊಡ್ಡ ದೊಡ್ಡ ಕಾಯಿಲೆಗಳು ಬಂದರೆ ಪೂನಾ,ಮಹಾರಾಷ್ಟ್ರ, ಹೈದರಾಬಾದ್, ಸೊಲ್ಲಾಪುರ, ನಗರಗಳಿಗೆ ಹೋಗತಕ್ಕಂತ ಪರಿಸ್ಥಿತಿ ಎದುರಾಗಿರುವುದರಿಂದ.
ಬಡ ರೋಗಿಗಳು ಮತ್ತು ಉನ್ನತ ವಿಧ್ಯಾಭ್ಯಾಸಕ್ಕಾಗಿ, ಹಲವಾರಿ ಸರ್ಕಾರಿ ಸಭೆ ,ಸಮಾರಂಭಗಳಿಗೆ ಯಾದಗಿರಿ ನಗರ ರೈಲು ನಿಲ್ದಾಣದಿಂದ ಬೆಂಗಳೂರು ತೆರಳಲು ಸುಮಾರು 9 ಗಂಟೆಗಳ ಕಾಲ ಇಡೀ ರಾತ್ರಿ ಪ್ರಯಾಣ ಮಾಡುವಂತ ಪರಿಸ್ಥಿತಿ ಉಂಟಾಗಿದೆ.
ಇದೇ ಅಗಷ್ಟ್ ಕೊನೆಯ ವಾರದಲ್ಲಿ ಒಂದೇ ಭಾರತ ರೈಲು ಎಂಬ ತಡೆ ರಹಿತ ರೈಲುಗಾಡಿ ಯಾದಗಿರಿ ಮುಖಾಂತರ ಬೆಂಗಳೂರು ನಗರಕ್ಕೆ ಕೇವಲ 6 ಗಂಟೆಗಳ ಕಾಲದಲ್ಲಿ ಹೊರಡುತ್ತಿರುವುದರಿಂದ
ಯಾದಗಿರಿ ನಗರ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಿ ಬಡ ರೋಗಿಗಳಿಗು, ಉನ್ನತ ವ್ಯಾಸಂಗ ಮಾಡಲು ತೆರಳುತ್ತಿರುವ ವಿದ್ಯಾರ್ಥಿಗಳಿಗು, ಸರ್ಕಾರಿ, ಅರೆ ಸರ್ಕಾರಿ ನೌಕರರಿಗು ಅನುಕೂಲದ ಹಿತದೃಷ್ಟಿಯಿಂದ ನಿಲುಗಡೆ ಮಾಡಿಸುವಂತೆ ನಮ್ಮ ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀಯವರಿಗು ಹಾಗೂ ರಾಯಚೂರು ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ ಅವರಿಗು ಪತ್ರಿಕಾ ಪ್ರಕಟಣೆ ನೀಡುವುದರ ಮೂಲಕ.
ಸಾಮಾಜಿಕ ಹೋರಾಟಗಾರ, ರಾಷ್ಟ್ರೀಯ ಮುಸ್ಲಿಮ್ ಮಂಚ್ ಜಿಲ್ಲಾಧ್ಯಕ್ಷ ಅರ್ಷದ್ ದಖನಿ ಅವರು ಮನವಿ ಮಾಡಿದರು.
ನಿಲುಗಡೆ ಮಾಡದಿದ್ದಲ್ಲಿ ನಗರದ ರೈಲು ನಿಲ್ದಾಣದಲ್ಲಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮುಸ್ಲಿಮ್ ಮಂಚ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
*ವರದಿ : ಮೌನೇಶ ಆರ್ ಭೋಯಿ.*