ಜಗತ್ತಿನಲ್ಲಿ ಗುರವಿಗಿಂತ ಯಾರು ದೊಡ್ಡವರಲ್ಲಾ:- ಸೈಯಾದಭಾಷಾ.

Ravikumar Badiger
2 Min Read

ಜಗತ್ತಿನಲ್ಲಿ ಗುರವಿಗಿಂತ ಯಾರು ದೊಡ್ಡವರಲ್ಲಾ:- ಸೈಯಾದಭಾಷಾ.

ಅಫಜಲಪುರ:- ಗುರು ಎಂದರೆ ಶ್ರೇಷ್ಠ ದೊಡ್ಡದು ಎಂಬರ್ತ ಕೊಡುತ್ತದೆ. ಗುರುವಿನ ಗುಲಾಮನಾಗುವತನಕ ದೊರೆಯದ ಮುಕ್ತಿ ಎಂಬ ವಾಣಿಯಂತೆ ಯಾವಾಗ ನಾವುಗಳು ಒಬ್ಬ ಆದರ್ಶ ವ್ಯಕ್ತಿಯನ್ನು ನಂಬುತ್ತೇವೆಯೋ ಅವರೇ ನಮ್ಮ ಗುರುವಾಗಿರುತ್ತಾರೆ. ಒಂದು ಮಗು ಯಾವ ವಾತಾವರಣದಲ್ಲಿ ಬೆಳೆದಿರುತ್ತದೆಯೋ ಆ ವಾತಾವರಣದ ಗುಣ ಮತ್ತು ಮೌಲ್ಯ ಬೆಳೆಸಿಕೊಂಡಿರುತ್ತದೆ. ಒಬ್ಬ ಅಕ್ಷರಸ್ಥನಾದ ನೀನು ಬೀದಿಯಲ್ಲಿ ಕಸವನ್ನು ಎಸೆಯುವುದಾದರೆ ಆ ಬಿದ್ದ ಕಸವನು ಒಬ್ಬ ಅನಕ್ಷರಸ್ಥ ತೆಗೆಯುವುದಾದರೆ ನೀ ಕಲಿತ ಶಿಕ್ಷಣದ ಮೌಲ್ಯವಾದರು ಏನು ಎಂಬ ಪ್ರಶ್ನೆ ಮಾಡುವುದು ಸಹಜ ಇಲ್ಲಿ ಕೇವಲ ಶಾಲಾ ಕಾಲೇಜಿನಲ್ಲಿ ಕಲಿತ ಶಿಕ್ಷಣವಲ್ಲದೆ ನೈತಿಕ ಶಿಕ್ಷಣವು ಸಹ ಪ್ರಮುಖವಾಗಿರುತ್ತದೆಯೋ ಹಾಗೆ. ಎರಡಕ್ಷರ ತಿಳಿಸಿದಾತನೇ ಗುರುಎಂದು ಸ್ವೀಕರಿಸುತ್ತೇವೆ ಆತ ದೊಡ್ಡವನಾದರೂ ಸರಿ ಒಂದು ವೇಳೆ ನಮಗಿಂತಲೂ ಚಿಕ್ಕವನಿದ್ದರೂ ಸರಿ ಗುರು ಎಂದೆ ಪರಿಗಣಿಸಿದಾಗ ನಮ್ಮಲ್ಲಿನ ಕಲಿಕೆಯ ಹಸಿವು ನಿವಾರಿಸಲು ಸಾಧ್ಯ .ಒಬ್ಬ ವ್ಯಕ್ತಿಯ ಜೀವನದಲ್ಲಿ- ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಆಗ ಮಾತ್ರ ಆ ವ್ಯಕ್ತಿ ಏನನ್ನಾದರೂ ಸಾಧಿಸಬಲ್ಲ.

ಅದಕ್ಕೆ ಹೇಳೂದು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎಂದು ವಾಡಿಕೆ ಇದೆ. ಇದನ್ನು ಅರಿತಾಗ ಗುರುವಿನ ಮೌಲ್ಯ ಮಹತ್ವ ತಿಳಿದು ಬರುತ್ತದೆ. ಇಟ್ಟ ಗುರಿ ಮುಟ್ಟುವವರೆಗೂ ಕೆಣಕುವರನ್ನು ಇಣುಕಿ ಸಹ ನೋಡಬಾರದು ಎಂಬ ಮಾತಿನಂತೆ ನಮ್ಮಲ್ಲಿ ಶಾಂತಿ-ಸಹನೆ, ಪ್ರೀತಿ- ವಾತ್ಸಲ್ಯ, ಕರುಣೆ- ದಯೆ ಯಂತಹ ಮಾನವೀಯತೆಯ ಮೌಲ್ಯವನ್ನು ತುಂಬವನೇ ನಿಜವಾದ ಗುರು.ಒಬ್ಬ ಗುರು ನಿಜವಾಗಿಯೂ ನಮ್ಮ ಜೀವನದಲ್ಲಿ ಅತಿ ಶ್ರೇಷ್ಠ ಪಾತ್ರವಹಿಸಿ ಸತ್ಯ- ಮಿಥ್ಯಗಳ ಪಾಠಕಲಿಸಿ ಬದಲಾಗುತ್ತಿರುವ ಸಮಾಜಕ್ಕೆ ತಕ್ಕಂತೆ ಹೊಂದಿಕೊಂಡು ಹೋಗಲು ನಮ್ಮನ್ನು ಸರಿಯಾದ ಮಾರ್ಗ ದಡಿ ದಾರಿ ತೋರುವನೇ ಗುರು.ಒಬ್ಬ ಶ್ರೇಷ್ಠ ಗುರು ಬಯಸುವುದೇನಂದರೆ- ತನ್ನನ್ನು ಮೀರಿಸುವಂತೆ ವಿದ್ಯಾರ್ಥಿಗಳನ್ನು ಹುಟ್ಟು ಹಾಕಿ. ತನಗಿಂತಲು ಶ್ರೇಷ್ಠ ಸ್ಥಾನದಲ್ಲಿಅವರನ್ನು ಬೆಳೆಸಿ ಈ ಕೆಟ್ಟ ಸಮಾಜದಲ್ಲಿ- ದಿಟ್ಟವಾಗಿ ಬದುಕಲು ಅವರಲ್ಲಿರೋ ಜ್ಞಾನವನ್ನು. ನಮಗೆ ದಾರಿ ಏರೆದು ಸಮಾಜದ ಡೊಂಕುಗಳನ್ನು ತಿದ್ದಲು ಬಯಸಿರುತ್ತಾರೆ. ಒಂದು ರಾಷ್ಟ್ರದ ಭವಿಷ್ಯ ಒಂದು ವರ್ಗ ಕೋಣೆಯಲ್ಲಿ ನಡೆಯುವ ಬೋಧನೆ ಕೇಂದ್ರ- ಬಿಂದುಗಳಾದ ಶಿಕ್ಷಕನ ಕೈಯಲ್ಲಿ ಅಡಗಿರುತ್ತದೆ.

ಸೈಯಾದಭಾಷಾ.ಹ‌.ಹಚ್ಚಾಳ (ಅಫಜಲಪುರ)….

Share This Article