ಕಲಬುರಗಿಯ ಪತ್ರಿಕಾ ಭವನದಲ್ಲಿ ಎಲ್ಲ ಕಾರ್ಯನಿರತ್ ಪತ್ರಕರ್ತರಿಗೆ ಮುಕ್ತ ಅವಕಾಶ
ನೀಡುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಕರ್ನಾಟಕ ಕಾರ್ಯನಿರತ್ ಪತ್ರಕರ್ತರ ಧ್ವನಿ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪಗಡೆ.
ಹೌದ ವೀಕ್ಷಕರೇ ಕಲಬುರಗಿಯಲ್ಲಿ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ವತಿಯಿಂದ ಇಂದು ಕಲಬುರ್ಗಿಯ ಜಿಲ್ಲಾಧಿಕಾರಿಗಳಿಗೆ ಪತ್ರಿಕಾ ಭವನದಲ್ಲಿ ಮುಕ್ತವಾಗಿ ಎಲ್ಲ ಪತ್ರಕರ್ತರಿಗೆ ಪ್ರವೇಶ ನೀಡಬೇಕು ಎಂದು ಮನವಿ ಪತ್ರ ಸಲ್ಲಿಸಲಾಯಿತು, ತದನಂತರ ಮಾತನಾಡಿದ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪಗಡೆ,ಕಲಬುರ್ಗಿ ಯಲ್ಲಿರುವ ಪತ್ರಿಕಾ ಭವನದಲ್ಲಿ ಎಲ್ಲ ಕಾರ್ಯನಿರತ್ ಪತ್ರಕರ್ತರಿಗೆ ಮುಕ್ತವಾಗಿ ಪ್ರವೇಶ ನೀಡಲು ಮಾನ್ಯ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೂ ನಮ್ಮ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಆದಷ್ಟು ಬೇಗನೆ ಕ್ರಮ ಕೈಗೊಳ್ಳಲು ಭರವಸೆ ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ
ಕರ್ನಾಟಕ ಕಾರ್ಯನಿರತ್ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪಗಡೆ, ಕಾರ್ಯಧ್ಯಕ್ಷ ಶಿವುಕುಮಾರ್ ಬಿರಾದಾರ್, ಉಪಾಧ್ಯಕ್ಷರಾಧ ರಾಜಶೇಖರ್ ಮಾತೋಳಿ, ಸದ್ದಾಂ, ಶಂಕರ ರೆಡ್ಡಿ ಆಫಜಲಪುರ್ ತಾಲೂಕಾ ಘಟಕದ ಪದಾಧಿಕಾರಿಗಳು, MD ಅಲ್ಲಮ, ಸೈಯದ್ ನೈಮೋದ್ದನ ಸೇರಿದಂತೆ ಅನೇಕ ಗಣ್ಯರು ಮನವಿ ಪತ್ರ ನೀಡುವ ಸಂದರ್ಭದಲ್ಲಿ ಭಾಗವಹಿಸಿದರು.