ನೆಟ್ವರ್ಕ್ ಸಮಸ್ಯೆ ಬಗೆಹರಿಸಿ :ಜಯ ಕರ್ನಾಟಕ ಅಧ್ಯಕ್ಷ ನಾಗೇಶ್ ಗದ್ದಿಗಿ ಒತ್ತಾಯ.

Ravikumar Badiger
1 Min Read

*ಗುರುಮಿಟಕಲ್ : ನೆಟ್ವರ್ಕ್ ಸಮಸ್ಯೆ ಬಗೆಹರಿಸಿ :ಜಯ ಕರ್ನಾಟಕ ಅಧ್ಯಕ್ಷ ನಾಗೇಶ್ ಗದ್ದಿಗಿ ಒತ್ತಾಯ.

ಯಾದಗಿರಿ ಜಿಲ್ಲೆಯ ಗುರುಮಿಟಕಲ್ ತಾಲೂಕಿನಾದ್ಯಂತ ಸರ್ವರ್ ( ನೆಟ್ವರ್ಕ್) ಸಮಸ್ಯೆಯಿಂದ ಗ್ರಾಮೀಣ ಪ್ರದೇಶದಿಂದ ದಿನ ನಿತ್ಯದ ಕೂಲಿ ಕೆಲಸ, ಹೊಲ ಗದ್ದೆಗಳ ಕೆಲಸಕ್ಕೆ ಹೋಗುವುದನ್ನು ಬಿಟ್ಟು

ಗುರುಮಿಟಕಲ್ ಪಟ್ಟಣದ ತಾಲೂಕು ಕಛೇರಿಗಳಿಗೆ ಪ್ರತಿನಿತ್ಯ ನೂರಾರು ಜನರು ಅವಶ್ಯಕವಾದ ದಾಖಲೆಯನ್ನು ಸಿದ್ದಪಡಿಸಲು ತಮ್ಮ – ತಮ್ಮ ಆಧಾರ ಕಾರ್ಡ್, ರೇಷನ್ ಕಾರ್ಡ್, ತಿದ್ದುಪಡಿ, ಹೊಸ ಹೆಸರುಗಳ ಸೇರ್ಪಡೆ ಮಾಡಲು ಬರುತ್ತಿರುವ ಸಾರ್ವಜನಿಕರು ಸರ್ವರ್ ಸಮಸ್ಯೆಗಳಿಂದ ಬೇಸತ್ತು ಹೋಗಿದ್ದಾರೆ.

ಎಂದು ಜಯ ಕರ್ನಾಟಕ ಸಂಘಟನೆಯ ಮುಖಂಡರು ಬೇಸರ ವ್ಯಕ್ತಪಡಿಸಿದರು.
ಜಯ ಕರ್ನಾಟಕ ತಾಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ ಅವರು ಮಾತನಾಡುತ್ತಾ

ಗುರುಮಿಟಕಲ್ ತಾಲೂಕಿನಾದ್ಯಂತ ಸರ್ವರ್ ಸಮಸ್ಯೆ ಇರುವುದರಿಂದ ಗ್ರಾಮೀಣ ಪ್ರದೇಶದಿಂದ ಪಟ್ಟಣದ ತಾಲೂಕು ಕಛೇರಿಗಳಿಗೆ ಬರತಕ್ಕಂತ ಸಾರ್ವಜನಿಕರು ಸರ್ಕಾರದ ಸೇವೆಗಳನ್ನು ಪಡೆಯಲು ಬಂದಾಗ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಪ್ರತಿನಿತ್ಯ ತಾಲೂಕು ಕಛೇರಿಗಳಿಗೆ ಹಾಗೂ ಆನ್ ಲೈನ್ ಸೆಂಟರ್ ಗಳಿಗೆ ಅಲೆದಾಡುವಂತಾಗಿದೆ. ಎಂದು ಬೇಸರ ವ್ಯಕ್ತಪಡಿಸಿದರು.

ಕೂಡಲೇ ತಾಲೂಕಿನಾದ್ಯಂತ ಇರುವ ಸರ್ವರ್ ಸಮಸ್ಯೆಯನ್ನು ಬಗೆಹರಿಸಿ ಸರ್ಕಾರದಿಂದ ರೇಷನ್ ಕಾರ್ಡ್ ತಿದ್ದುಪಡಿ, ಹೊಸದಾಗಿ ಹೆಸರುಗಳ ಸೇರ್ಪಡೆ, ಕಾರ್ಯ ನಡೆಯುತ್ತಿರುವುದರಿಂದ ನೆಟ್ವರ್ಕ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ
ಇಂದು ಆಹಾರ ಇಲಾಖೆ ಸಚಿವರಿಗೆ ಬರೆದ ಮನವಿಪತ್ರವನ್ನು ಆಹಾರ ನಿರೀಕ್ಷಕರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಮುಖಂಡರಾದ ಗೋಪಾಲ ಕೃಷ್ಣ ಮೇದಾ, ನರಸಿಂಹಲು ಗಂಗಾನೊಳ್, ಅವಿನಾಶಗೌಡ, ತಿಮ್ಮಯ್ಯ ನಾಯಕ, ಬನ್ನು ಮಡುಗು, ವಿಠ್ಠಲ್ ಕಿಷ್ಟಾಪುರ, ರೀಯಾಜ್ ಅಹಮ್ಮದ್, ಆಯಾಜ್ ಅಲಿ, ಇತರರು ಉಪಸ್ಥಿತರಿದ್ದರು.

*ವರದಿ : ಮೌನೇಶ ಆರ್ ಭೋಯಿ*

Share This Article