ಮೈಂದರ್ಗಿಯಲ್ಲಿ ವೈಭವದಿಂದ ವಿಶ್ವ ಜಾನಪದ ದಿನಾಚರಣೆ ಆಚರಿಸಲಾಯಿತು.
ಮೈಂದರ್ಗಿಯಲ್ಲಿ ಬಸವರಾಜ ಮಸೂತಿ ಪಬ್ಲಿಕ್ ಮ್ಯೂಸಿಯಂ ಚಾರೀಟೆಬಲ್ ಟ್ರಸ್ಟ್ ವತಿಯಿಂದ ವಿಶ್ವ ಜಾನಪದ ದಿನಾಚರಣೆಗೆ ರಾಜಶೇಖರ ಮಸೂತಿ ದೀಪ ಬೆಳಗಿಸಿ ಉದ್ಘಾಟಿಸಿದರು.ನೀಲಕಂಠ ಮೇಂಥೆ ಅವರು ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಸಿದ್ಧಾರೂಢ ಅವರಳ್ಳಿ ಅವರು ಜಾನಪದ ಹಾಡು ಹಾಡಿದರು.ಗುರಲಿಂಗಯ್ಯ ಸಂಭಾಳ ಅವರಿಂದ ಸಂಭಾಳ ವಾದನ ಪ್ರದರ್ಶನ ಮಾಡಲಾಯಿತು.ಶ್ರೀಶಿವಚಲೇಶ್ವರ ಭಜನಾ ಕಲಾವಿದರಾದ ಶ್ರೀ ಶಿವಾನಂದ ಲಾಳಸಂಗಿ ಅವರಿಗೆ ಆದರ್ಶ ಕಲಾವಿದ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಟ್ರಸ್ಟ್ ಅಧ್ಯರಾದ ಬಸವರಾಜ ಮಸೂತಿ ಅವರು ಸ್ವಾಗತಿಸಿ ಮಹಾರಾಷ್ಟ್ರ ಜಾನಪದ ಕಲೆ ಮಹತ್ವದ ಹೇಳಿದರು.ಪ್ರಭು ಭೆಣ್ಣೆಸೊರ, ಕಾಶಿನಾಥ ಜಕಾಪುರೆ, ಎಸ್ ಡಿ ಸವಳಿ, ಶಿವಾನಂದ ನಿಂಬಾಳ ಸರ್ ಹಲವರು ಉಪಸ್ಥಿತರಿದ್ದರು.ಪ್ರಸಿದ್ದ ಪ್ರವಚನಕರಾದ ವೆ ಸಂಗಯ್ಯ ಶಾಸ್ತ್ರಿಗಳು ಜಾನಪದ ಕಲೆ ಉಳಿಸಿ ಬೆಳೆಸಿ ಕೆಲಸ ಮಾಡಬೇಕು ಎಂದು ಹೇಳಿದರು.ಹಣಮಂತ ಕಾರಲೆ ನಿರೂಪಿಸಿದರು.ರಾಜಶ್ರೀ ಉಪ್ಪಿನ ಅವರು ವಂದಿಸಿದರು.