“ಶಿಕ್ಷಣದ ಖಾಸಗೀಕರಣ “ಹೀಗೆಯೇ ಮುಂದುವರೆದರೆ ನಾಳೆ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವದಕ್ಕಾಗಿ ನಾವು ನಮ್ಮ ಎಲ್ಲ ಆಸ್ತಿ,ಪಾಸ್ತಿ ಅಷ್ಟೇ ಅಲ್ಲ ಕೊನೆಗೆ ನಮ್ಮನ್ನು ನಾವೇ ಮಾರಿಕೊಳ್ಳಬೇಕಾಗುತ್ತದೆ.”ಶಿಕ್ಷಣ ಹಣದಲ್ಲಿ ಇಲ್ಲ ಕಲಿಯುವ ಇಚ್ಛಾಶಕ್ತಿಯಲ್ಲಿ ಇದೆ”ಎಂಬುದನ್ನು ಸಾಧಾರಣ ಮೊರಾರ್ಜಿ ಶಾಲೆಯಲ್ಲಿದ್ದು SSLCಯಲ್ಲಿ ಉನ್ನತ ಸಾಧನೆ ತೋರಿದ ಬಾಗಲಕೋಟೆಯ ಅಂಕಿತಾ ಬಸಪ್ಪ ಕೊಣ್ಣೂರ (625ಕ್ಕೆ 625 ಅಂಕ ಪಡೆದ ಏಕೈಕ ವಿದ್ಯಾರ್ಥಿನಿ) ನಮಗೆ ಮಾದರಿ.(ಅಂದ ಮಾತ್ರಕ್ಕೆ ಅಂಕಗಳೇ ಜ್ಞಾನದ ಮಾನದಂಡವೂ ಅಲ್ಲ ).ಪ್ರತಿಷ್ಠಿತ ಶಾಲೆಗಳ ಹೆಸರಲ್ಲಿ ಇಂದು ಖಾಸಗಿ ಶಾಲೆಗಳು ಗ್ರಾಮ,ನಗರಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿವೆ. (ಇದರಲ್ಲಿ ಬಹುತೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳದ್ದು).ಶಿಕ್ಷಣ ಪೂರ್ಣ ವ್ಯಾಪಾರೀಕರಣ ಆಗುತ್ತಿದೆ.ಹೀಗೆ ಮುಂದುವರೆದರೆ ಇನ್ನು ಕೆಲವೇ ದಿನಗಳಲ್ಲಿ ಸರ್ಕಾರಿ ಶಾಲೆಗಳು ಪೂರ್ಣ ಮುಚ್ಚಿ,(ಮುಚ್ಚಿಸಿ) ಖಾಸಗೀ ಮತ್ತು ವಿದೇಶಿ ಶಿಕ್ಷಣ ಸಂಸ್ಥೆಗಳು ಈ ನೆಲದಲ್ಲಿ ಪೈಪೋಟಿಗೆ ಇಳಿದು ಬಡವರ ಮಕ್ಕಳಿಗೆ ಶಿಕ್ಷಣ ಗಗನಕುಸುಮವಾಗುತ್ತದೆ.ಈಗ ಕೇವಲ ಖಾಸಗಿ ಶಾಲೆಗಳ ಉಪಟಳವೇ ಸಹಿಸಲಾಗುತ್ತಿಲ್ಲ.ಇನ್ನು ಇವುಗಳ ಜೊತೆ ವಿದೇಶಿ ಶಿಕ್ಷಣ ಸಂಸ್ಥೆಗಳು ಬಂದರೆ ಮಂಗನಿಗೆ ಹೆಂಡ ಕುಡಿಸಿದಂತಾಗುತ್ತದೆ.ಶಿಕ್ಷಣ ಬಲು ದುಬಾರಿ ಆಗೋದರಲ್ಲಿ ಅನುಮಾನವೇ ಇಲ್ಲ.
ಪರಿಹಾರ:ಒಮ್ಮೆ ಪ್ರತಿಷ್ಠೆಯ ಪ್ರಶ್ನೆ ಬಿಟ್ಟು(ಖಾಸಗಿ ಶಾಲೆಯಲ್ಲಿ ಕಲಿಸುವದು ಪ್ರತಿಷ್ಠೆ ಆಗಿದೆ ಸರ್ಕಾರಿ ಶಿಕ್ಷಕರೂ ತಮ್ಮ ಮಕ್ಕಳ ಪ್ರವೇಶಕ್ಕಾಗಿ ಖಾಸಗಿ ಶಾಲೆಗಳ ಎದುರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ ಹೀಗಾದರೆ ಯಾವ ನಂಬಿಕೆಯಿಂದ ಬಡ ಪಾಲಕರು ತಮ್ಮ ಮಕ್ಕಳನ್ನು ನಿಮ್ಮ ಬಳಿ ಬಿಡಬೇಕು ??
ಸರ್ಕಾರಿ ಶಿಕ್ಷಕರಲ್ಲಿ ನಮ್ರ ವಿನಂತಿ: ಶಾಲಾ ಮಕ್ಕಳನ್ನು ನಿಮ್ಮ ಸ್ವಂತ ಮಕ್ಕಳಂತೆ ಕಾಣಿ👏)
ವಿಚಾರ ಮಾಡಿ, ಒಂದೇ ವರ್ಷ ಎಲ್ಲ ಪಾಲಕರೂ ಖಾಸಗೀ ಶಾಲೆಗಳಿಂದ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿದರೆ, ಕಲಿಯುವ ಮಗು ಎಲ್ಲಿದ್ದರೂ ಕಲಿಯುತ್ತದೆ.ಸರ್ಕಾರಿ ಶಾಲೆಯ ಸ್ಥಿತಿ ಸುಧಾರಿಸುತ್ತದೆ,ಎಲ್ಲ ಖಾಸಗಿ ಶಾಲೆಗಳು ಅನಿವಾರ್ಯವಾಗಿ ಶುಲ್ಕ ಇಳಿಕೆಯ ದಾರಿ ಹಿಡಿಯುತ್ತವೆ.ಇದು ಶಿಕ್ಷಣದ ಸಮಾನತೆಗೆ ದಾರಿಯಾಗುತ್ತದೆ.”ಸಮಾನತೆ ತರಲು ಶಿಕ್ಷಣವೇ ಪ್ರಬಲ ಅಸ್ತ್ರ” ಇಂದು ಆ ಶಿಕ್ಷಣವೇ ಎಲ್ಲ ಮಕ್ಕಳಿಗೂ ಸಮನಾಗಿ ಸಿಗದೇ ಇರುವದು ದೊಡ್ಡ ದುರಂತ.ಇನ್ನಾದರೂ ಎಚ್ಚರಗೊಳ್ಳಿ…(No fees no education…more fees more education) “ದುಡ್ಡು ಇಲ್ಲದಿದ್ದರೆ ಶಿಕ್ಷಣ ಇಲ್ಲ,ಹೆಚ್ಚು ದುಡ್ಡು ಕೊಟ್ಟರೆ ಹೆಚ್ಚು ಉತ್ತಮ ಶಿಕ್ಷಣ” ಎನ್ನುವ ಹೊಲಸು ವ್ಯವಸ್ಥೆ ತೊಲಗಲಿ.ಸರ್ಕಾರಗಳು (ಯಾವದೇ ಪಕ್ಷದ ಸರ್ಕಾರ ಆಗಲಿ) ಶಿಕ್ಷಣ,ಆರೋಗ್ಯ,ಕೃಷಿಗೆ ವಿದ್ಯುತ್ ಈ ಮೂರನ್ನು ಉಚಿತವಾಗಿ ಕೊಟ್ಟರೆ ಸಾಕು ಮತ್ತೇನನ್ನೂ ಉಚಿತವಾಗಿ ಕೊಡುವದು ಬೇಡ…
ಈ ಬರಹ ನಮ್ಮ ಮಕ್ಕಳ ಉಜ್ವಲ
ಭವಿಷ್ಯಕ್ಕಾಗಿ,ದೇಶದ ಹಿತಕ್ಕಾಗಿ….(ನಾನೂ ಒಬ್ಬ ಖಾಸಗಿ ಶಾಲೆಯ ಮುಖ್ಯಸ್ಥನಾಗಿ ಈ ವ್ಯವಸ್ಥೆಯ ಅವ್ಯವಸ್ಥೆ ನೋಡಲಾಗದೆ ಇದನ್ನು ಬರೆದಿರುವೆ.ನಾನು ಖಾಸಗಿ ಶಾಲೆಗಳ ವಿರೋಧಿ ಅಲ್ಲ,ಆದರೆ ಪಾಲಕರ ದಿಕ್ಕು ತಪ್ಪಿಸುವ ರೀತಿ ಜಾಹಿರಾತು ನೀಡಿ ಅಧಿಕ ಶುಲ್ಕ ಪಡೆಯುವ ದಂಧೆ ಮಾಡಿಕೊಂಡಿರುವ ಶಾಲೆಗಳ ವಿರೋಧಿ)ದಯವಿಟ್ಟು ಎಲ್ಲೆಡೆ ಈ ಮಾಹಿತಿ ಕಳಿಸಿ,ಎಲ್ಲರಿಗೂ ತಲುಪಿಸಿ,ಗಟ್ಟಿ ನಿರ್ಧಾರಕ್ಕೆ ಬದ್ಧರಾಗಿ.”ಸರ್ಕಾರಿ ಶಾಲೆಗಳನ್ನು ಉಳಿಸಿ. ನಮ್ಮ ಮಗು ಎಲ್ಲಿರಬೇಕು? ಸರ್ಕಾರಿ ಶಾಲೆಯಲ್ಲಿರಬೇಕು.”👏👏👏👏👏