-ಶಹಾಪೂರ- ನಾದಬ್ರಹ್ಮ ಸಂಗೀತ ಸಾಂಸ್ಕೃತಿಕ ಸಂಸ್ಥೆ (ರಿ)ಇಟಗಿ ವತಿಯಿಂದ ‘ನಗರದ ದಿವ್ಯಜ್ಯೋತಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣ ಹಮ್ಮಿಕೊಂಡಿದ್ದ ವಚನ ಸಂಸ್ಕೃತಿ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳು ಮತ್ತು ಯುವಕರಲ್ಲಿ 12 ನೇ ಶತಮಾನದ ಶರಣರ ನುಡಿ ಮತ್ತು ಆಚಾರ ವಿಚಾರಗಳು 21 ನೇ ಶತಮಾನದ ಯುವಪಿಳಿಗೆಗೆ ಬಹುಮುಖ್ಯವಾಗಿ ಸಂಸ್ಕಾರ ನೀಡುವುದು ಬಹುದೊಡ್ಡ ಕೆಲಸವಾಗಿದೆ. ಮಕ್ಕಳು ಶರಣ ಸಂಸ್ಕೃತಿ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕುತ್ತಿರುವುದು ನಮ್ಮ ಸಂಸ್ಕೃತಿ ಉಳುವಿಗಾಗಿ ಇಂತಹ ಪ್ರತಿಭಾವಂತ ಮಕ್ಕಳು ಪ್ರೇರಣೆಯಾಗಲಿ ನಾದ ಬ್ರಹ್ಮ ಸಂಗೀತ ಸಂಸ್ಕೃತಿಕ ಸಂಸ್ಥೆಯು ಐದಾರು ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸಿಕೊಳ್ಳುವುದಕ್ಕೆ ಇಂತಹ ವೇದಿಕೆಗಳು ಬಹು ಮುಖ್ಯ ಎಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ ಪೂಜ್ಯ ಶ್ರೀ ಚಂದ್ರಶೇಖರ ದೇವರು ಹಿರೆಮಠ ಇಟಗಿ ಆಶಿರ್ವಚನ ನೀಡಿದರು. ಅತಿಥಿಗಳಾಗಿ ಸಾಂಸ್ಕೃತಿಕ ಲೋಕದ ರುವಾರಿಗಳು ಮಡಿವಾಳಪ್ಪ ಹೆಗ್ಗನದೊಡ್ಡಿ ಮಾತನಾಡಿ ಬಸವಣ್ಣನವರು ಸರ್ವಕುಲ ಶಿವಶರಣರ ಸಂಸ್ಕೃತಿ ಪರಂಪರೆಗಳನ್ನು ಉಳಿಸಿ ಬೆಳೆಸುವುದಕ್ಕೆ ಬಹುದೊಡ್ಡ ಶಕ್ತಿಯಾಗಿದ್ದರು. ಬಸವಣ್ಣನವರ ಪ್ರತಿಯೊಂದು ವಚನದಲ್ಲಿ ಸಮಾಜ ಸುಧಾರಣೆಯ ಶಕ್ತಿಯಿದೆ. ಬಹುಶ: ಇಂದಿನ ಮಕ್ಕ ಸಾಮಾಜಿಕ ಜಾಲತಾಣಕ್ಕೆ ಒಳಗಾಗಿ ನಮ್ಮ ಸಂಸ್ಕೃತಿ ಪರಂಪರೆಗಳನ್ನು ಮರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾದಬಹ್ಮ ಸಂಗೀತ ಸಾಂಸ್ಕೃತಿಕ ಸಂಸ್ಥೆಯ ವಚನ ಸಂಸ್ಕೃತಿ ನೃತ್ಯೋತ್ಸವ ಕಾರ್ಯಕ್ರಮ ಮಕ್ಕಳಲ್ಲಿ ನಮ್ಮ ಶರಣರ ಆಚಾರ ವಿಚಾರಗಳು ಸಂಸ್ಕೃತಿಯು ಮಕ್ಕಳಲ್ಲಿ ಇಮ್ಮಡಿಗೊಳಿಸುತ್ತದೆ. ಇಂತಹ ಕಾರ್ಯಕ್ರಮಗಳು ಇಗಿನ ಯುಗಕ್ಕೆ ಅತ್ಯವಶ್ಯಕವಾಗಿದೆ ಎಂದು ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ ಹೇಳಿದರು. ಸಂಸ್ಥೆಯ ಅದ್ಯಕ್ಷರು ಮಲ್ಲಯ್ಯಸ್ವಾಮಿ ಇಟಗಿ ಮಾತನಾಡಿ ವಚನ ಸಂಸ್ಕೃತಿಯ ನೃತ್ಯೋತ್ಸವ ಸರಣಿ ಕಾರ್ಯಕ್ರಮವನ್ನು ನಗರದ ಪ್ರತಿಷ್ಠಿತ ಪ್ರಾರ್ಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಾರ್ಯಕ್ರಮ ಮಾಡುವುದರ ಮುಖಾಂತರ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಬಹು ದೊಡ್ಡ ವೇದಿಕೆ ನಿರ್ಮಿಸಿ ನಗರದ ಮಕ್ಕಳ ವಚನ ನೃತ್ಯೋತ್ಸವ ಕಾರ್ಯಕ್ರಮ ಮಾಡಿ ಮಕ್ಕಳ ಪ್ರತಿಭೆಗಳನ್ನು ಗುರುತಿಸುವ ಕೆಲಸ ನಮ್ಮ ಸಂಸ್ಥೆ ಮಾಡುತ್ತದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚಂದ್ರಶೇಖರ ಹೊಸಮನಿ ಸಂಘ ಸಂಸ್ಥೆಗಳು ಮಾಡುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವುದು ನಮ್ಮ ಧರ್ಮ ಎಂದರು. ಕಾರ್ಯಕ್ರಮದಲ್ಲಿ ಶ್ರೀಕಾ ಮತ್ತು ಸೃಷ್ಟಿ ವಚನ ಗೀತೆಗೆ ಹೆಜ್ಜೆ ಹಾಕುವುದರ ಮುಖಾಂತರ ಪ್ರಾರ್ಥನೆ ಗೀತೆ ಹಾಡಿದರು. ಮೇಘಾ ಸ್ವಾಗತಿಸಿದರು. ದೇವಕ್ಕೆಮ್ಮ, ಗುರುರಾಜ ಸರ್ ಮತ್ತು ಭಾಗ್ಯಶ್ರೀ ಗುರುಮಾತೆಯರು ಮತ್ತು ಸಿದ್ದಯ್ಯಸ್ವಾಮಿ ಶಾಸ್ತ್ರಿಗಳು ಉಪಸ್ಥಿತರಿದ್ದರು.