ರಾಜರಾಜೇಶ್ವರಿ ಸಭಾಭವನ ಕಲಬುರ್ಗಿಯಲ್ಲಿ ದಿನಾಂಕ 25.08.2024 ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಕರ್ನಾಟಕ ರಾಜ್ಯ ಕಾರ್ಯಧ್ಯಕ್ಷರಾದ ಚನ್ನಯ್ಯ ವಸ್ತ್ರದ್ ಅವರು ಕಲ್ಬುರ್ಗಿಯ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ವಿವಿಧ ಸಾಮಾಜಿಕ ಸಾಧಕರ ಗೌರವ ಸಮರ್ಪಣೆ ಸಮಾರಂಭ ದಲ್ಲಿ ಎಚ್.ಜಿ ರಮೇಶ್ ಕುಣಿಗಲ್ ಸಂಸ್ಥಾಪಕ ರಾಜ್ಯಾಧ್ಯಕ್ಷರು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕರ್ನಾಟಕ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯರು ಇವರಿಗೆ ವಿಶೇಷ ಸನ್ಮಾನದ ಜೊತೆಗೆ ಶ್ರೀ ಮ. ನಿ. ಪ್ರ. ಡಾ. ಶಿವಾನಂದ್ ಮಹಾಸ್ವಾಮಿಗಳು, ದಾಸೋಹ ವೀರಪ್ಪ ಮಠ ಸೊನ್ನ ಸಾಮಾಜಿಕ ಸೇವಾ ಕ್ಷೇತ್ರ, ಲಕ್ಷ್ಮಣ್ ಎಸ್ ಸೋನಾ ಕಾಂಬಳೆ, ಖ್ಯಾತ ಉದ್ದಿಮೆದಾರರು ಕಲ್ಬುರ್ಗಿ ಸಾಮಾಜಿಕ ಸೇವ ಕ್ಷೇತ್ರ, ರೇವಯ್ಯ ವಸ್ತ್ರದ ಮಠ ಸಂಗೀತ ಶಿಕ್ಷಕರು ಅಪ್ಪ ವಿಶ್ವವಿದ್ಯಾಲಯ ಕಲ್ಬುರ್ಗಿ ಸಂಗೀತ ಕ್ಷೇತ್ರ, ಮಡಿವಾಳಯ್ಯ ಗದಗಿಮಠ, ತಾತ ಪ್ರವಚನಕಾರರು ಆಧ್ಯಾತ್ಮಿಕ ಕ್ಷೇತ್ರ, ಅಣ್ಣರಾವ್ ನಿಷ್ಟಿ ದೇಶಮುಖ್ ಪ್ರಗತಿಪರ ರೈತರು ಕೃಷಿ ಕ್ಷೇತ್ರ, ಶಿವಾನಂದ್ ಕುಂಟೋಜ ಮಠ ಅಪ್ಪರ್ ಜಿಲ್ಲಾ ನ್ಯಾಯವಾದಿಗಳು ಕಲಬುರಗಿ ಸಾಮಾಜಿಕ ಕ್ಷೇತ್ರ, ಪೈಗಂಬರ್ ದಿಡ್ಡಿ ಪೊಲೀಸ್ ಇಲಾಖೆ ಕಮಲಾಪುರ ಸಾಮಾಜಿಕ ಕ್ಷೇತ್ರ, ಸುರೇಶ್ ಬಿ ಅಂತರಾಷ್ಟ್ರೀಯ ಕ್ರೀಡಾಪಟು ಕ್ರೀಡಾ ಕ್ಷೇತ್ರ ಉಡುಪಿ, ಕೆ ಎಮ್ ಬಾರಿ ಸಮಾಜ ಸೇವಕರು ಸಾಮಾಜಿಕ ಸೇವಾ ಕ್ಷೇತ್ರ ಚಿಂಚೋಳಿ, ಇವರೆಲ್ಲ ಸಾಧನೆಗೈದ ಸಾಧಕರಿಗೆ ಗೌರವ ಸಮರ್ಪಣ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಪತ್ರಿಕಾಗೋಷ್ಠಿಯಲ್ಲಿ ಇಸ್ಮಯಿಲ್ ಎಂ ಶೇಕ್ ಉಪಾಧ್ಯಕ್ಷರು ಕಲ್ಯಾಣ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ, ಪ್ರಕಾಶ್ ನಿಷ್ಠಿ, ದೇಶಮುಖ್ ಜಿಲ್ಲಾ ಗೌರವಾಧ್ಯಕ್ಷರು, ರಾಜೇಂದ್ರ ಪ್ರಸಾದ್ ನೂತನ ಕಲಬುರ್ಗಿ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು