ಹುಣಸಗಿ ಪಟ್ಟಣದಲ್ಲಿ ದೇವಾಪುರ-ಮನಗೂಳಿ ರಾಜ್ಯ ಹೆದ್ದಾರಿ ಮೇಲೆ ಬಿಡಾಡಿ ದನಗಳು ಮಲಗುವುದರಿಂದ, ತಿರುಗಾಡುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಚಾಲಕರಿಗೆ ವಾಹನ ಚಲಾಯಿಸಲು ತುಂಬಾ ತೊಂದರೆಗಳು ಆಗ್ತಾ ಇರುವುದನ್ನು ಖಂಡಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣ ಗೌಡ ಬಣ ) ತಾಲೂಕ ಘಟಕ ವತಿಯಿಂದ ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಮಾತಾನಾಡಿದ ಕರವೇ ಅಧ್ಯಕ್ಷ ಬಸವರಾಜ ಚನ್ನೂರ ಅವರು ಹುಣಸಗಿ ಪಟ್ಟಣದಲ್ಲಿ ಬಿಡಾಡಿ ದನಗಳ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕರವೇ ತಾಲೂಕ ಘಟಕ ವತಿಯಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷರಾದ ಬಸವರಾಜ ಚನ್ನುರು, ಶಿವಲಿಂಗ ಸಾಹುಕಾರ್ ಪಟ್ಟಣಶೆಟ್ಟಿ, ಮೌನೇಶ್ ಸಾಹುಕಾರ್ ಚಿಂಚೋಳಿ, ರಾಜು ಅವರಾದಿ, ನಿಂಗಣ್ಣ ಗುತ್ತೇದಾರ, ನಂದನಗೌಡ ಬಿರಾದಾರ, ಚನ್ನುಬಸ್ಸು, ಸುಭಾನ್ ನಬೋಜಿ,ಬಸವರಾಜ ಎಸ್, ಎಚ್, ಮಲ್ಲು ಮಾಳಿ,ಈಶ್ವರ್ ಅರಕೇರಿ ಜೆ ಇತರರು ಇದ್ದರು.