ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು

YDL NEWS
1 Min Read

ಯಾದಗಿರಿ : ನವೆಂಬರ್ 01, (ಕ.ವಾ) : ಸಂಗೀತ ಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದ ಶ್ರೀ ಶರಣಕುಮಾರ ತಂದೆ ಹಣಮಂತ್ರಾಯ, ಕಲೆ ಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಶಹಾಪೂರ ತಾಲೂಕಿನ ಮಡ್ನಾಳ ಗ್ರಾಮದ ಶ್ರೀ ಶರಣಪ್ಪ ತಂದೆ ಅಯ್ಯಪ್ಪ, ಸಾಹಿತ್ಯ ಕ್ಷೇತ್ರ ಸೇವೆಸಲ್ಲಿಸಿರುವ ಯಾದಗಿರಿ ನಗರ ಶಿವನಗರ ಶ್ರೀ ಮಡಿವಾಳಪ್ಪ ತಂದೆ ಸಂಗಪ್ಪ ಸಜ್ಜನ, ಸಮಾಜ ಸೇವೆಸಲ್ಲಿಸಿರುವ ಯಾದಗಿರಿ ನಗರದ ಹೊಸಹಳ್ಳಿ ಕ್ರಾಸ್ ಶ್ರೀಮತಿ ಜಯಲಕ್ಷಿ್ಮÃ ಆರ್, ಪ್ರತಿಕೋದ್ಯಮ ಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಶ್ರೀ ಬಸವಂತರಾಯಗೌಡ ತಂದೆ ನಿಂಗನಗೌಡ ಪಾಟೀಲ್, ಕ್ರೀಡಾ ಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದ ಕು.ಮುತ್ತಮ್ಮ ಬಿ.ಸಾ, ಶಾಂತಿ ಸೌಹಾರ್ದತೆ ಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಸುರಪುರ ತಾಲೂಕಿನ ಸುರಪುರ ನಗರ ಶ್ರೀ ವೆಂಕಟೇಶ್ವರ ತಂದೆ ಧರ್ಮಣ್ಣ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

 

ಸಂಸ್ಕೃತಿಕಾ ಕಾರ್ಯಕ್ರಮಗಳು ಯಾದಗಿರಿ ಖಂಡೇವಾಲ ಆಂಗ್ಲ ಮಾದ್ಯಮ ಪ್ರೌಢ ಶಾಲೆ (150 ಮಕ್ಕಳಿಂದ), ಯಾದಗಿರಿ ಸಪ್ತಗಿರಿ ಪ್ರೌಢ ಶಾಲಾ (150 ಮಕ್ಕಳಿಂದ), ಯಾದಗಿರಿ ಚಿರಂಜೀವಿ ಪ್ರೌಢ ಶಾಲಾ (150 ಮಕ್ಕಳಿಂದ), ಶ್ರೀ ಮೈಲಾರಲಿಂಗೇಶ್ವರ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಟ್ರಸ್ಟ್, ನ್ಯೂ ಕ್ರೀಯೇಷನ್ ಡ್ಯಾನ್ಸ್ ಅಕಾಡೆಮಿ ಮಕ್ಕಳಿಂದ ನೃತ್ಯ, ಎ.ಬಿ.ಸಿ.ಡಿ ಡ್ಯಾನ್ಸ್ ಸ್ಕೂಲ್ ಅವರಿಂದ ಸಂಸ್ಕೃತಿ ನೃತ್ಯ ಪ್ರದರ್ಶಿಸಲಾಯಿತು.

Share This Article