ಗಡ್ಡಿ ಗದ್ದೇಮ್ಮ ಜಾತ್ರೆಯಲ್ಲಿ ನಕಲಿ ಮದ್ಯ ಮಾರಾಟ, ದಂಧೆಕೋರರಿಗೆ ಸಾಥ್ ಕೊಟ್ಟರಾ ಅಬಕಾರಿ, ಪೊಲೀಸ್ ಸಿಬ್ಬಂದಿ.

KTN Admin
3 Min Read

ದೇವಿ ದರ್ಶನ ಪಡೆದು ಪುನೀತರಾಗಲು ಆಗಮಿಸುವ ಭಕ್ತರನ್ನ ಟಾರ್ಗೆಟ್ ಮಾಡಿ ಗಡ್ಡಿ ಗದ್ದೇಮ್ಮದೇವಿ ಜಾತ್ರೆಯಲ್ಲಿ ಅಕ್ರಮವಾಗಿ ಮದ್ಯ ರಾಜಾರೋಷವಾಗಿ ಮಾರಾಟವಾಗ್ತದೆ.

ನಾರಾಯಣಪುರ: ಪ್ರತಿವರ್ಷದಂತೆ ಈ ಬಾರಿಯೂ ಉತ್ತರ ಕರ್ನಾಟಕದ ಸುಪ್ರಸಿದ್ಧ ಶ್ರೀ ಗಡ್ಡಿ ಗದ್ದೇಮ್ಮ ದೇವಿ ಜಾತ್ರೆ ಅದ್ದೂರಿಯಾಗಿ ನಡೆಸಲಾಗುತ್ತಿದೆ. ಆದ್ರೆ ಇಲ್ಲಿಗೆ ಬರುವ ಭಕ್ತರನ್ನೇ ಟಾರ್ಗೆಟ್​ ಮಾಡಿ ಗಡ್ಡಿ ಶ್ರೀಗದ್ದೇಮ್ಮ ದೇವಿ ಸನ್ನಿಧಾನದಲ್ಲಿ ಮದ್ಯದ ಘಮ ಹೆಚ್ಚಾಗಿದೆ. ಅಕ್ರಮವಾಗಿ ರಾಜಾರೋಷವಾಗಿ ನಕಲಿ ಮದ್ಯ ಮಾರಾಟ ಮಾಡಲಾಗುತ್ತಿದೆ.

ಭಾರತ ಹುಣ್ಣುಮೆಗೆ ಕರ್ನಾಟಕದ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಭಂಡಾರದೊಡತಿ ಭಕ್ತರ ಆರಾಧ್ಯದೈವ ಗಡ್ಡಿ ಗದ್ದಮ್ಮ ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಹೊರ ರಾಜ್ಯದಿಂದಲೂ ಅಪಾರ ಪ್ರಮಾಣದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಭಾರತ ಹುಣ್ಣುಮೆ ದಿನದಂದೂ ದೇವಿ ದರ್ಶನ ಪಡೆಯುವುದರಿಂದ ಕಷ್ಟ ಕಾರ್ಪಣ್ಯಗಳು ದೂರ ಆಗುತ್ತವೆ ಅನ್ನೋ ನಂಬಿಕೆ ಇದೆ. ಹೀಗಾಗಿ ಅಪಾರ ಸಂಖ್ಯೆಯಲ್ಲಿ ಹುಣ್ಣುಮೆ ಒಂದು ದಿನ ಮುಂಚತವಾಗಿ ಭಕ್ತರ ದಂಡು ಜಾತ್ರೆಗೆ ಹರಿದು ಬರುತ್ತೆ. ಏಳು ಗ್ರಾಮಗಳಲ್ಲಿ ಸಂಚಾರಿಸಿ ಉಡಿತುಂಬಿಕೊಂಡು ದೇವಿ ಬರುವದರಿಂದ ಒಂದು ದಿನ ಮೊದಲು ಬಂದು ದೇವಿಗೆ ವಿಶೇಷ ಖಾದ್ಯಗಳನ್ನ ಸಿದ್ದಪಡಿಸಿ ನೈವೇದ್ಯ ಹಿಡಿದು ಜಾತ್ರೆ ಆಚರಿಸುವುದು ಸಂಪ್ರದಾಯ.

ಜಾತ್ರೆಯಲ್ಲಿ ಬಹಿರಂಗವಾಗಿ ನಕಲಿ‌ ಮಧ್ಯವನ್ನು ಮಾರಾಟ ಮಾಡುತ್ತಿರುವುದು

https://youtu.be/_55wxymTDNU?si=0P5g1KMbji1o7kOS

ಇನ್ನೂ ದೇವಿ ದರ್ಶನ ಪಡೆದು ಪುನೀತರಾಗಲು ಆಗಮಿಸುವ ಭಕ್ತರನ್ನ ಟಾರ್ಗೆಟ್ ಮಾಡಿ ಗದ್ದೇಮ್ಮ ದೇವಿ ಜಾತ್ರೆಯಲ್ಲಿ ಅಕ್ರಮವಾಗಿ ನಕಲಿ ಮದ್ಯ ರಾಜಾರೋಷವಾಗಿ ಮಾರಾಟ ಮಾಡುತ್ತಾರೆ. ಸುಮಾರು ಎಕರೆ ಪ್ರದೇಶದಲ್ಲಿ ಅದ್ದೂರಿ ಜಾತ್ರೆ ನಡೆಯುತ್ತಿದ್ದು ವಿವಿಧ ಶಾಪ್ ಗಳು ಜಾತ್ರೆಯಲ್ಲಿ ತೆರೆದಿರುತ್ತಾರೆ. ದೇವಿಯ ಸನ್ನಿಧಾನದಲ್ಲಿದ್ದುಕೊಂಡೇ ಕೆಲವರು ಭಕ್ತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ಗಡ್ಡಿ ಗದ್ದೇಮ್ಮ‌ದೇವಿ ಗ್ರಾಮದಲ್ಲಿ ನಕಲಿ ಮದ್ಯವನ್ನು ಮಾರಾಟಗಾರರು ಕೋಲ್ಡ್ರಿಂಕ್ಸ್ ಶಾಪ್ ನ ರೀತಿಯಲ್ಲಿ ನಕಲಿ ಮದ್ಯವನ್ನು ಅಂಗಡಿ ತೆರದು ಪ್ರತಿ ವರ್ಷವು ಅಕ್ರಮವಾಗಿ ನಕಲಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಕೆಲವು ಅಂಗಡಿಗಳಂತೂ ಮುಂಬಾಗದಲ್ಲೆ ಬಾರ್ ಮಾದರಿಯಲ್ಲೇ ರೆಡಿ ಮಾಡಿ ಅಲ್ಲೇ ಕುಡಿಯುವ ವ್ಯವಸ್ಥೆ ಮಾಡಿದ್ದಾರೆ.

ಚಿಕ್ಕ ಚಿಕ್ಕ ಮಕ್ಕಳಿಂದಲೂ ಮದ್ಯ ಮಾರಾಟ, ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ
ಹೌದು ಗಡ್ಡಿ ಗ್ರಾಮದದಲ್ಲಿ ಒಂದು ಕಡೆ ಅದ್ದೂರಿಯಾಗಿ ಜಾತ್ರೆ ನಡೆಯುತ್ತಿದ್ರೇ ಇನ್ನೊಂದು ಕಡೆ ಜಾತ್ರೆಯಲ್ಲೇ ಮೂಲೆ ಮೂಲೆಯಲ್ಲಿ ಅಸಲಿ ಸರಾಯಿ ಅಂತೆ ಇರುವ ನಕಲಿ ಮದ್ಯವನ್ನು ಮಾರಾಟವಾಗುತ್ತಿದೆ. ಇದರಲ್ಲಿ ಚಿಕ್ಕ ಮಕ್ಕಳು ಕೂಡ ಟೆಟ್ರಾ ಪಾಕೆಟ್‌ ಗಳನ್ನ ಹಣ ಪಡೆದು ಮಾರಾಟ ಮಾಡುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ. ಈ ಅಕ್ರಮ ಸಾರಾಯಿ ಮಾರಾಟ ಮಾಡುವ ದಂಧೆ ರಾಜಾರೋಷವಾಗಿ ಮಾಡುತ್ತಿದ್ದಾರೆ. ದೇವಿಯ ಭಂಡಾರ ಸಿಗಬೇಕಿದ್ದ ಜಾಗದಲ್ಲಿ ಇದೀಗ ನಕಲಿ ಎಣ್ಣೆ ಸಿಗುತ್ತಿದ್ದು ನಕಲಿ ಮಧ್ಯದಿಂದ ಸರ್ಕಾರದ ಬೊಕ್ಕಸಕ್ಕೆ ಪೆಟ್ಟು ಇನ್ನೊಂದು ಅಕ್ರಮಗಳನ್ನು ರಾಜಾರೋಷವಾಗಿ ಮಾಡುತ್ತಾರೆ ಇದಕ್ಕೆ ನೇರ ಹೊಣೆ ಅಂತಾ ಕೆಲ ಭಕ್ತರು, ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಅಕ್ರಮಕೋರರಿಗೆ ಸಾಥ್ ನೀಡಿದ್ರಾ ಅಬಕಾರಿ ಹಾಗೂ ಪೊಲೀಸ್ ಸಿಬ್ಬಂದಿ
ಇನ್ನೂ ಈ ವಿಚಾರ ಅಬಕಾರಿ ಇಲಾಖೆ ಸಿಬ್ಬಂದಿಗೂ ಗೊತ್ತಿದೆ. ಪ್ರತಿ ವರ್ಷ ಜಾತ್ರೆಯಲ್ಲಿ ಮಧ್ಯ ಮಾರಾಟ ಮಾಡಬಾರದೆಂದು ಸಾಮಾಜಿಕ ಹೋರಾಟಗಾರ, ಪತ್ರಕರ್ತ, ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾದ ಅಮರೇಶಣ್ಣ ಕಾಮನಕೇರಿ ತಹಶಿಲ್ದಾರರಿಗೆ,ಹುಣಸಗಿ ಸಿಪಿಆಯ್ ಯವರಿಗೆ ನಾರಾಯಣಪುರ ಪೋಲಿಸ ಠಾಣೆಗೆ ಲಿಖಿತ ದೂರು ಸಲ್ಲಿಸುತ್ತಾ ಬಂದಿದ್ದಾರೆ. ಜಾತ್ರೆಯಲ್ಲಿ ನಕಲಿ ಸರಾಯಿಯನ್ನು ಮಾರುತ್ತಾರೆ ಎಂದು ಅಧಿಕಾರಿಗಳಿಗೆ ಗೊತ್ತು ಮಾರಾಟಗಾರ ಜೋತೆ ಒಪ್ಪಂದ ಮಾಡಿಕೊಂಡಿದ್ದಾರೆ ಅನುವುದು ಸ್ಪಷ್ಟವಾಗಿತ್ತದೆ. ಮಧ್ಯ ಮಾರಾಟಗಾರರಿಂದ ಹಣ ಪಡೆದು ಸೈಲೆಂಟ್ ಆಗಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬರುತ್ತಿದೆ. ಇತ್ತ ಹುಣಸಗಿ ಮತ್ತು ನಾರಾಯಣಪುರ ಪೊಲೀಸ್ ಠಾಣೆಯ ಕೆಲ ಸಿಬ್ಬಂದಿ ಕೂಡ ಇದರಲ್ಲಿ ಭಾಗಿಯಾಗಿರುವ ಶಂಕೆ ಇದ್ದು ಹೀಗಾಗಿ ಅಕ್ರಮಕ್ಕೆ ಬ್ರೇಕ್ ಹಾಕಬೇಕಿದ್ದವರು ಇದೀಗ ಸಾಥ್ ಕೊಟ್ರಾ ಅನ್ನೋ ಆರೋಪ‌ ಕೇಳಿ ಬರುತ್ತಿದೆ‌. ಸದ್ಯ ಜಾತ್ರೆ ಮುಗಿಯುವವರೆಗೂ ದೇವಸ್ಥಾನ ಕೆಲವು ಕಿಮೀ ವರೆಗೂ ಮದ್ಯ ಮಾರಾಟಕ್ಕೆ ನಿಷೇಧ ಹಾಕಿದ್ದು ಹೀಗಿದ್ರೂ ರಾಜಾರೋಷವಾಗಿ ಮದ್ಯ ಮಾರಾಟ ಆಗ್ತಿರುವುದರಲ್ಲಿ ಅಧಿಕಾರಿಗಳು ಶಾಮೀಲಾಗಿರುವುದು ಸ್ಪಷ್ಟ ಆಗ್ತಿದೆ.

https://youtu.be/_55wxymTDNU?si=0P5g1KMbji1o7kOS

ಜಾತ್ರೆಯಲ್ಲಿ ಬಹಿರಂಗ ಮದ್ಯದ ಅಂಗಡಿಗಳನ್ನು ಹಾಕಿಸಿ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳು ತಕ್ಷಣವೇ ಅಮಾನತು ಮಾಡಬೇಕು ಜಾತ್ರೆಯಲ್ಲಿ ನಕಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿ ಕಾನೂನು ಪಾಲಕರೆ ಕಾನೂನು ಗಾಳಿಗೆ ತೂರಿದ್ದಾರೆ ಯಾದಗಿರಿ ಜಿಲ್ಲಾಧಿಕಾರಿ, ಜಿಲ್ಲ ಪೋಲಿಸ್ ವರಿಷ್ಠಾಧಿಕಾರಿಗಳು ಸಮಗ್ರ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಪತ್ರಕರ್ತರು ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾ ಅಮರೇಶಣ್ಣ ಕಾಮನಕೇರಿ ಒತ್ತಾಯಿಸಿದ್ದಾರೆ

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ