ಸಾಕ್ಷಿ ಸಮೇತ ನಕಲಿ ಮಧ್ಯ ಮಾರಾಟ ವರದಿ ಬಿತ್ತರಿಸಿದರು ಕ್ರಮಕೈಗೋಳದೆ ಮಾರಾಟಗಾರ ಬೆಂಬಲಕ್ಕೆ ನಿಂತ ಪೋಲಿಸ ಇಲಾಖೆ

KTN Admin
2 Min Read

 

ನಾರಾಯಣಪುರ : ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ನಾರಾಯಣಪುರ ಪೋಲಿಸ ಠಾಣೆಯ ವ್ಯಾಪ್ತಿಯ ದೇವರಗಡ್ಡಿ ಶ್ರೀ ಗಡ್ಡಿ ಗದ್ದೇಮ್ಮ ದೇವಿಯ ಜಾತ್ರೆಯಲ್ಲಿ ಬಹಿರಂಗವಾಗಿ ನಕಲಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ದಿನಾಂಕ 13-02-2025 ರಂದು ವಿಡಿಯೋ ಸಾಕ್ಷಿ ಸಮೇತ ವರದಿ ಮಾಡಿದರು ಮಧ್ಯ ಮಾರಾಟಗಾರರ ಮೇಲೆ ಕಠಿಣ ಕಾನೂನು ಕ್ರಮಕೈಬೇಕಾದ ನಾರಾಯಣಪುರ ಪೋಲಿಸ ಠಾಣೆಯ ಸಿಬ್ಬಂದಿ ಕ್ರಮಕೈಗೋಳದೆ ನಕಲಿ ಮಧ್ಯ ಮಾರಾಟಗಾರ ಬೆಂಬಲಕ್ಕೆ ನಿಂತು ದಿನಾಂಕ 14-02-2025ರ ಜಾತ್ರೆಯ ರಥೋತ್ಸವದಲ್ಲೂ ಪೋಲಿಸರು ನಕಲಿ‌ ಮದ್ಯ ಮಾರಾಟ ಮಾಡುಲು ಅವಕಾಶ ಕಲ್ಪಿಸಿದ್ದಾರೆ.


ಜಾತ್ರಾ ಬಂದೋಬಸ್ತಗೆ ನಾರಾಯಣಪುರ ಠಾಣಾ ಪೋಲಿಸ ಸಿಬ್ಬಂದಿ ಅಲ್ಲದೆ ಹುಣಸಗಿ ತಾಲ್ಲೂಕಿನ ವಿವಿಧ ಪೋಲಿಸ ಠಾಣಾ ಸಿಬ್ಬಂದಿಯನ್ನು ಜಾತ್ರೆಯ ಬಂದೋಬಸ್ಥಗೆ ಕರೆಸಿಕೋಳುತ್ತಾರೆ. ಜಾತ್ರೆಯಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು. ಆದರೆ ಜಾತ್ರೆಯಲ್ಲಿ ನಕಲಿ ಮದ್ಯ ಹಾಗೂ ಅಕ್ರಮ ದಂದೆಕೋರ ಮೇಲೆ ಎಪ ಆಯ ಆರ್ ದಾಖಲಿಸದೆ ತಾವೇ ಸ್ವತಃ ಅಕ್ರಮ ಮಧ್ಯ ಮಾರಾಟಗಾರಿಗೆ ಜಾತ್ರೆಯಲ್ಲಿ ರಾಜಾರೋಷವಾಗಿ ನಕಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುತ್ತಾರೆ.ಪೋಲಿಸ ಇಲಾಖೆ ಅಕ್ರಮ ತಡೆಗೆ ಇದೆಯೋ ಅಥವಾ ಅಕ್ರಮ ಮಾಡುವವರ ಪರ ಇದೆಯೋ.? ಎಂದು ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಜಾತ್ರೆಗೆ ಬಂದ ಭಕ್ತಾಧಿಗಳಂತು ಪೋಲಿಸರುದು ಇಲ್ಲಿ ಏನು‌ ನೆಡಯುವದಿಲ್ಲ ! ಎಂದು ಮಾತಾಡಿಕೋಳುತ್ತಿದ್ದಾರೆ.ಹಣ ಯಾರು ಕೋಡುತ್ತಾರೆ ಅವರ ಪರ ನಾರಾಯಣಪುರ ಪೋಲಿಸರು ಕೆಲಸ ಮಾಡುತ್ತಾರೆ ಹಣ ನೀಡಿ ಮಟಕಾ,ಇಸ್ಪೀಟು, ಕೋಳಿ ಪಂದ್ಯ ಎಲ್ಲ ಅಕ್ರಮ ದಂದೆ ಮಾಡುತ್ತಾರೆ ಎಂದು ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಕಲಿ‌ ಸರಾಯಿ‌ ಮಾರಾಟಗಾರ ಬಗ್ಗೆ ಜೀವದ ಅಂಗಿಲ್ಲದೆ ವಿಡಿಯೋ ಚಿತ್ರೀಕರಣ ಮಾಡಿ ವರದಿ ಬಿತ್ತರಿಸಿದರು ಕಾನೂನು ಕ್ರಮಕೈಗೋಳದೆ ಅಕ್ರಮಕ್ಕೆ ಸಾಥ ನೀಡುತ್ತಾರೆ ಎಂದರೆ ಯಾವ ರೀತಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದಾರೆ ನೋಡಿ

ಯಾದಗಿರಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳೆ ನಾರಾಯಣಪುರ ಠಾಣೆಯಲ್ಲಿ ಅಕ್ರಮಕ್ಕೆ ಸಾಥ ನೀಡುತ್ತಿರುವವರ ಮೇಲೆ ಕ್ರಮಗೋಳುತ್ತಿರಾ ಅಥವಾ ನಿವು ಅಕ್ರಮಕ್ಕೆ ಸಾಥ ನೀಡಿದ ನಾರಾಯಣಪುರ ಪೋಲಿಸ ಠಾಣಾ ಸಿಬ್ಬಂದಿಗೆ ಸಾಥ ನೀಡುತ್ತಿರ.ತಾವು ದಕ್ಷ ಪ್ರಾಮಾಣಿಕ ಅಧಿಕಾರಿ ಎಂದು‌ ಪೋಲಿಸ ಇಲಾಖೆಯಲ್ಲಿ ಮಾತಾಡಿಕೋಳುತ್ತಾರೆ.ಈ ಪ್ರಕರಣದಲ್ಲಿ ಸಾಕ್ಷಿ ಸಮೇತವಾಗಿ ವರದಿ ನೀಡಿದೆವೆ ಅಕ್ರಮದಲ್ಲಿ ಭಾಗಿಯಾದವರ ಮೇಲೆ ಕಠಣ ಕ್ರಮಕೈಗೋಳಿ

ಪೋಲಿಸ ಇಲಾಖೆಗೆ ಇರುವ ಘನತೆ ಗೌರವ ಹಾಳು ಮಾಡುತ್ತಿರುವ ನಾರಾಯಣಪುರ ಪೋಲಿಸ ಸಿಬ್ಬಂದಿಯ ಮೇಲೆ ಕಠಿಣ ಕಾನೂನು ಕ್ರಮವನ್ನು ಯಾದಗಿರಿ ಜಿಲ್ಲಾ ಪೋಲಿಸವರಿಷ್ಠಾಧಿಗಳು ಕೈಗೊಂಡು ಜನರಿಗೆ ಪೋಲಿಸ ಇಲಾಖೆ ಮೇಲೆ ಇರುವ ಗೌರವವನ್ನು ಉಳಿಸಬೇಕು ಎಂದು ವಾಹಿನಿ ಆಗ್ರಹ ಮಾಡುತ್ತದೆ

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ