ಅನಧಿಕೃತವಾಗಿ ನಿರ್ಮಿಸಿದ ಅಂಗಡಿಯೊಂದನ್ನು ತೆರವುಗೊಳಿಸಿ ಬಸ್ ನಿಲ್ದಾಣ ನಿರ್ಮಿಸುವಂತೆ ಶ್ರಾವಣಕುಮಾರ ನಾಯಕ ಆಗ್ರಹ.

YDL NEWS
1 Min Read

ಹುಣಸಗಿ : ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಇಂದು ಸುರಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರಾವಣಕುಮಾರ್ ನಾಯಕ ನೇತೃತ್ವದಲ್ಲಿ.

ಹುಣಸಗಿ ತಹಸೀಲ್ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ಮಾಡಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಶ್ರಾವಣಕುಮಾರ್ ನಾಯಕ ಮಾತನಾಡುತ್ತಾ ಹುಣಸಗಿ ತಾಲೂಕಿನ ಕಚಕನೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಚಿಕ್ಕನಹಳ್ಳಿ ಗ್ರಾಮದಲ್ಲಿರುವ ಸಾರ್ವಜನಿಕ ಬಸ್ ನಿಲ್ದಾಣವನ್ನು ಅಕ್ರಮವಾಗಿ ತೆರವುಗೊಳಿಸಿ ಪಂಚಾಯತ್ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಅಂಗಡಿಯೊಂದನ್ನಾ ನಿರ್ಮಾಣ ಮಾಡಿದ ನಿಂಗಪ್ಪ ತಂದೆ ಭೀಮಣ್ಣ ಹುಲಕಲ್ ಮೇಲೆ ಕಾನೂನು ಕ್ರಮ ಕೈಗೊಳ್ಳು ಬೇಕು , ಇತನಿಗೆ ಚಿಕ್ಕನಹಳ್ಳಿ ಗ್ರಾಮದ ಸಾರ್ವಜನಿಕರು ಪ್ರಶ್ನೆ ಮಾಡಿದರೆ ರಾಜಾರೋಷವಾಗಿ ಅಂಗಡಿಯನ್ನು ನಾನೇ ನಡೆಸಿಕೊಂಡು ಹೋಗುತ್ತೇನೆ ಯಾರು ಏನ್ ಮಾಡ್ತಾರೆ ಎಂದು ದುರಹಂಕಾರದ ಮಾತುಗಳನ್ನಾಡಿ ನನ್ನ ಅಂಗಡಿ ತಂಟೆಗೆ ಬಂದರೆ ನಿಮ್ಮನ್ನಾ ಜೀವಸಹಿತ ಉಳಿಸೋದಿಲ್ಲಾ ಎಂದು ಜೀವ ಬೆದರಿಕೆ ಹಾಕುತ್ತಾನೆ.

ಎಂಬುದು ಸಾರ್ವಜನಿಕರ ಆರೋಪ ಅಂಗಡಿಯಲ್ಲಿ ಹಾಡುಹಗಲೆ ರಾಜಾ ರೋಷವಾಗಿ ಅಕ್ರಮವಾಗಿ ಮಧ್ಯ ಮಾರಾಟ ಮಾಡಿ ಗ್ರಾಮದಲ್ಲಿ ಸಣ್ಣ ಸಣ್ಣ ಮಕ್ಕಳು ಹಾಗೂ ಪುರುಷರು ದುಡಿದ ಹಣಕ್ಕಿಂತ ಹೆಚ್ಚಿನ ಹಣವನ್ನು ಮಧ್ಯಪಾನಕ್ಕೆ ಹಾಳು ಮಾಡಿ ಹೆಂಡರೊಂದಿಗೆ ಜಗಳ ಮಾಡಿ ಎಷ್ಟು ಸಂಸಾರಗಳು ಹಾಳಾಗಿ ಹೋಗಿರುವ ಉದಾಹರಣೆಗಳಿವೆ

ಆದ ಕಾರಣ ತಾವುಗಳು ನಿಂಗಪ್ಪ ತಂದೆ ಭೀಮಣ್ಣ ಹುಲಕಲ್ ಎಂಬಾತನ ವಿರುದ್ದ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಅಕ್ರಮವಾಗಿ ನಿರ್ಮಿಸಿದ ಅಂಗಡಿಯನ್ನು ತೆರವುಗೊಳಿಸಿ ಪುನಃ ಸಾರ್ವಜನಿಕ ಬಸ್ ನಿಲ್ದಾಣ ನಿರ್ಮಾಣ ಮಾಡಲು ಅನುಕೂಲ ಮಾಡಿ ಸಾರ್ವಜನಿಕರು ಹಾಗೂ ವಯೋವೃದ್ಧರು, ವಿದ್ಯಾರ್ಥಿಗಳು ಕುಳಿತುಕೊಳ್ಳಲು ಬಸ್ ನಿಲ್ದಾಣ ನಿರ್ಮಿಸ ಬೇಕು ಎಂದು ಸುರಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರಾವಣಕುಮಾರ್ ನಾಯಕ 

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಕೃಷ್ಣಾ ಮಂಗಿಹಾಳ, ಕುಮಾರಗೌಡ ಬಿರೆದಾರ,ಶ್ರೀಕಾಂತ್ ದೊರೆ ಕಚಕನೂರ್,ಪರಮಾನಂದ ಭಜಂತ್ರಿ,ಮಹೇಶ್ ಗುತ್ತೇದಾರ್,ಬಸವರಾಜ್ ಕಟ್ಟಿಮನಿ,ಹಣಮಂತ ಹಳ್ಳಿಮನಿ,ಮಹೇಶ್ ಬಿ ಕೋನಾಳ ಹಾಗೂ ಜೆಡಿಎಸ್ & ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Share This Article