ೃನಾವೀನ್ಯತೆ ಪ್ರವರ್ಧಮಾನಕ್ಕೆ ಬರಲು ಅನುವು ಮಾಡಿಕೊಡುವ ಕರ್ನಾಟಕ ನಾವೀನ್ಯತೆ ಪ್ರಾಧಿಕಾರದ ಅಂತಿಮ ನೀಲನಕ್ಷೆಯನ್ನು ಪರಿಶೀಲಿಸಲಾಗಿದ್ದು, ಉದ್ದೇಶಿತ ಪ್ರಾಧಿಕಾರವನ್ನು ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (KITS), ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ ನಿರ್ವಹಿಸುತ್ತದೆ, ಇದರ ಅಡಿಯಲ್ಲಿ ತಾಂತ್ರಿಕ ತಜ್ಞರು, ಕಾನೂನು ವೃತ್ತಿಪರರು, ಶಿಕ್ಷಣ ತಜ್ಞರು ಮತ್ತು ಉದ್ಯಮ ತಜ್ಞರನ್ನು ಒಳಗೊಂಡ ತಾಂತ್ರಿಕ ಘಟಕವನ್ನು ರಚಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನೂತನವಾಗಿ ರೂಪಿಸಲು ಯೋಜಿಸಿರುವ ಕರ್ನಾಟಕ ನಾವೀನ್ಯತೆ ಪ್ರಾಧಿಕಾರದ ಅಂತಿಮ ನೀಲನಕ್ಷೆಯನ್ನು ಪರಿಶೀಲಿಸಿದ ಸಚಿವರು ಈಗಿನ ನಿಯಮಗಳಲ್ಲಿನ ಅಡೆತಡೆಗಳನ್ನು ನಿವಾರಿಸಲು, ಮಾರುಕಟ್ಟೆ ಮತ್ತು ಉತ್ಪನ್ನ ನಾವೀನ್ಯತೆಗಾಗಿ ಸುರಕ್ಷಿತ, ನಿಯಂತ್ರಿತ ಮಾರ್ಗವನ್ನು ರಚಿಸಲು ಪ್ರಾಧಿಕಾರವನ್ನು ನಿಯಂತ್ರಕ ಸ್ಯಾಂಡ್ ಬಾಕ್ಸ್ ಆಗಿ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಪ್ರಾಧಿಕಾರ ರಚನೆ ನಂತರ ನಾವೀನ್ಯತೆ ಚಿಂತನೆಯೊಂದಿಗೆ ಬರುವ ನವೋದ್ಯಮಗಳ ಉತ್ಪನ್ನ ಮತ್ತು ಸೇವೆಗಳನ್ನು ಸ್ಟ್ಯಾಂಡ್ ಬಾಕ್ಸ್ ಆಪರೇಟರುಗಳ ಪರಿವೀಕ್ಷಣೆಗೆ ಒಳಪಡಿಸಿ, ಅಗತ್ಯ ಬಂದಲ್ಲಿ ಕಾನೂನು ತಿದ್ದುಪಡಿ ಮುಖಾಂತರ ನವೋದ್ಯಮಗಳ ನಾವೀನ್ಯತೆಯನ್ನು ಮಾರುಕಟ್ಟೆ ತರಲು ಅವಕಾಶ ಮಾಡಿಕೊಡಲಾಗುವುದು.
#ಆಪರೇಟರುಗಳನ್ನು ಸ್ಥಾಪಿಸಲು ಅರ್ಜಿಗಳ ಆಹ್ವಾನ, ಅರ್ಜಿಗಳ ಪರಿಶೀಲನೆ ನಂತರ ಅನುಸರಣೆ ಮತ್ತು ಫಲಿತಾಂಶಗಳಿಗಾಗಿ ನಿಕಟ ಮೇಲ್ವಿಚಾರಣೆ, ಫಲಿತಾಂಶಗಳ ಆಧಾರದ ಮೇಲೆ ಯಶಸ್ವಿ ಪ್ರಯೋಗಗಳು ಸೂಕ್ತವಾದ ನಿರ್ಗಮನ ತಂತ್ರಗಳನ್ನು ಅನುಸರಣೆ ಮತ್ತು ಸರ್ಕಾರಕ್ಕೆ ನೀಡುವ ಶಿಫಾರಸುಗಳನ್ನು ಸಚಿವರು ವಿಶ್ಲೇಷಿಸಿದರು#
ಪ್ರಾಧಿಕಾರವನ್ನು ಪಾಲುದಾರರು, ಚಿಂತಕರ ಚಾವಡಿಗಳು ಮತ್ತು ಸಲಹೆಗಾರರೊಂದಿಗೆ ವ್ಯಾಪಕವಾದ ಸಮಾಲೋಚನೆಗಳ ಮೂಲಕ ಪರಿಕಲ್ಪನೆ ಮಾಡಲಾಗಿದೆ ಮತ್ತು ಜಪಾನ್, ಕೊರಿಯಾ ಮತ್ತು ಅಮೆರಿಕ ಅಂತಹ ದೇಶಗಳಿಂದ ಜಾಗತಿಕ ಅತ್ಯುತ್ತಮ ಮಾದರಿಗಳನ್ನು ಅನುಸರಿಸಿ ಮಾನದಂಡವನ್ನು ನಿಗದಿಪಡಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಭವಿಷ್ಯವನ್ನು ರೂಪಿಸುವ ದಿಟ್ಟ, ಪರಿವರ್ತನಾತ್ಮಕ ವಿಚಾರಗಳಿಗೆ ನಿಯಂತ್ರಕ ಅನಿಶ್ಚಿತತೆಯು ಅಡ್ಡಿಯಾಗಬಾರದು ಎಂಬ ನಂಬಿಕೆಯೊಂದಿಗೆ ನಾವು
ಪ್ರಾಧಿಕಾರವನ್ನು ಶೀಘ್ರದಲ್ಲೇ ಜಾರಿಗೆ ತರುತ್ತೇವೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.