ಅರಬ್ಬಿ ಸಮುದದಲ್ಲಿ ಮೀನುಗಾರಿಕೆಗೆ ತೆರಳಿದ ದೋಣಿ ಮಗುಚಿ ನಾಲ್ವರು ಮೀನುಗಾರರು ಸಮುದ್ರಪಾಲು ಆಗಿರುವ ಘಟನೆ ಬುದ್ದವಾರ ನೇಡದಿದ್ದೆ
ತೆಂಗಿನಗುಂಡಿಯ ಬಂದರನಿಂದ ಮಹಾಸತಿ ಗಿಲ್ ನೆಟ್ ದೋಣಿಯಲ್ಲಿ ಆರು ಜನರು ಮೀನುಗಾರಿಕೆ ತೆರಳಿದ್ದರು
ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಬಾರಿ ಗಾತ್ರದ ಅಲೆ ಒಂದು ದೋಣಿಗೆ ಅಪ್ಪಳಿದು ಅಲೆಯ ರಭಸಕ್ಕೆ ದೋಣಿ ಮಗುಚಿದ ಪರಿಣಾಮ ಆರು ಜನರು ನೀರಿಪಾಲಾಗಿದ್ದಾರೆ. ಮನೋಹರ ಈರಯ್ಯ ಮೊಗೇರ್ (40) ರಾಮ ಮಾಸ್ತ ಖಾರ್ವಿ ಎಂಬ ಇಬ್ಬರನ್ನೂ ರಕ್ಷಣೆ ಮಾಡಲಾಗಿದೆ.ಇನ್ನೂಳಿದ ನಾಲ್ಕು ಜನ ನಾಪತ್ತೆ ಆಗಿದ್ದಾರೆ.
ರಾಮಕೃಷ್ಣ ಮಂಜು ಮೊಗೇರ (೪೦)ಸತೀಶ ತಿಮ್ಮಪ್ಪ ಮೊಗೇರ ( ೩೦) ಗಣೇಶ ಮಂಜುನಾಥ ಮೊಗೇರ( ೨೬) ನಿಶ್ಚಿತ ಮೊಗೇರ (೩೦) ನಾಪತ್ತೆ ಆಗಿರುವ ಮೀನುಗಾರರು ಎಂದು ತಿಳಿದು ಬಂದಿದೆ.
ನಾಪತ್ತೆಯಾದವರಿಗೆ ಕರಾವಳಿ ಕಾವಲು ರಕ್ಷಣಾ ಪಡೆಯವರು,ಮೀನುಗಾರರು, ಪೋಲಿಸ ಇಲಾಖೆಯ ಸಿಬ್ಬಂದಿ ವರ್ಗದವರು ನಿರಂತರ ಹುಡುಕಾಟ ನೇಡಸುತ್ತಿದ್ದರು ಮೀನುಗಾರರ ಸುಳಿವೂ ಪತ್ತೆಯಾಗಿಲ್ಲ.