ಮುಖ್ಯಗುರುಗಳಿಗೆ ಗೌರವ ಸಮರ್ಪಣೆ

YDL NEWS
1 Min Read

ಲಿಂಗಸುಗೂರು: ತಾಲೂಕಿನಲ್ಲಿ ನಿವೃತ್ತ ಹೊಂದಿದ ಶಾಲಾ ಮುಖ್ಯಗುರುಗಳಿಗೆ ಗೌರ ಸಮರ್ಪಣೆಯನ್ನು ಆಗಸ್ಟ ಎರಡರಂದು ಕರಾಸಹಿ ಹಾಗೂ ಪಪ್ರಾಶಾಮು ಸಂಘದಿಂದ ಕಾರ್ಯಕ್ರಮ ಮಾಡುತಿದ್ದು ಈ ಕಾರ್ಯಕ್ರಮದಲ್ಲಿ ಎಲ್ಲಾ ತಾಲೂಕಿನ ಶಿಕ್ಷಕರು ಬಾಗವಹಿಸಬೇಕೆಂದು ಮನವಿ ಮಾಡಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಮಾಡಿದ ಕರಾಸಹಿ ಹಾಗೂ ಪಪ್ರಾಶಾಮು ಸಂಘದ ಅಧ್ಯಕ್ಷರಾದ ಅಮರಪ್ಪ ಸಾಲಿ ಅವರು ನಗರದ ಗುರುಭವನದಲ್ಲಿ ನಿವೃತ್ತ ಹೊಂದಿದವರಿಗೆ ಗೌರವ ಸಮರ್ಪಣೆ ಮತ್ತು ನೂತನವಾಗಿ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಎಲ್ಲಾ ತಾಲೂಕಿ ಶಿಕ್ಷಕಬಾಂದವರು ಹಾಜರಾಗಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮಾರುತಿ ಎಸ್, ಮಲ್ಲಪ್ಪ ನಗಾರಿ, ಹುಲಗಪ್ಪ ಮು.ಗು, ನಾಗೇಶ ಗುರುಗುಂಟಾ ಉಪಸ್ಥಿತರಿದ್ದರು

Share This Article