ಲಿಂಗಸುಗೂರ::ತಾಲೂಕಿನ ಸಜ್ಜಲಗುಡ್ಡ ಗ್ರಾಮದ ಬಿಸಿಎಂ ವಸತಿ ನಿಲಯ ಮಕ್ಕಳಿಗೆ ಸಿಗಬೇಕಾದ ಆಹಾರ ೧೧ ಚೀಲ ಅಕ್ಕಿ ಕಾಳಸಂತೆಗೆ ಮಾರಾಟ ಮಾಡುವುವಾಗ ರೈತ ಸಂಘ ಜಪ್ತಿ ಮಾಡಿದರು.
ಲಿಂಗಸುಗೂರ ಆಹಾರ ಗೋದಾಮಿನಿಂದ ಒಟ್ಟು ೩೨ ಚೀಲ ಅಕ್ಕಿ ಸಾಗಿಸಿ ವಸತಿ ನಿಲಯಕ್ಕೆ ಹೋಗು ಮಾರ್ಗದಲ್ಲಿ ಹೊಸೂರ ಗ್ರಾಮದಲ್ಲಿ ೧೧ ಚೀಲ ಅಕ್ಕಿಯನ್ನು ಕಾಳ ಸಂತೆಗೆ ಮರಾಟ ಮಾಡಿದ್ದು ಕಂಡುಬಂದಿದ್ದು ಉಳಿದ ೨೧ ಚೀಲ ಸಾಗಿಸುತ್ತಿದ್ದ ಟಿಪ್ಪರನ್ನು ಜಪ್ತಿ ಮಾಡಿದ ರೈತರು ಲಿಂಗಸುಗೂರ ಪೊಲೀಸ ಠಾಣೆಯ ವಶಕ್ಕೆ ಒಪ್ಪಿಸಿದ್ದಾರೆ , ಇದೇ ವಸತಿ ನಿಲಯದಲ್ಲಿ ಮೊದಲು ನಾಲ್ಕು ವರ್ಷ ಧರ್ಮದ ಹೆಸರಿನಲ್ಲಿ ಮಕ್ಕಳಿಗೆ ಮಾಂಸ ಹಾಗೂ ಮೊಟ್ಟೆ ನೀಡಿರಲ್ಲಿಲ್ಲ ಹಣ ಮಾತ್ರ ಪಡೆಯಲಾಗಿದೆ.