ವಿಚಾರಣೆಗೆ ಕರೆತಂದ ಯುವಕನನ್ನು ಠಾಣೆಯಲ್ಲಿ ವಿವಸ್ತ್ರಗೊಳಿಸಿದ ಆರೋಪದ ಬಗ್ಗೆ ತನಿಖೆ: ರಾಯಚೂರು ಎಸ್ಪಿ

YDL NEWS
1 Min Read

ರಾಯಚೂರು: ಲಿಂಗಸುಗೂರು ತಾಲೂಕಿನ ಮುದಗಲ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಕರೆತಂದ ಯುವಕನ್ನು ಪೊಲೀಸರು ಬಟ್ಟೆ ಬಿಚ್ಚಿಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ. ಹೇಳಿದ್ದಾರೆ.

 

ಮಾಧ್ಯಮದವರ ಜೊತೆ ಮಾತನಾಡಿದ ಎಸ್ಪಿ, ಠಾಣೆಯಲ್ಲಿ ಪೊಲೀಸರು ಬಟ್ಟೆ ಬಿಚ್ಚಿದ್ದಲ್ಲದೆ, ತನ್ನಿಂದ ಹಣ ಕಸಿದಿರುವುದಾಗಿ ಆರೋಪಿಸಿ ಅಮರೇಶ ಅಂಬಿಗೇರ ಎಂಬವರು ತನ್ನ ಕಚೇರಿಗೆ ಆಗಮಿಸಿ ದೂರಿದ್ದಾರೆ. ಈ ಬಗ್ಗೆ ಆರೋಪಿತ ಪೊಲೀಸರ ವಿರುದ್ಧ ವಿಚಾರಣೆ ಮಾಡಲಾಗುತ್ತಿದೆ. ತಪ್ಪಿತಸ್ಥರೆಂದು ಸಾಬೀತಾದರೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

 

ಠಾಣೆಯಲ್ಲಿ ಬಟ್ಟೆ ಬಿಚ್ಚಿಸಿರುವ ಬಗ್ಗೆ ಯಾವುದೇ ಫೋಟೊ, ವೀಡಿಯೋ ದಾಖಲೆಯನ್ನುದೂರುದಾರ ನೀಡಿಲ್ಲ. ಪೊಲೀಸರು ಆತನಿಂದ ಹಣ ಪಡೆಯಲು ಮೊಬೈಲ್ ನಲ್ಲಿ ಮಾತನಾಡಿದ್ದೆನ್ನಲಾದ ಆಡಿಯೋ, ಫೋನ್ ಪೇ ಸ್ಕ್ರೀನ್ ಶಾಟ್ ನೀಡಿದ್ದಾರೆ. ಅವುಗಳ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Share This Article